

ಉದ್ಯಾವರ : ಉದ್ಯಾವರದ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ವ್ಯಾಪ್ತಿಗೆ ಒಳಪಟ್ಟ ಕಥೋಲಿಕ್ ಸಭಾ, ಉದ್ಯಾವರೈಟ್ಸ್ ದುಬೈ ಮತ್ತು ಶ್ರೀಸಾಮಾನ್ಯರ ಆಯೋಗದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಶ್ರೀಸಾಮಾನ್ಯರ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಫಾ. ಸ್ಟ್ಯಾನಿ ಬಿ ಲೋಬೊ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ಸಾಧಕರನ್ನು ಗುರುತಿಸಿ, ಗೌರವ ಧನದೊಂದಿಗೆ ಅಭಿನಂದಿಸಲಾಯಿತು. ಉದ್ಯಾವರೈಟ್ಸ್ ದುಬೈ ಕೊಡಮಾಡಿದ ಪ್ರತಿಭಾ ಪುರಸ್ಕಾರವನ್ನು ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ರಿಯಾ ಮೈರಾ, ಹರ್ಷಿತ್ ಫೆರ್ನಾಡೀಸ್, ಸೋನಿ ಪ್ರಕಾಶ್, ಶೋನ್ ಚಾಲ್ಸ್, ಶೋನ್ ರೆಕ್ಸ್, ನಿಷೇಲ್ ಮನಿಷ, ಪಿಯುಸಿ ವಿಭಾಗದಲ್ಲಿ ಶಯಾನ್ ಎಲ್ರಾಯ್, ಜೆಸ್ಸಿಕಾ ಪ್ರಿನ್ಸಿಟಾ, ಜಿಶೆಲ್ ಪ್ರಿನ್ಸಿಯ, ಆರೋನ್ ಪಿರೇರಾ, ಪವಿತ್ರ ಪ್ರೀತಿ ಮತ್ತು ಸoತ ಫ್ರಾನ್ಸಿಸ್ ಝೆವಿಯರ್ ಆಂಗ್ಲ ಮಾಧ್ಯಮ ಶಾಲೆಯ ಎಸ್ ಎಸ್ ಎಲ್ ಸಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಆಶಿಶ್ ಶಣೈ ಮತ್ತು ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನಗಳಿಸಿದ ಸೋನಿ ಪ್ರಕಾಶ್ ರವರಿಗೆ ಹಸ್ತಾಂತರಿಸಲಾಯಿತು.
ಉಡುಪಿ ಧರ್ಮ ಪ್ರಾಂತ್ಯ ಜೂನ್ 25ರಂದು ಶ್ರೀಸಾಮಾನ್ಯರ ದಿನವನ್ನಾಗಿ ಘೋಷಣೆ ಮಾಡಿದ್ದು, ಉದ್ಯಾವರದಲ್ಲಿಯೂ ಶ್ರೀಸಾಮಾನ್ಯರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸರಕಾರಿ ಹುದ್ದೆಯಲ್ಲಿ ಮತ್ತು ಸಮಾಜದಲ್ಲಿ ವಿವಿಧ ಸೇವೆಯನ್ನು ಸಲ್ಲಿಸುತ್ತಿರುವ ಹಲವು ಗಣ್ಯರನ್ನು ಗುರುತಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಸಾಧಕರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಥೋಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೋ, ಉದ್ಯಾವರೈಟ್ಸ್, ದುಬೈ ಇದರ ಸ್ಥಾಪಕ ಅಧ್ಯಕ್ಷ ಜೆರಾಲ್ಡ್ ಪಿರೇರಾ, ಪಾಲನ ಮಂಡಳಿಯ ಉಪಾಧ್ಯಕ್ಷ ಲಾರೆನ್ಸ್ ಡೇಸ, ಕಾರ್ಯದರ್ಶಿ ಜೋನ್ ಎಮ್ ಡಿಸೋಜಾ, ಪ್ರಮುಖರಾದ ಅಲ್ವಿನ್ ಅಂದ್ರಾದೆ, ಮಾರ್ಗರೇಟ್ ಮೆಂಡೊನ್ಸಾ ಮತ್ತು ರೋಬರ್ಟ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷೆ ಐರಿನ್ ಪಿರೇರಾ ಸ್ವಾಗತಿಸಿದರೆ, ಕಾರ್ಯದರ್ಶಿ ರಾಬರ್ಟ್ ಡಿಸೋಜ ಧನ್ಯವಾದ ಸಮರ್ಪಿಸಿದರು. ಮಾಜಿ ಅಧ್ಯಕ್ಷ ರೋನಾಲ್ಡ್ ಅಲ್ಮೆಡ ಕಾರ್ಯಕ್ರಮ ನಿರೂಪಿಸಿದರು.




