ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ,ಏ.30: ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ಮತ್ತು ರಾಜ್ಯದ ಯಡಿಯೂರಪ್ಪ ನೇತೃತ್ವದ ಸರ್ಕಾರಗಳ ಕರೋನಾ ಮಹಾಮಾರಿಯ 1ನೇ ಅಲೆಯ ಎಚ್ಚರಿಕೆ ಗಂಟೆಯ ಅನುಭವವಿದ್ದರೂ ಸಹ 2ನೇ ಅಲೆಯ ಭೀಕರತೆಯ ಬಗ್ಗೆ ಅರಿವಿದ್ದರೂ ಸಹ ಚುನಾವಣಾ ಪ್ರಚಾರ ಮತ್ತು ರ್ಯಾಲಿಗಳ ಮೇಲೆ ಕೇಂದ್ರೀಕೃತವಾಗಿ 2ನೇ ಅಲೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕೇಂದ್ರದ ಮಾಜಿ ಮಂತ್ರಿಗಳು ಹಾಗೂ ಎ.ಐ.ಸಿ.ಸಿ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಕೆ.ಹೆಚ್ ಮುನಿಯಪ್ಪ ರವರು ಆರೋಪಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2ನೇ ಅಲೆಯ ತೀವ್ರತೆ ದಿನೇದಿನೆ ಹೆಚ್ಚುತ್ತಿದ್ದು, ಪ್ರತಿದಿನ ದೇಶದಲ್ಲಿ 3.50 ಲಕ್ಷಕ್ಕೂ ಅಧಿಕ ಸೋಂಕು ತಗುಲಿ ಸುಮಾರು 2500-3000 ದಷ್ಟು ಪ್ರತಿದಿನ ಕರೋನಾಗೆ ಜನತೆ ಬಲಿಯಾಗುತ್ತಿದ್ದರೂ ದೇಶದ ಜನಕ್ಕೆ ಸರಿಯಾದ ಸಮಯಕ್ಕೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆಸ್ಪತ್ರೆಗೆ ತಲುಪಲು ಆಂಬ್ಯುಲೆನ್ಸ್ ಸಿಗದೆ, ಇವೆರಡೂ ಸಿಕ್ಕರೂ ಆಕ್ಸಿಜನ್ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿರುವವರೇ ಹೆಚ್ಚು. ಇಂತಹ ಕಠೋರ ಸಮಯದಲ್ಲಿ ಎರಡೂ ಬೇಜವಾಬ್ದಾರಿ ಸರ್ಕಾರಗಳು ತಜ್ಞರ ಸಮಿತಿ ವರದಿಯನ್ನು ಅನುಷ್ಟಾನಗೊಳಿಸದೆ ವೃತಾ ಸಭೆಗಳನ್ನು ಮಾಡಿಕೊಂಡು ಕರೋನಾ ತಡೆಯುವಂತಹ ಅಥವಾ ಅಂಬ್ಯುಲೆನ್ಸ್, ಬೆಡ್ ಮತ್ತು ಆಕ್ಸಿಜನ್ ವ್ಯವಸ್ಥೆ ಮಾಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಬಡ ಜನರ ಪ್ರಾಣದ ಜೊತೆ ಚಲ್ಲಾಟವಾಡುತ್ತಿರುವ ಬೇಜವಾಬ್ದಾರಿ ಸರ್ಕಾರಗಳು ಜನಗಳ ರಕ್ಷಣೆಗೆ ನಿಲ್ಲಬೇಕು. ಇಂತಹ ಭೀಕರ ಸಾಂಕ್ರಾಮಿಕ ರೋಗಗಳು ಬಂದಾಗ ಆಸ್ಪತ್ರೆಗಳು ಸಾಲುವುದಿಲ್ಲ. ದೇಶದ ಕಲ್ಯಾಣ ಮಂಠಪಗಳು, ಹಾಸ್ಟೆಲ್‍ಗಳನ್ನು ಆಕ್ಸಿಜನ್ ಬೆಡ್‍ಗಳನ್ನು ಮಾರ್ಪಡಿಸಿ ಜನತೆಯ ನರಳಾಟ ತಪ್ಪಿಸಿ ಎಲ್ಲಾ ಸೋಂಕಿತರಿಗೂ ಆಕ್ಸಿಜನ್ ಬೆಡ್ ಸಿಗುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಹಾಗೆಯೇ ಕೆ.ಹೆಚ್ ಮುನಿಯಪ್ಪ ರವರು ದೇಶದ ಮತ್ತು ರಾಜ್ಯದ ಜನತೆ ಕರೋನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮನೆಯಿಂದ ಆಚೆ ಬರುವಾಗ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಸ್ಯಾನಿಟೈಜರ್, ಹ್ಯಾಂಡ್‍ವಾಷ್‍ನಿಂದ ಆಗಾಗೆ ಕೈಗೊಳ್ಳನ್ನು ತೊಳೆದುಕೊಂಡು ಸ್ವಚ್ಚತೆಯನ್ನು ಕಾಪಾಡಬೇಕು. ಅನಗತ್ಯವಾಗಿ ಮನೆಯಿಂದ ಆಚೆ ಬರಬಾರದು ಹಾಗೂ ಅಕ್ಕಪಕ್ಕದ ಮನೆಗಳಿಗೆ ಬೇಟಿ ಕೊಡುವುದನ್ನು ಸಹ ನಿಲ್ಲಿಸಿ ಕರೋನಾ ಮಹಾಮಾರಿಯಿಂದ ಪಾರಾಗಬೇಕೆಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಸ್ಪತ್ರೆಗಳ ಕೊರತೆಯಿದೆ. ಬೆಡ್‍ಗಳ ಕೊರತೆಯಿದೆ. ಆಕ್ಸಿಜನ್ ಕೊರತೆಯಿದೆ ಎಂದು ತಿಳಿದಿದ್ದು, ರಾಜ್ಯದ, ದೇಶದ ಕಲ್ಯಾಣಮಂಠಪಗಳು ಸಮುದಾಯ ಭವನಗಳು, ಹಾಸ್ಟೆಲ್‍ಗಳನ್ನು ಆಕ್ಸಿಜನ್ ವೆಂಟಿಲೇಟರ್ ಬೆಡ್‍ಗಳನ್ನು ಅಳವಡಿಸಿ ಜನತೆಯ ಪ್ರಾಣ ರಕ್ಷಿಸದೇ ಬಂಡಾಟವಾಡುವುದನ್ನು ಬಿಟ್ಟು, ಈ ಕೊಡಲೇ ಜನತೆಯ ಆರೋಗ್ಯ ರಕ್ಷಣೆಗೆ ಸನ್ನದ್ಧವಾಗಬೇಕೆಂದು ಒತ್ತಾಯಿಸಿದ್ದಾರೆ.
ಹಾಗೆಯೇ ಜಿಲ್ಲಾಡಳಿತ ತಾವೂ ಸಹ ಕಲ್ಯಾಣ ಮಂಠಪಗಳನ್ನು ಮತ್ತು ಹಾಸ್ಟೆಲ್‍ಗಳಲ್ಲಿ ವೆಂಟಿಲೇಟರ್, ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಿ ಕರೋನಾ ಮಾರಿ ಸಾಂಕ್ರಾಮಿಕ ರೋಗವನ್ನು ತಡೆದು ಬಡ ಜನತೆಯ ಪಾಣ್ರ ರಕ್ಷಿಸಬೇಕೆಂದು ಮನವಿ ಮಾಡಿದ್ದಾರೆ.