ಉಡುಪಿ – ಅಧಿಕಾರಿಗಳಿಂದ ಅಕ್ರಮವಾಗಿ ಕಟ್ಟಿದ ಎರಡು ಹೊಟೇಲ್ ಗಳ ಕಟ್ಟಡ ತೆರವು ಕಾರ್ಯಚರಣೆ.

JANANUDI.COM NETWORK

ಉಡುಪಿ: ನಗರದ ಕಟ್ಟಡ ಒಂದಕ್ಕೆ ನಗರಸಭೆ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು.ನಗರದ ಜಾಮಿಯಾ ಮಸೀದಿ ಎದುರಿದ್ದ ಅನಧಿಕೃತ ಎರಡು ಹೊಟೇಲ್ ಗಳಾದ ಝಾರ ಮತ್ತು ಝೈತೂನ್ ಕಟ್ಟಡವನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.‌
ಈ ಹಿಂದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನ್ಯಾಯಾಲಯದ ಆದೇಶವಿದ್ದರೂ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳದ ಕುರಿತು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಈ ಭಾರಿ ಪೊಲೀಸ್ ಮತ್ತಿತರ ಬಂದೋಬಸ್ತ್ ಗೊಳಿಸಿ ಯಂತ್ರಗಳ ಮೂಲಕ ಕಾರ್ಯಚರ್ಣೆ ನಡೆಸಿದ್ದಾರೆ. ತಹಶೀಲ್ದಾರ್ ಮತ್ತು ಪೌರಾಯುಕ್ತರು ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿದು ಬಂದಿದೆ.
ಜಾಮಿಯಾ ಮಸೀದಿ‌ ಎದುರು ಈ ಮೊದಲು ಗುಜರಿ ಅಂಗಡಿ ಇದ್ದು.. ಮಸೀದಿಯಿಂದ ಜಾಗವನ್ನು ಲೀಸ್ ಗೆ ಪಡೆದು ನಿಯಮಗಳನ್ನು ‌ಗಾಳಿಗೆ ತೂರಿ ಹೊಟೇಲ್ ನಿರ್ಮಿಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು.ಹಲವು ತಿಂಗಳ‌ ಹಿಂದೆಯೇ ಕಟ್ಟಡ ತೆರವುಗೊಳಿಸಲು ನ್ಯಾಯಾಲಯ ಸೂಚಿಸಿದೆ.‌ ರಾತ್ರಿಯಿಂದಲೇ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ ನಗರಸಭೆ ಆಡಳಿತ ಶನಿವಾರ ಬೆಳಗ್ಗೆಯೇ ನೂರಾರು ಪೊಲೀಸರ ಭದ್ರತೆಯೊಂದಿಗೆ ಕಾರ್ಯಚರಣೆಗೆ ಇಳಿದಿದೆ ಎಂದು ಮಾಹಿತಿ ಮತ್ತು ವಿಡೀಯೊ ತುಣುಕುಗಳು ಹರಿಯುತ್ತಾ ಇವೆ.
ಹೊಟೇಲ್ ಮಾಲಕರ ತಾವೇ ತೆರವು‌ ಮಾಡುತ್ತೇವೆ ಎಂಬ ಮನವಿಗೆ ನಗರಸಭೆ ಅಧಿಕಾರಿಗಳು ಪುರಸ್ಕರಿಸಿದ್ದು, ಅದರಂತೆ ತೆರವು ಕಾರ್ಯ ‌ಮುಂದುವರಿದಿದೆ ಎನ್ನಲಾಗಿದೆ.