


ಉಡುಪಿ, ಜು.13: ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದೀಗ ನೂತನ ಜಿಲ್ಲಾಧಿಕಾರಿಯಾಗಿ ಡಾ|ವಿದ್ಯಾಕುಮಾರಿ ಕೆ. ಅವರನ್ನು ನಿಯೋಜಿಸಿ. ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿದ್ದಾರೆ..
ಮೂಲತಹ ಡಾ| ವಿದ್ಯಾಕುಮಾರಿ ಕೆ. ಯವರು ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾಗಿರುವ ಅವರು 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಹುದ್ದೆಯ ನಿರೀಕ್ಷೆಯಲ್ಲಿದ್ದ ಅವರನ್ನ ತಕ್ಷಣದಿಂದ ಜಾರಿಯ ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಕೆಎಎಸ್ ನಿಂದ ಐಎಎಸ್ ಗೆ 5 ವರ್ಷಗಳ ಹಿಂದೆ ಭಡ್ತಿ ಪಡೆದಿದ್ದ ವಿದ್ಯಾಕುಮಾರಿಯವರು ಉಡುಪಿಯಲ್ಲಿ ಈ ಹಿಂದೆ ಎರಡು ವರ್ಷಗ ಕಾಲ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.