ಕೋಲಾರ:- ಕೇಂದ್ರ ಸಚಿವರಾದ ನಿರ್ಮಾಲ ಸೀತಾರಾಮನ್ ಅವರು ಶುಕ್ರವಾರ ಕೋಲಾರ ಜಿಲ್ಲೆಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಅಮೃತಯೋಜನಾ ಅಡಿಯಲ್ಲಿ 75 ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಲಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ನಗರದ ಒಳಕ್ರೀಡಾಂಗಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂ.ಪಿ.ಆರ್.ಎಲ್.ಡಿ. ಅನುಧಾನದಲ್ಲಿ 1.83 ಕೋಟಿ ರೂ, ಸಿ.ಎಸ್.ಆರ್. ಅನುದಾನದಲ್ಲಿ 9.40 ಕೋಟಿ ರೂ ಸೇರಿದಂತೆ 11.23 ಕೋಟಿ ರೂಗಳ ವೆಚ್ಚದಲ್ಲಿ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರಗಳಲ್ಲಿ ಕೆರೆಗಳ ಅಭಿವೃದ್ದಿ ಪಡೆಸಿರುವುದನ್ನು ವೀಕ್ಷಿಸಲು ಆಗಮಿಸಿತ್ತಿರುವರು ಎಂದು ಹೇಳಿದರು.
ಬಂಗಾರಪೇಟೆ, ಬೇತಮಂಗಲ ಹಾಗೂ ಕೋಲಾರ ವ್ಯಾಪ್ತಿಯಲ್ಲಿನ ಪ್ರಮುಖ ಕೆರೆಗಳನ್ನು ವೀಕ್ಷಿಸಲಿದ್ದಾರೆ. ರಾಮಸಂದ್ರ, ಬಂಗಾರಪೇಟೆ, ಕಮ್ಮಸಂದ್ರ, ಸೋಲಿಕೋಟೆ, ಪಾರ್ಶಗಾನಹಳ್ಳಿ,ಕೋಲಾರದ ಎ.ಪಿ.ಎಂ.ಸಿ. ಮೂಲಕ ಪ್ರವಾಸಿ ಮಂದಿರಕ್ಕೆ ಅಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಮಾರ್ಗದ ಮೂಲಕ ಸ್ಯಾನಿಟೋರಿಯಮ್‍ವರೆಗೆ ರಸ್ತೆ ಮಾರ್ಗದಲ್ಲಿ ವಾಹನಗಳ ಅಡಚಣೆ ಇರದಂತೆ ಸ್ವಚ್ಚತೆ ಕಾಪಾಡಲು ಸಂಬಂಧ ಪಟ್ಟ ಅಧಿಕಾರಿಗಳಾದ ಎ.ಪಿ.ಎಂ.ಸಿ. ನಗರಸಭೆ ಪೌರಾಯುಕ್ತರಿಗೆ ಹಾಗೂ ನಗರ ಪೊಲೀಸ್ ಠಾಣೆಯ ಸಿ.ಪಿ.ಐ. ಸುರೇಶ್ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಯಾವ,ಯಾವ ಕೆರೆ ವೀಕ್ಷಿಸಲಿದ್ದಾರೋ ಆ ಭಾಗದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದು ವಿವರಗಳನ್ನು ನೀಡಲು ಜಿಲ್ಲಾ ಪಂಚಾಯತ್ ಸಿ.ಇ.ಓ ಯುಕೇಶ್ ಕುಮಾರ್ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ. ಹರೀಶ್, ಪೌರಾಯುಕ್ತೆ ಸುಮ, ಡಿ.ಹೆಚ್.ಓ. ಡಾ. ಜಗಧೀಶ್, ಪಿ.ಯು. ಉಪನಿರ್ದೇಶಕ ರಾಮಚಂದ್ರ, ಎ.ಪಿ.ಎಂ.ಸಿ. ಅಧಿಕಾರಿ ವಿಶ್ವನಾಥ್, ಮುಖಂಡರಾದ ಅಪ್ಪಿನಾರಾಯಣಸ್ವಾಮಿ, ಮು.ರಾಘುವೇಂದ್ರ, ಮಂಜುನಾಥ್, ಮಮತಮ್ಮ, ರೈತ ಸಂಘದ ಕಲ್ಮಂಜಲಿ ಶಿವಕುಮಾರ್ ಮುಂತಾದವರು ಹಾಜರಿದ್ದರು.