

ಶ್ರೀನಿವಾಸಪುರ : ತಾಲೂಕಿನ ತಾಡಿಗೋಳ್ ಗ್ರಾಮಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ, ಉಪಾಧ್ಯಕ್ಷೆ ಕೆ.ಬಿ.ಪಲ್ಲವಿರವರ ಬಗ್ಗೆ ಶನಿವಾರ ಅವಿಶ್ವಾಸ ನಿರ್ಣಯದಲ್ಲಿ ಸಭೆಯಲ್ಲಿ ಒಟ್ಟು 19 ಸದಸ್ಯರ ಪೈಕಿ 13 ಸದಸ್ಯರು ಹಾಜರಾಗಿ, 6 ಜನ ಗೈರುಹಾಜರಾಗಿದ್ದರು. ಅಧ್ಯಕ್ಷೆ ಶ್ರೀಮತಿ, ಉಪಾಧ್ಯಕ್ಷೆ ಕೆ.ಬಿ.ಪಲ್ಲವಿ ರವರ ಕೈ ಎತ್ತುವದರ ಮೂಲಕ ಅವಿಶ್ವಾವನ್ನು ತೋರಿಸಿದ್ದು, ಈ ಮೂಲಕ ತಾಡಿಗೋಳ್ ಗ್ರಾಮಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ತೆರವು ಗೊಂಡಿದೆ ಎಂದು ಉಪ ವಿಭಾಗಧಿಕಾರಿ ಮೈತ್ರಿ ಘೋಷಣೆ ಮಾಡಲಾಗಿದೆ ಎಂದರು .
ಜಿಲ್ಲಾ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗುವುದು. ಅವರ ಚುನಾವಣೆಯ ಬಗ್ಗೆ ನಿರ್ಣಯಿಸಿ , 10 ದಿನಗಳ ಮುಂಚೆ ನೋಟಿಸ್ ಕೊಟ್ಟು, ಒಬ್ಬ ಚುನಾವಣಾಧಿಕಾರಿಯನ್ನ ನೇಮಿಸಿ ಅವರಿಂದ ಚುನಾವಣೆ ನಡೆಯಿಲಿದೆ ಎಂದರು.
ಪಿಡಿಒ ಗೋಪಾಲರೆಡ್ಡಿ, ಸಿಪಿಐ ಎಂ.ಬಿ.ಗೊರವನಕೊಳ್ಳ, ಪಿಎಸ್ಐ ಜಯರಾಮ್ ಹಾಗು ಎಫ್ಡಿಎ ಶ್ರೀನಿವಾಸ್ ಮುಖಂಡರು ಇದ್ದರು.