ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ ಆಶ್ರಯದಲ್ಲಿ ದಿ. ವೈಕುಂಠ ಹೆಬ್ಬಾರ್-ದಿ. ಅವಿನಾಶ ಹೆಬ್ಬಾರ್ ಸ್ಮರಣಾರ್ಥ ಹಿಂದುಸ್ಥಾನಿ ಸಿತಾರ್ ವಾದನ ಕಾರ್ಯಕ್ರಮ ಪಾರಿಜಾತ ಹೋಟೆಲ್ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಜರುಗಿತು.
ಖ್ಯಾತ ಯುವ ಪ್ರತಿಭೆಗಳಾದ ವಿಜಯ ಬಿ. ಗೊಣಹಲು ಸಿತಾರ್ನಲ್ಲಿ ಹಾಗೂ ಅವರ ಸಹೋದರ ಪುಟ್ಟರಾಜ ಬಿ. ಗೊಣಹಲು ತಬಲಾದಲ್ಲಿ ತಮ್ಮ ಅಪೂರ್ವ ಪಾಂಡಿತ್ಯದ ಮೂಲಕ ಉತ್ತಮ ಕಾರ್ಯಕ್ರಮ ನೀಡಿದರು.
ವಿಜಯ ಬಿ. ಗೊಣಹಲು ನಂದಾದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಗೀತ ಭಾರತಿ ಟ್ರಸ್ಟ್ನ ವಿಶ್ವಸ್ಥರಾದ ಎ.ಎಸ್.ಎನ್. ಹೆಬ್ಬಾರ್ ಅತಿಥಿಗಳನ್ನು ಗೌರವಿಸಿದರು. ಡಾ| ಎಚ್.ಆರ್. ಹೆಬ್ಬಾರ್ ದಿ. ವೈಕುಂಠ ಹೆಬ್ಬಾರ್-ದಿ. ಅವಿನಾಶ ಹೆಬ್ಬಾರ್ ಅವರು ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
ವಿಶ್ವಸ್ಥರಾದ ಡಾ| ಆದರ್ಶ ಹೆಬ್ಬಾರ್, ಸೀತಾರಾಮ ನಕ್ಕತ್ತಾಯ, ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥರಾದ ಕೆ. ಶಾಂತಾರಾಮ ಪ್ರಭು ಉಪಸ್ಥಿತರಿದ್ದರು. ವಿಶ್ವಸ್ಥರಾದ ಯು.ಎಸ್.ಶೆಣೈ ಸ್ವಾಗತಿಸಿದರು.
ಕಾರ್ಯದರ್ಶಿ ಕೆ. ನಾರಾಯಣ ಅತಿಥಿಗಳನ್ನು ಪರಿಚಯಿಸಿದರು. ವಿಶ್ವಸ್ಥರಾದ ಸುಪ್ರಸನ್ನ ನಕ್ಕತ್ತಾಯ ಕಲಾವಿದರಿಗೆ ಸ್ಮರಣಿಕೆ ನೀಡಿ ವಂದಿಸಿದರು.