ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಮೃತಪಟ್ಟ ರಾಸುಗಳ ವಿಮಾ ಪರಿಹಾರ 2 ಚೆಕ್‌ಗಳು ಮೊತ್ತ 1,20,000 / -ರೂಗಳು , ಕೋವಿಡ್ ಎರಡನೇ ಅಲೆಯಲ್ಲಿ ಮರಣ ಹೊಂದಿದ ಫಲಾನುಭವಿಗಳ ನಾಮಿನಿಯವರಿಗೆ 4 ಜನರಿಗೆ 40,000 / – ರೂಗಳು ಹಾಗೂ ಗೌಡಹಳ್ಳಿ ಸಂಘದ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ ಅನುದಾನ ಮೊತ್ತ 1,50,000 / – ರೂಗಳು ಸೇರಿ ಒಟ್ಟು 3,10,000 / – ರೂಗಳ ಚೆಕ್‌ಗಳನ್ನು ಕೋಚಿಮುಲ್ ನಿರ್ದೇಶಕರಾದ ಎನ್.ಹನುಮೇಶ್ ರವರು ವಿತರಿಸಿದರು .
ಎನ್.ಹನುಮೇಶ್ ರವರು ಮಾತನಾಡಿ , ರಾಸು ವಿಮಾ ಪರಿಹಾರ ಚೆಕ್ ಪಡೆದಿರುವ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿಸಿ , ತಮ್ಮ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಬೇಕೆಂದು ಮತ್ತು ಒಕ್ಕೂಟದಿಂದ ನೀಡುತ್ತಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಲು ತಿಳಿಸಿರುತ್ತಾರೆ . ಹಾಗೂ ಕೋವಿಡ್ ಎರಡನೇ ಅಲೆಯಲ್ಲಿ ಮರಣ ಹೊಂದಿರುವ ಫಲಾನುಭವಿಗಳಿಗೆ ತಲಾ 10,000 / ರೂ.ಗಳಂತೆ ಒಕ್ಕೂಟದಿಂದ ನೀಡಲಾಗಿದೆ , ಒಕ್ಕೂಟದಿಂದ ಹಾಗೂ ಕ.ಹಾ.ಮ. ದಿಂದ ಕಟ್ಟಡ ಅನುದಾನಗಳನ್ನು ಸಂಘಕ್ಕೆ ಕೊಡಿಸಿ ಕಟ್ಟಡ ಕೆಲಸಗಳು ಜರೂರಾಗಿ ಪೂರ್ಣ ಮಾಡಲಾಗುತ್ತಿದೆ .
ಉಪ ವ್ಯವಸ್ಥಾಪಕರಾದ ಕೆ.ಎಸ್.ನರಸಿಂಹಯ್ಯ ರವರು ಮಾತನಾಡಿ , ಬೇಸಿಗೆ ಕಾಲದಲ್ಲಿ ಹಾಲಿನ ಗುಣಮಟ್ಟವನ್ನು ನಿಯಂತ್ರಣ ಮಾಡಲು ರಾಸುಗಳನ್ನು ನೆರಳಿನಲ್ಲಿ ಇರುವಂತೆ ವ್ಯವಸ್ಥೆ ಮಾಡಿ , ಗೋಣಿ ಚೀಲ ನೀರಿನಲ್ಲಿ ನೆನಸಿ ಹಾಕಿಸುವುದು ಕಡ್ಡಾಯವಾಗಿ ಮಾಡುವುದರ ಜೊತೆಗೆ ಹಸಿರು ಮತ್ತು ಒಣ ಮೇವು , ಪಶು ಆಹಾರ , ಖನಿಜ ಮಿಶ್ರಣ , ಗೋಧಾರ ಶಕ್ತಿ ಮತ್ತು Trio – NB Sacc ಪುಡಿಗಳನ್ನು ಬಳಸುವ ವಿಧಾನ ಮತ್ತು ಅಗೋಚರ ಕೆಚ್ಚಲು ಬಾವು ನಿಯಂತ್ರಣ ಕಾರ್ಯಕ್ರಮ ಹಾಗೂ ಸಾಫ್‌ಕಿಟ್ ಬಳಕೆ ಮತ್ತು ಕಾಲು ಬಾಯಿ ಜ್ವರ ಹರಡದಂತೆ ನಿಯಂತ್ರಣ ಮಾಡುವ ಬಗ್ಗೆ ತಿಳಿಸಿದರು
ಈ ಸಂದರ್ಭದಲ್ಲಿ ಶ್ರೀನಿವಾಸಪುರ ಉಪ ಕಛೇರಿಯ ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್ , ಎನ್.ಶಂಕರ್ , ಪಿ.ಕೆ.ನರಸಿಂಹರಾಜು , ಎಸ್.ವಿನಾಯಕ , ಕೆ.ಪಿ.ಶ್ವೇತ ಹಾಗೂ ಸಿಬ್ಬಂದಿಯವರು , ಮತ್ತು ಸಂಘದ ಅಧ್ಯಕ್ಷರು , ಮುಖ್ಯ ಕಾರ್ಯನಿರ್ವಾಹಕರು , ಫಲಾನುಭವಿಗಳು ಹಾಜರಿದ್ದರು .