

ಶ್ರೀನಿವಾಸಪುರ; ಪಟ್ಟಣದ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ವಿ.ನಾಗರಾಜು ರವರು ಬುಧವಾರ ಅಧಿಕಾರ ಸ್ವೀಕರಿಸಿದರು. ಚಿಕ್ಕಮಂಗಳೂರಿಗೆ ವಗಾವಣೆಯಾಗಿರುವ ವೈ.ಎನ್.ಸತ್ಯನಾರಾಯಣರವರನ್ನ ಬೀಳ್ಕೊಡಲಾಯಿತು. ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್, ಪುರಸಭೆ ಮಾಜಿ ಅಧ್ಯಕ್ಷ ಮುಕ್ತಿಯಾರ್, ಸದಸ್ಯರಾದ ತಜಮಲ್, ಆನಂದ್, ಮುಖಂಡ ಜಿ.ಆರ್.ಶ್ರೀನಿವಾಸ್ ಇದ್ದರು.