ವಿದ್ಯಾರ್ಥಿಗಳಿಗೆ ಏಕರೂಪ ಸಮವಸ್ತ್ರ – ಲಿಂಗ ಸಮಾನತೆಯತ್ತ ಕೇರಳ ಶಾಲೆಗಳು

JANANUDI.COM NETWORK


ಕೋಝಿಕ್ಕೋಡ್ : ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬಲುಸ್ಸೆರಿ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯು ತನ್ನ 11ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಮಾನವಾದ ಸಮವಸ್ತ್ರವನ್ನು ಜಾರಿಗೊಳಿಸಿ ಲಿಂಗ ತಾರತಮ್ಯಕ್ಕೆ ಬ್ರೇಕ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಈ ಸರಕಾರಿ ಶಾಲೆಯಲ್ಲಿ ಬಾಲಕಿಯರು ಹಾಗೂ ಹುಡುಗರು ಬುಧವಾರದಿಂದ ನೀಲಿಬಣ್ಣದ ಪ್ಯಾಂಟ್ ಹಾಗೂ ಪಟ್ಟಿಗಳಿರುವ ಬಿಳಿ ಶಟ್ರ್ಗಳನ್ನು ಧರಿಸುತ್ತಿದ್ದಾರೆ. ಸಮಾನವಾದ ಸಮವಸ್ತ್ರಕ್ಕೆ ಸಂತಸ ವ್ಯಕ್ತ ಪಡಿಸಿರುವ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿ, ಆ ಫೆÇೀಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಈ ಶಾಲೆಯ 200ಕ್ಕೂ ಅಧಿಕ ಬಾಲಕಿಯರು ಹಾಗೂ 60 ಬಾಲಕರು ಇಂತಹ ಸಮವಸ್ತ್ರ ಧರಿಸುತ್ತಾರೆ.
ಇದಕ್ಕೂ ಮುನ್ನ ಈ ಶಾಲೆಯದಲ್ಲಿ ಬಾಲಕಿಯರು ಸಲ್ವಾರ್-ಕಮೀಝ್ ಅಥವಾ ಸ್ಕರ್ಟ್ ಹಾಗೂ ಶರ್ಟ್ ಅನ್ನು ಸಮವಸ್ತ್ರವಾಗಿ ಧರಿಸುತ್ತಿದ್ದರು. ಈಗ ಬಾಲಕರಂತ್ತೆ ಪ್ಯಾಂಟ್ ಮತ್ತು ಶರ್ಟ್ ಧರಿಸುತ್ತಾರೆ.
ಈ ಹಿರಿಯ ಸರಕಾರಿ ಮಾಧ್ಯಮಿಕ ಶಾಲೆಯೊಂದು ಲಿಂಗಭೇದವಿಲ್ಲದೆ ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಸಮವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿರುವುದು ಇದೇ ಮೊದಲ ಸಲವಾಗಿದ್ದು ಇದೊಂದು ಮಹತ್ವದ ನಿರ್ಧಾರವಾಗಿದೆ. ಈ ಮೊದಲು ಕೇರಳದ ಕೆಲವು ಸರಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಮಾನಸಮವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿತ್ತು.
ಎರ್ನಾಕುಲಂ ಸಮೀಪದ ವಲಯನ್ಚಿರಂಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ರಾಜ್ಯದಲ್ಲಿ ತನ್ನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಮಾನ ಸಮವಸ್ತ್ರವನ್ನು ಜಾರಿಗೆ ತಂದ ಕೇರಳದ ಪ್ರಪ್ರಥಮ ಸರಕಾರಿ ಶಾಲೆಯಾಗಿದೆ.
ಅನೇಕ ಮಹಿಳಾ ಸಂಘಟನೆಗಳು ಹೊಸ ಉಪಕ್ರಮವನ್ನು ಶ್ಲಾಘಿಸಿವೆ ಮತ್ತು ಇದು ಲಿಂಗ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಆದರೆ ಕೆಲವೊಂದು ಮತೀಯ ಸಂಘಟನೆಗಳು ವಿರೋಧಿಸುತ್ತಿವೆ. ಸಣ್ಣ ಸಣ್ಣ ಪ್ರತಿಭಟನೆಗಳನ್ನು ನಡೆಸುತ್ತಿವೆ.
ಶಾಲೆಯ ಹೊಸ ಲಿಂಗ ಸಮವಸ್ತ್ರವನ್ನು ಉದ್ಘಾಟಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವೆ ಪೆÇ್ರ.ಆರ್.ಬಿಂದು, ‘ಅಂತಹ ಕ್ರಮಗಳನ್ನು ವಿರೋಧಿಸುವವರು ಕೇರಳ ಮತ್ತು ಅದರ ಭವಿಷ್ಯದ ಪೀಳಿಗೆಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ‘ಲಿಂಗ ನ್ಯಾಯ ಮತ್ತು ಸಮಾನತೆಯ ಯುಗಕ್ಕೆ ಜಗತ್ತು ನಾಂದಿ ಹಾಡುತ್ತಿರುವ ಈ ಸಮಯದಲ್ಲಿ ಬಾಲುಸ್ಸೆರಿ ಸರಕಾರಿ ಬಾಲಕಿಯರ ಶಾಲೆ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ಶಾಲೆಯ ಹೊಸ ಯುನಿಸೆಕ್ಸ್ ಸಮವಸ್ತ್ರವನ್ನು ಅಧಿಕೃತವಾಗಿ ಉದ್ಘಾಟಿಸಿರುವುದು ನನಗೆ ಸಂತೋಷ ತಂದಿದೆ, ಇದನ್ನು ವಿದ್ಯಾರ್ಥಿಗಳು ಬಹಿರಂಗವಾಗಿ ಸ್ವಾಗತಿಸಿದ್ದಾರೆ. ಎಂದು ಅವರು ತಿಳಿಸಿದರು.