ಹಿಂದೂ ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಕುರಿತು ಯುಎಇ ರಾಜಕುಮಾರಿ ಟ್ವೀಟ್ 

ಹಿಂದೂ ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಕುರಿತು ಯುಎಇ ರಾಜಕುಮಾರಿ ಹೇಳಿಕೆ
ಅಬುಧಾಬಿ: ಕರ್ನಾಟಕ ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಧಿಸಲು ಒತ್ತಡ ಹೇರುತ್ತಿರುವ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಮುಸ್ಲಿಂ ರಾಷ್ಟ್ರದಲ್ಲಿರುವ ಹಿಂದೂಗಳಿಗೆ ಅಲ್ಲಿರುವ ಮಸೀದಿ ಬಳಿ ವ್ಯಾಪಾರ ನಡೆಸಲು ಇದುವರೆಗೂ ತಡೆನೀಡಿಲ್ಲ ಎಂದು ಯುಎಇ ರಾಜಕುಮಾರಿ ಹೆಂದ್‌ ಅವರು ಸಂಘಪರಿವಾರಕ್ಕೆ ಎಚ್ಚರಿಕೆಯ ಟ್ವೀಟ್  ಮಾಡಿದ್ದಾರೆ, ಹಾಗೇ ಮುಸ್ಲಿಂ ರಾಷ್ಟ್ರದಲ್ಲಿರುವ ಹಿಂದೂಗಳ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ವಾಸಿಸುವ ಹಿಂದೂಗಳ ಸಂಖ್ಯೆ ಕೆಳಕಂಡತ್ತೆ ಇದೆ

1.ಇಂಡೋನೇಷ್ಯಾ- 4, 480,000, 2.ಮಲೇಷ್ಯಾ- 2, 040,000, 3.  ಯು ಎ ಇ  9, 10,000, 4.ಕತಾರ್‌-3, 60,000, 5.ಬಹ್ರೇನ್‌-2, 40,000, 6.ಕುವೈತ್‌-6, 30,000, 7.ಓಮನ್‌-6, 50,000, 8.ಸೌದಿ -3, 70,000.

ಈ ಮೇಲಿನ ಯಾವುದೇ ರಾಷ್ಟ್ರಗಳಲ್ಲಿರುವ ಹಿಂದೂಗಳಿಗೆ ಮಸೀದಿ ಆವರಣದಲ್ಲಿ ವ್ಯಾಪಾರ ಮಾಡುವುದನ್ನು ಇದುವರೆಗೂ ನಿರ್ಬಂಧ ವಿಧಿಸಿಲ್ಲ ಎಂದು ಅವರು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. ಸದ್ಯ ಕರ್ನಾಟಕದಲ್ಲಿ ದೇವಾಲಯದಲ್ಲಿ ಮುಸ್ಲಿಮ್‌ ವ್ಯಾಪಾರಿಗಳಿಗೆ ನಿರ್ಬಂಧ ಹೇರಬೇಕೆಂದು ಆಗ್ರಹಿಸುತ್ತಿರುವ ಸಂಘಪರಿವಾರದ ನಡೆಯನ್ನು ವಿರೋಧಿಸಿ ಯುಎಇ ರಾಜಕುಮಾರಿ ಹೆಂದ್‌ ಅವರ ಟ್ವೀಟ್‌ ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ಹಿಜಾಬ್ ಮತ್ತು ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿಧಿಸಲು ಒತ್ತಡ ಹೆರುವ ಮೂಲಕ ಅಂರ್ತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಸರು ಕುಖ್ಯಾತಿ ಪಡೆಯುವತಾಂಗಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಅಧರ್ಮದ ನಡೆಗಳು ನಡೆಯುತ್ತಲಿದ್ದು ಕರ್ನಾಟಕಕ್ಕೇ ಕಪ್ಪು ಚುಕ್ಕೆಯಾಗ್ಗಿ ಮಾರ್ಪಡುವುದರಲ್ಲಿ ಅನುಮಾನವಿಲ್ಲ, ಅದಕ್ಕಿಂತ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು