JANANUDI.COM NETWORK

ಚೆನ್ನೈ : ಇಬ್ಬರು ವಿದ್ಯಾರ್ಥಿನಿಯರು ಸೇರಿ ತಮ್ಮ ಸಹಪಾಠಿ ವಿದ್ಯಾರ್ಥಿಯನ್ನು ಕೊಲೆ ಮಾಡಿ ಹೂತಿಟ್ಟಿರುವ ಭಯಾನಕ ಘಟನೆ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ಈಚಿಂಗಾಡು ಗ್ರಾಮದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಈಚಿಂಗಾಡು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ರಕ್ತಸಿಕ್ತ ಹಲ್ಲು ಮತ್ತು ಕೂದಲು ಸಿಕ್ಕಿದ ಬಗ್ಗೆ ತನಿಖೆ ನಡೆಸಿದಾಗ ಪಕ್ಕದಲ್ಲೇ ಶವವನ್ನು ಹೂತಿಟ್ಟಿರುವುದು ಕಂಡು ಬಂದಿದೆ.
ಪ್ರೇಮ್ ಕುಮಾರ್ ಹತ್ಯೆಯಾದ ವಿದ್ಯಾರ್ಥಿ. ಈತ ಇಬ್ಬರು ಆರೋಪಿತ ವಿದ್ಯಾರ್ಥಿನಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಬಳಿಕ ದುಡ್ಡಿನ ಆಸೆಗಾಗಿ ಅವರ ಖಾಸಗಿ ಪೆÇೀಟೋ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಇವನ ಕಿರುಕುಳ ತಡೆಯಲಾರದೆ, ಇದನ್ನು ವಿದ್ಯಾರ್ಥಿನಿಯರು ತಮ್ಮ ಇನ್ನೋರ್ವ ಸ್ನೇಹಿತನಿಗೆ ತಿಳಿಸಿದ್ದಾರೆ. ಆತನ ಸ್ಕೆಚ್ ನಂತೆ ಮೂವರು ಸೇರಿ ಬಾಲಕನನ್ನು ಕೊಲೆ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.