

ಉಡುಪಿ: ಬುಧವಾರ ಸಂಜೆ ಹೃದಯಾಘಾತದಿಂದ ನಿಧನರಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಪ್ರಧಾನ ಧರ್ಮಗುರು (ರೆಕ್ಟರ್) ವಂ| ವಲೇರಿಯನ್ ಮೆಂಡೊನ್ಸಾ ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಜುಲೈ 8 ರಂದು ಸೋಮವಾರ ಮಧ್ಯಾಹ್ನ 3.30ಕ್ಕೆ ಕ್ಯಾಥೆಡ್ರಲ್ ನಲ್ಲಿ ನಡೆಯಲಿದೆ.
ಮೃತರ ಪಾರ್ಥಿವ ಶರೀರವನ್ನು ಅಂದು ಮಧ್ಯಾಹ್ನ 12.00 ಗಂಟೆಗೆ ಕ್ಯಾಥೆಡ್ರಲ್ ಆವರಣಕ್ಕೆ ತಂದು 3.15 ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ 3.30ಕ್ಕೆ ಬಲಿಪೂಜೆಯೊಂದಿಗೆ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿವೆ ಎಂದು ಉಡುಪಿ ಧರ್ಮಪ್ರಾಂತ್ಯದ ಪ್ರಕಟಣೆ ತಿಳಿಸಿದೆ.
ಅತಿ|ವಂ|ಡೆನಿಸ್ ಡೆಸಾ, ಸಾರ್ವಜನಿಕ ಸಂಪರ್ಕಾಧಿಕಾರಿ, ಉಡುಪಿ ಧರ್ಮಪ್ರಾಂತ