ನಿರುಧ್ಯೋಗಿಗಳು ಸ್ವಾವಲಂಬಿಯಾಗಿ ಜೀವನ ರೂಪಿಸಿಕೊಳ್ಳಲು ಉಧ್ಯೋಗದ ಮಾಹಿತಿಯನ್ನು ಪಡೆಯಬೇಕು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕಲಿಕಾ ವಿದ್ಯಾವಂತ ನಿರುಧ್ಯೋಗ ಎಲ್ಲಾ ಯುವಕ-ಯುವತಿಯರು ಸ್ವಾವಲಂಬಿಯಾಗಿ ಜೀವನ ರೂಪಿಸಿಕೊಳ್ಳಲು ಉಧ್ಯೋಗದ ಮಾಹಿತಿಯನ್ನು ಸಂಪೂರ್ಣವಾಗಿ ಪಡೆಯಬೇಕು, ನಂತರ ಬರುವ ಉಧ್ಯೋಗಾವಕಾಶಗಳನ್ನು ಬಳಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಪಿಚ್ಚಯ್ಯ ರಾಪುರಿ ತಿಳಿಸಿದರು.
ಪಟ್ಟಣದ ಕೆ.ಐ.ಐ.ಟಿ ಕಂಪ್ಯೂಟರ್ ಸಂಸ್ಥೆಯಲ್ಲಿ, ಕೌಶಲ್ಯಾಭಿವೃದ್ದಿ ಉಧ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉಧ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ ಕೋಲಾರ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 3 ದಿನಗಳ ಉಧ್ಯಮಶೀಲತಾ ಪ್ರೇರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಿಚ್ಚಯ್ಯ ರಾಪುರಿ, ಕಳೆದ 45 ದಿನಗಳಿಂದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಅಕೌಂಟ್ಸ್ ಪೇಯಬಲ್ ಮತ್ತು ರಿಸೀವಬಲ್ ಕಂಪ್ಯೂಟರ್ ತರಬೇತಿಯನ್ನು ಪಡೆದ ನಂತರ ಇಂದಿನ ಯುವ ಪೀಳಿಗೆ ಸರ್ಕಾರಿ ಉಧ್ಯೋಗವನ್ನೇ ಅವಲಂಬಿಸದೆ ಸ್ವಾವಲಂಬಿಯಾಗಿ ಬದುಕಲು ಇಂತಹ ತರಬೇತಿಗಳನ್ನು ಪಡೆದುಕೊಂಡು ಸಮಾಜದಲ್ಲಿ ಮುಂದೆ ಬರಬೇಕು.
ಹೊಸ ಉಧ್ಯಮಗಳ ಸ್ಥಾಪನೆಗೆ ಈ ಅವಕಾಶಗಳು, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರಧಿ, ಲೆಕ್ಕ ಪತ್ರಗಳ ನಿರ್ವಹಣೆ, ಮಾರಾಟದ ತಂತ್ರಗಳು ಬ್ಯಾಂಕಿನಿಂದ ಸಾಲ ಪಡೆಯಬೇಕಾದರೆ ಅನುಸರಿಸಬೇಕಾದ ಕ್ರಮಗಳು ಹಾಗೂ ಸರ್ಕಾರದವಿವಿಧ ಸಹಾಯಧನ ಯೋಜನೆಗಳಲ್ಲಿ ಬ್ಯಾಂಕುಗಳ ಪಾತ್ರದ ಬಗ್ಗೆ ವಿವರವಾಗಿ ತಿಳಿಸುತ್ತಾ, ಕೇಂದ್ರÀ ಮತ್ತು ರಾಜ್ಯ ಸರ್ಕಾರದ ಯುವ ಜನಾಂಗಕ್ಕೆ ಸ್ವಾವಲಂಬಿ ಜೀವನ ನಡೆಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ, ಇಂದು ನೀವು ಉದ್ಯಮರಾಗಬೇಕೆಂಬ ಹಂಬಲದಿಂದ ತರಬೇತಿ ಪಡೆಯಲು ಆಗಮಿಸಿರುವ ನಿಮಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಉಧ್ಯಮ ಶೀಲದಲ್ಲಿ ಎದುರಿಸಬೇಕಾದ ಪ್ರಮುಖ ವಿಚಾರಗಳ ಬಗ್ಗೆ 3 ದಿನಗಳ ಕಾಲ ತರಬೇತಿ ನೀಡಲಿದ್ದು, ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಸದುಪಯೋಗ ಪಡಿಸಬೇಕೆಂದು ತಿಳಿಸಿದರು.
ಸಂಸ್ಥೆಯ ಕೇಂದ್ರ ನಿರ್ದೇಶಕರಾದ ಎನ್. ಕೃಷ್ಣಮೂರ್ತಿ ಮಾತನಾಡಿ, ಸರ್ಕಾರದಿಂದ ಕಳೆದ 45 ದಿನಗಳಿಂದ ಉಚಿತವಾಗಿ ಕಂಪ್ಯೂಟರ್ ತರಬೇತಿ ಪಡೆದ ನೀವು, ಉಚಿತವಾಗಿ ತರಬೇತಿಯನ್ನು ಪಡೆದಿದ್ದೇನೆ ಎಂಬಮನೋಬಾವನೆಯನ್ನು ಬಿಟ್ಟು ತರಬೇತಿ ಪಡೆದ ನಂತರ ಸ್ವಾವಲಂಬಿ ಜೀವನ ನಡೆಸಲು, ಸರ್ಕಾರಿ ಉಧ್ಯೋಗವನ್ನೇ ಅವಲಂಬಿಸದೆ ಸ್ವಂತ ಉಧ್ಯೋಗವನ್ನು ಮಾಡುವುದರೊಂದಿಗೆ ನೀವುಗಳು ಇನ್ನೂ ಹಲವಾರು ಯುವ ಜನಾಂಗಕ್ಕೆ ಕೆಲಸವನ್ನು ನೀಡುವುದರ ಮುಖಾಂತರ ಪ್ರೇರಣೆಯಾಗಬೇಕು, ದೇಶ ಆರ್ಥಿಕವಾಗಿ ಸದೃಢವಾಗಲು ನಾವೇ ಉಧ್ಯೋಗವನ್ನು ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಬೇಕೆಂದು ಶಿಭಿರಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಾಫ್ಟ್ ಸ್ಕಿಲ್ ತರಬೇತುದಾರ ಸ್ಟಾರ್ ವೆಂಕಟೇಶ್ ಹಾಗೂ ಎ.ಡಿ.ಎಸ್.ಡಿ.ಒ. ನಂದನ್ ಮಾತನಾಡಿದರು.
ಇದೆ ಸಂದರ್ಭದಲ್ಲಿ ಕೇಂದ್ರ ವ್ಯವಸ್ಥಾಪಕರಾದ ಆರ್. ರಾಧ, ಸಿಡಾಕ್ ಕಚೇರಿಯ ತರಬೇತಿದಾರ ಆರ್. ಕಲ್ಯಾಣ್ ಕುಮಾರ್ ಹಾಗೂ ತರಬೇತಿಯ ಶಿರಾರ್ಥಿಗಳು ಹಾಜರಿದ್ದರು.