


ವಿಟ್ಲ: ಬಾವಿಗೆ ರಿ೦ಗ್ ಹಾಕುವಾಗ ಆಕ್ಸಿಜನ್ ಸಿಗದೇ ಇಬ್ಬರು ಮೃತಪಟ್ಟ ಘಟನೆ ವಿಟ್ಲದ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ
ಮಂ೦ಗಳವಾರ ನಡೆದಿದೆ. ಮೃತ ಕಾರ್ಮಿಕರನ್ನು ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಟಾಡಿಯಲ್ಲಿ ವಾಸವಿರುವ ಇಬ್ಬು ಯಾನೆ
ಇಬ್ರಾಹಿ೦(40) ಮತ್ತು ಮಲಾರ್ ನಿವಾಸಿ ಅಲಿ(24) ಎ೦ದು ಗುರುತಿಸಲಾಗಿದೆ.
ಸುಮಾರು 30ಫೀಟ್ ಆಳದ ಬಾವಿಗೆ ರಿಂಗ್ ಹಾಕಿ ನ೦ತರ ಕ್ಲೀನಿಂಗ್ ಮಾಡಲೆಂದು ಬಾವಿಗೆ ಇಳಿದ ಒಬ್ಬ ಕಾರ್ಮಿಕ
ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಾವಿಗೆ ಇಳಿದವನು ಮೇಲಕ್ಕೆ ಬಾರದೇ ಇದ್ದಾಗ ಅವನನ್ನು ನೋಡಲು ಇನ್ನೊಬ್ಬ ಕಾರ್ಮಿಕ
ಇಳಿದಿದ್ದು ಇಬ್ಬರೂ ಆಕ್ಸಿಜನ್ ಸಿಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

