

ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ (ರಿ) ಕರ್ಕಿ ಕನ್ಯಾನ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ತಿ. ಉಡುಪಿ, ರೆಡ್ ಕ್ರಾಸ್ ಸೊಸೈಟಿ ರಿ. ಕುಂದಾಪುರ ಇವರ ಸಹಕಾರದಲ್ಲಿ ದಿನಾಂಕ 03/03/2024 ಆದಿತ್ಯವಾರ ಕೊಠಾರಿ ಸಮುದಾಯ ಭವನ ಕರ್ಕಿ ಕನ್ಯಾನದಲ್ಲಿನಡೆದ ರಕ್ತದಾನ ಶಿಬಿರವನ್ನು ಬೈಂದೂರು ವಿಧಾನಸಭಾ ಸದಸ್ಯರಾದ ಶ್ರೀ ಗುರುರಾಜ್ ಗಂಟಿಹೊಳೆ ಉದ್ಘಾಟಿಸಿದರು.
ಸೀತಾರಾಮ್ ಕೊಠಾರಿ ಸಭೆಯ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಜಯಕರ್ ಶೆಟ್ಟಿ, ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್,ರಕ್ತದಾನ ಶಿಬಿರದ ಆಯೋಜನ ಪ್ರಮುಖ ಪ್ರಶಾಂತ್ ತಲ್ಲೂರು, ಶರತ್ ಕಾಂಚನ್ ಆನಗಳ್ಳಿ, ಪತ್ರಕರ್ತ ಈಶ್ವರ ನಾವುಂದ, ಅರವಿಂದ ಉಪ್ಪಿನಕುದ್ರು, ಮಹೇಂದ್ರ ಉಪ್ಪಿನಕುದ್ರು, ದಿನೇಶ್ ಕಾಂಚನ್ ಬಾರಿಕೆರೆ ಉಪಸ್ಥಿತರಿದ್ದರು.
ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 102 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.


