

ಉಡುಪಿ: ಉದ್ಯಾವರ ಐಸಿವೈಎಮ್ ಸಕ್ರೀಯ ಸದಸ್ಯ ಮಂಗಳೂರಿನ ಪಿಜಿಯೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಭವಿಸಿದೆ.
ಉದ್ಯಾವರ ನಿವಾಸಿ ರೋಸಿ ಲೂಯಿಸ್ ಅವರ ಪುತ್ರ ರೋಯಲ್ ಲೂವಿಸ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ
ಮಾಹಿತಿಗಳ ಪ್ರಕಾರ ರೋಯಲ್ ಲೂವಿಸ್ ಅವರು ಉದ್ಯಾವರ ಪಿತ್ರೋಡಿ ನಿವಾಸಿಯಾಗಿದ್ದು, ಉಡುಪಿಯ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು ವೈಯಕ್ತಿಕ ಕಾರಣ ಮತ್ತು ಖಿನ್ನತೆಯಿಂದ ಕೆಲಸವನ್ನು ಬಿಟ್ಟು ಮಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಉದ್ಯೋಗದ ನಿಮಿತ್ತ ಅಲ್ಲಿಯೇ ಪಿಜಿಯಲ್ಲಿ ವಾಸವಾಗಿದ್ದ ರೋಯಲ್ ಶನಿವಾರ ವಿಷ ಸೇವಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದ್ದು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಮೃತ ರೊಯಲ್ ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.