ಹಾವೇರಿ: ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆಯ ಮೇಲ್ಭಾವಣಿ ಕುಸಿದು ಸ್ಥಳದಲ್ಲೇ ಇಬ್ಬರು ಮಕ್ಕಳು ಹಾಗೂ ಮಹಿಳೆ ಮೃತಪಟ್ಟಿದ್ದು, ಮೂವರು. ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಗ್ರಾಮದ ಹರಕುಣಿ ಕುಟುಂಬಸ್ಥರ ಮನೆ ಮೇಲ್ಭಾವಣೆ ಕುಸಿದಿದೆ. ನಿದ್ರಿಸುತ್ತಿದ್ದ 18 ತಿಂಗಳ ಅವಳಿ ಮಕ್ಕಳಾದ ಅಮೂಲ್ಯ ಹಾಗೂ ಅನುಶ್ರೀ ಮತ್ತು ಮಕ್ಕಳ ಅತ್ತೆ ಚನ್ನಮ್ಮ (30)ಸ್ಥಳದಲ್ಲೇ ಮೃತಹಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮನೆ ಮಾಲೀಕ ಮುತ್ತು ದೊಡ್ಡಬಸಪ್ಪ ಹರಕುಣಿ (35), ಪತ್ನಿ ಸುನೀತಾ ಮುತ್ತು ಹರಕುಣಿ (25) ತಾಯಿ ಯಲ್ಲಮ್ಮ ದೊಡ್ಡಬಸಪ್ಪ ಹರಕುಣಿ (56) ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಮಹಮ್ಮದ ಖಿಜರ್, ತಹಸೀಲ್ದಾರ್ ಭರತರಾಜ್ ಕೆ.ಎನ್. ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.