ಜಿಲ್ಲಾಧಿಕಾರಿ ಅಕ್ರಂಪಾಷಾ ಅಧ್ಯಕ್ಷತೆಯಲ್ಲಿ ಕೋಲಾರ ಜಿಲ್ಲಾ ಕೌಶಲ್ಯ ಸಮಿತಿ ಸಭೆಕೌಶಲ್ಯ ತರಬೇತಿ;ಮಾನವ ಸಂಪನ್ಮೂಲ ಅಭಿವೃದ್ದಿಗೆ ಶ್ರಮಿಸುವಂತೆ ಕರೆ

ಕೋಲಾರ:- ಜಿಲ್ಲೆಯ ಕೌಶಲ್ಯ ಅಭಿವೃಧ್ಧಿ ಚಟುವಟಿಕೆಗಳ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳ ಕೌಶಲ್ಯ ಚಟುವಟಿಕೆಗಳ ಸಮನ್ವಯತೆ ಅಗತ್ಯವಾಗಿದ್ದು, ಹೆಚ್ಚಿನ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಉತ್ತಮ ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸಲು ಎಲ್ಲರೂ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‍ಶಿಪ್ ಹಾಗೂ ಉದ್ಯೋಗ ಮೇಳಗಳನ್ನು ಆಯೋಜಿಸಿ ಉದ್ಯೋಗ ಅವಕಾಶ ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ತರಬೇತಿ ಕೇಂದ್ರದವರು ಜಿಲ್ಲೆಗೆ ಅಗತ್ಯವಾದ ಗುಣಮಟ್ಟದ ತರಬೇತಿ ಆಯೋಜಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ವತಿಯಿಂದ ಜಂಟಿಯಾಗಿ ತಾಲ್ಲೂಕು ಮಟ್ಟದಲ್ಲಿ ಕೌಶಲ್ಯ ತರಬೇತಿ ಆಯೋಜಿಸುವಂತೆ ಸೂಚಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ಆರ್‍ಸೆಟಿ ನಿರ್ದೇಶಕರಿಗೆ ಹೊನ್ನೇನಹಳ್ಳಿ ತರಬೇತಿ ಕೇಂದ್ರದ ಸಾಮಥ್ರ್ಯ ಹೆಚ್ಚಿಸುವಂತೆ ಸೂಚಿಸಿದರು. ದೀನ್ ದಯಾಳ್ ಅಂತ್ಯೋದಯ ಯೋಜನೆ ಕುರಿತು ಎಲ್ಲಾ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಶೇ. 100 ರ ಸಾಧನೆ ಮಾಡಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.ಎರಡು ಗಂಟೆಗಳಿಗೂ ಹೆಚ್ಚಿನ ಸುಧೀರ್ಘ ಕಾಲವಧಿಯ ಸಭೆಯಲ್ಲಿ ಜಿಲ್ಲೆಯ ಸಮಗ್ರ ಕೌಶಲ್ಯ ಅಭಿವೃದ್ಧಿಗೆ ಭಾಗವಹಿಸಿದ ಎಲ್ಲಾ ಅಧಿಕಾರಿಗಳ ಸಲಹೆಯನ್ನು ಪಡೆದುಕೊಂಡರು.

ಕೌಶಲ್ಯ ಕೊರತೆಯ ನೀಗಿಸಲು ಕ್ರಮ

ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್, ಜಿಲ್ಲೆ ಕೌಶಲ್ಯ ಸಮಿತಿಯ ಪ್ರಮುಖ ಕಾರ್ಯಗಳು, ಸಿಎಂಕೆಕೆವೈ ಹಾಗೂ ಪಿಎಂಕೆವಿವೈ ಯೋಜನೆಗಳ ಪ್ರಗತಿ, ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕೌಶಲ್ಯ ಕೊರತೆ ನಿವಾರಿಸಲು ಆಯೋಜಿಸಬಹುದಾದ ತರಬೇತಿಗಳು, ಜಿಲ್ಲೆಯ ಕೈಗಾರಿಕಾ ತರಬೇತಿ ಸಂಸ್ಥೆಗಳು, ಜಿಟಿಟಿಸಿ ತರಬೇತಿ ಸಂಸ್ಥೆಯ ವಿವಿಧ ಚಟುವಟಿಕೆಗಳ ಕುರಿತು ಸಭೆಯಲ್ಲಿ ವಿವರಿಸಿದರು.
ಜಿಲ್ಲೆಯ ಕೌಶಲ್ಯ ಇಲಾಖೆ ಮೂಲಕ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿರುವವರಿಗೆ ಹಾಗೂ ಮ್ಯಾನುಯಲ್ ಸ್ಕಾವೇಂಜರ್‍ಗಲವರಿಗೆ ಆಯೋಜಿಸಲಾಗುವ ತರಬೇತಿ ಕುರಿತು ಹಾಗೂ ಕಲಿಕೆ ಜೊತೆ ಕೌಶಲ್ಯ ಯೋಜನೆಯ ಕುರಿತು ಸಭೆಗೆ ವಿವರಿಸಿದರು.
ನಂತರ ಜಿಲ್ಲಾ ಕೌಶಲ್ಯ ಉಪಸಮಿತಿಗಳಾದ ಅಭ್ಯರ್ಥಿಗಳ ಕ್ರೂಢೀಕರಣ ಮತ್ತು ಸಮಾಲೋಚನೆ ಉಪಸಮಿತಿ, ತರಬೇತಿ ಗುಣಮಟ್ಟ ಉಪಸಮಿತಿ, ಕೈಗಾರಿಕೆಗಳ ಇಂಟರ್‍ಫೇಸ್ ಉಪಸಮಿತಿ, ಸ್ವಯಂ ಉದ್ಯೋಗ ಉಪಸಮಿತಿ, ಗ್ರಾಮ ಪಂಚಾಯಿತಿ ಸಮನ್ವಯ ಉಪಸಮಿತಿ, ಕೃಷಿ ಉಪಸಮಿತಿ, ಸಾಮಥ್ಯ ಅಭಿವೃದ್ಧಿ ಉಪಸಮಿತಿ, ಎಂಐಎಸ್ ಮೇಲ್ವಿಚಾರಣೆ ಉಪಸಮಿತಿ, ವರದಿಗಳನ್ನು ಮಂಡಿಸಲಾಯಿತು. ಇಲಾಖೆಯ ನೂತನ ಯೋಜನೆಗಳಾದ ಅಂತರಾಷ್ಟ್ರೀಯ ವಲಸೆ ಕೇಂದ್ರ, ಕರ್ನಾಟಕ , ಸ್ಕಿಲ್ ಕನೆಕ್ಟ್ ಪೋರ್ಟ್‍ಲ್ ಹಾಗೂ ಇಂಡಸ್ಟ್ರೀ ಲಿಂಕೇಜ್ ಸೆಲ್ ಬಗ್ಗೆ ಕೌಶಲ್ಯ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು. ದೀನ್ ದಯಾಳ್ ಅಂತ್ಯೋದಯ ಯೋಜನೆಯ ಕುರಿತು ಅಭಿಯಾನ ವ್ಯವಸ್ಥಾಪಕ ಗೋವಿಂದ ಮೂರ್ತಿ ಸಭೆಗೆ ವಿವರಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಾಮಚಂದ್ರಪ್ಪರವರು ಮುಂದಿನ ದಿನಗಳಲ್ಲಿ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ಹಾಗೂ ಸಮಾಲೋಚನೆ ಶಿಬಿರ ಏರ್ಪಡಿಸುವುದಾಗಿ ತಿಳಿಸಿದರು. ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಭವ್ಯ ರಾಣಿರವರು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗುವ ತರಬೇತಿಗಳನ್ನು ವಿವರಿಸಿದರು. ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶಬಾನ ರವರು ಅಪ್ರೆಂಟ್‍ಶಿಪ್ ತರಬೇತಿಯ ಬಗ್ಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್‍ರವರು ಜವಳಿ ಇಲಾಖೆಯಲ್ಲಿ ಕೈಗೊಳ್ಳಲಾಗುವ ತರಬೇತಿಗಳ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ್‍ನ ಯೋಜನಾಧಿಕಾರಿ ಗೋವಿಂದ ಗೌಡ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸುವ ಕೌಶಲ್ಯ ತರಬೇತಿ ಯೋಜನೆಗಳು ಹಾಗೂ ಪ್ರಚಾರ ಕಾರ್ಯಗಳ ಬಗ್ಗೆ ವಿವರಿಸಿದರು. ಉದ್ಯೋಗ ಇಲಾಖೆ ಅಧಿಕಾರಿಯವರಿಗೆ ಉದ್ಯೋಗ ಮೇಳ ಆಯೋಜಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಸೂಚಿಸಿದರು. ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಯಾದ ಸೋನಿಯಾ ವೆಣೇಕರ್‍ರವರಿಗೆ ಹಾಸ್ಟಲ್ ವಿದ್ಯಾರ್ಥಿಗಳಿಗೆ ನೀಡಲಾಗುವ ತರಬೇತಿ ಕಾರ್ಯಕ್ರಮದ ಮುಂದಾಳತ್ವ ವಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಪಾಲ್ಗೋಂಡಿದ್ದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ದೀನ್ ದಯಾಳ್ ಅಂತ್ಯೋದಯ ಯೋಜನೆಯ ಯಶಸ್ಸಿಗೆ ಶ್ರಮಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಪಿಯು ಡಿಡಿ ರಾಮಚಂದ್ರಪ್ಪ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಮಹದೇವ್, ಬಂಗಾರಪೇಟೆ ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಬಿಸಿಎಂ ಅಧಿಕಾರಿ ಸೋನಿಯಾ ವರ್ಣೇಕರ್, ಅಧಿಕಾರಿಗಳಾದ ಆರ್.ರವಿಚಂದ್ರ, ಹೆಚ್.ಶ್ರೀನಿವಾಸ್, ಡಿಐಸಿ ಡಿಸಿ ವಿ.ಶ್ರೀನಿವಾಸರೆಡ್ಡಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ, ಬಂಗಾರಪೇಟೆ ಸಿಎಂಸಿ ಉಮಾ, ಆಹಾರ ಇಲಾಕೆಯ ಪ್ರಕಾಶ್, ಜಿಪಂ ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ, ಐಟಿಐನ ಆರ್ಮುಗಂ, ಹೆಚ್‍ಆರ್‍ಡಿಸಿ ನಾರಾಯಣಸ್ವಾಮಿ ಮತ್ತಿತರರಿದ್ದರು.