ಬಳ್ಳಾರಿ:ನಗರದ ಕಂಬಳಿ ಬಜಾರ್ ನಲ್ಲಿ ದಾಖಲೆ ರಹಿತ 5 ಕೋಟಿ 60 ಲಕ್ಷ ಹಣ ಕೇಜಿಗಟ್ಟಲೆ ಚಿನ್ನಾಭರಣ ಮೂಟೆಗಟ್ಟಲೇ ಬೆಳ್ಳಿಯನ್ನು ಚುನಾವಣಾ ಅಧಿಕಾರಿ ವಶಪಡಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಹಣ ಸೀರೆ ಬೆಳ್ಳಿ ಬಂಗಾರ ಸಾಗಿಸಲು ಯತ್ನಿಸುತ್ತಾರೆ.ಇಂತಹ ಆಕ್ರಮಗಳನ್ನು ತಡೆಯಲು ಆಯಾ ಜಿಲ್ಲಾಧಿಕಾರಿಗಳು ಜಿಲ್ಲಾ ಪೋಲಿಸ್ ಪರಿಷ್ಠಧಿಕಾರಿಗಳು ಹಲವಾರು ಕಡೆ ಚೆಕ್ ಪೋಸ್ಟ್ ತೆರೆದು ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಿ ಬಿಡಲಾಗುತ್ತದೆ. ಈ ವೇಳೆ ಯಾವುದೇ ದಾಖಲೆಯಿಲ್ಲದ ಅಧಿಕ ಮೊತ್ತದ ನಗದು ಹಾಗೂ ಇನ್ನಿತರೆ ವಸ್ತುಗಳನ್ನು ಸಾಗಿಸುತ್ತಿದ್ದರೆ ಪೋಲಿಸರು ಯಾವುದೇ ಮುಲಾಜಿಗೆ ಒಳಗಾಗದೇ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳುತ್ತಾರೆ.
ಈ ರೀತಿ ಚೆಕ್ ಪೋಸ್ಟ್ ನಲ್ಲಿ ವಾಹನವನ್ನು ತಪಾಸಣೆ ಮಾಡುವಾಗ ಹೇಮಾ ಜ್ಯುವೆಲರ್ಸ್ ಮಾಲೀಕ ನರೇಶ್ ಸೋನಿ ಎನ್ನುವ ವ್ಯಕ್ತಿಗೆ ಸೇರಿದ ನಗದು ದಾಖಲೆ ರಹಿತ ಸಾಗಿಸುತ್ತಿದ್ದ 5 ಕೋಟಿ 60 ಲಕ್ಷ ನಗದನ್ನು ಚುನಾವಣಾ ಆಯೋಗದ (Election Commission) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ
ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ವೇಳೆ 5 ಕೋಟಿ ನಗದು ಮಾತ್ರವಲ್ಲದೆ 3 ಕೆ.ಜಿ ಚಿನ್ನ, 68 ಕೆ.ಜಿ ಬೆಳ್ಳಿ ಗಟ್ಟಿ, 103 ಕೆ.ಜಿ ಬೆಳ್ಳಿ ಆಭರಣಗಳನ್ನು ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದೆ