ಕುಂದಾಪುರ,ದಿನಾಂಕ:25.09.2024 ರಂದು ನಗರದ ಸೈ0ಟ್ ಮೇರಿಸ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಸೂಸಲು “ಉತ್ಕರ್ಷ -2024″ಎನ್ನುವ ಹೆಸರಿನಿಂದ ವೇದಿಕೆ ಸಜ್ಜುಗೊಳಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಮೇರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕರು ಹಾಗೂ ಕುಂದಾಪುರ ಚರ್ಚಿನ ಪ್ರಧಾನ ಧರ್ಮ ಗುರುಗಳಾಗಿರುವ ಅತೀ ವಂದನೀಯ ಫಾದರ್ ಪಾವ್ಲ್ ರೇಗೊರವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ, ‘ಪ್ರತಿಭೆ ಎಲ್ಲರಲ್ಲೂ ಇದೆ. ಸರಿಯಾದ ವೇದಿಕೆ ಸಿಕ್ಕಾಗ ಬಳಸಿ ಕೊಳ್ಳಬೇಕು ಎನ್ನುತ್ತಾ ಎಲ್ಲರೂ ತಮ್ಮತಮ್ಮಲ್ಲಿಯ ಪ್ರತಿಭೆಯನ್ನು ಸರಿಯಾಗಿ ತೋರ್ಪಡಿಸಿಕೊಳ್ಳಬೇಕು’ ಎಂದು ಹೇಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ವಿದ್ಯಾರ್ಥಿಗಳನ್ನು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಕುಂದಾಪುರದ “ಪಾಯ್ಸ್ ಮೆಟಲ್” ನ ಮಾಲಕರು ಹಾಗೂ ಡೌನ್ ಟೌನ್ ಎಸ್ಟೇಟ್ ನ ಪಾಲುಧಾರರು, ಉದ್ಯಮಿಗಳು ಆದ ಸಂತೋಷ ಪಾಯ್ಸ್ ರವರು ಉಪಸ್ಥಿತರಿದ್ದು, ಥ್ರೋ ಬಾಲ್ ಪಂದ್ಯಾಟದಲ್ಲಿ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ತೀರ್ಪುಗಾರಾಗಿ ಆಗಮಿಸಿ ನಿಷ್ಪಕ್ಷಪಾತವಾದ ತೀರ್ಪುನ್ನು ನೀಡಿ ಸಹರಿಸಿದವರು ಪಿ.ಎಂ. ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಟ್ಟೆ ಇಲ್ಲಿಯ ಪ್ರತಿಭಾನ್ವಿತ ಶಿಕ್ಷಕರು ಹಾಗೂ ನಲಿ -ಕಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಪಾರ್ವತಿ ಕೊತ್ವಾಲ್ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿ, ಉತ್ತಮ ನಿರೂಪಕ, ಯುವ ಉದ್ಯಮಿ ಜೋಯ್ಸ್ಟನ್ ಡಿಸೋಜ ರವರು.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಪಾರ್ವತಿ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಉತ್ತಮ ರೀತಿಯ ಪ್ರತಿಭೆ ನಿಮ್ಮಲ್ಲಿದೆ, ಎಲ್ಲರೂ ನಿಪುಣರೇ ಎನ್ನುತ್ತಾ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ಇನ್ನೊರ್ವ ತೀರ್ಪುಗಾರರಾದ ಜೋಯ್ಸ್ಟನ್ ರವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ. ತನ್ನ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತಾ ಈ ಸಂಸ್ಥೆಗೆ ಅಧ್ಯಾಪಕವೃಂದಕ್ಕೆ ತಾನು ಚಿರಋಣಿ ಎನ್ನುತ್ತಾ ನೀವೆಲ್ಲ ವಿದ್ಯಾರ್ಥಿ ಜೀವನ ಸದುಪಯೋಗಪಡಿಸಿಕೊಳ್ಳಿ’ ಹೇಳಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಷ್ಮಾ ಫೇರ್ನಾಂಡೀಸ್, ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕಿ ಸುಷ್ಮಾ ಧನ್ಯವಾದ ಸಮರ್ಪಿಸಿದರು. ಪ್ರಾಂಶುಪಾಲರು ವಿದ್ಯಾರ್ಥಿಗಳ ತಂಡಗಳಾದ ರೂಬಿ, ಸಫಾಯರ್, ಪರ್ಲ್, ಟೋಪಾಜ್ ಇವರಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ಸಮಾಧಾನಕರ ವಿಜೇತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿಗಳ ಪ್ರಾಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಉಪನ್ಯಾಸಕ ನಾಗರಾಜ ಶೆಟ್ಟಿ ಸ್ವಾಗತಿಸಿ ಉಪನ್ಯಾಸಕಿ ಶರ್ಮಿಳಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.