

ಮಂಡ್ಯ ಎ.18: ಐಸ್ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿತ್ತು ಎಂಬ ಸುದ್ದಿ ಹರಡಿತ್ತು, ಆದರೆ ಇದೀಗ ತನಿಖೆಯಿಂದ ಅಘಾತಕಾರಿ ವಿಷಯ ತಿಳಿದು ಬಂದಿದೆ, ಮಕ್ಕಳ ತಾಯಿಯೇ ಪತಿಯ ಮೇಲಿನ ದ್ವೇಷದಿಂದ ತನ್ನ ಅವಳಿ ಜವಳಿ ಮಕ್ಕಳಿಗೆ ವಿಷ ಉಣಿಸಿದ್ದಲ್ಲದೆ ತಾನೂ ಆತ್ಮಹತ್ಯೆಗೆ ಯತ್ನಿಸಿದೆ ಎಂದು ತಿಳಿದು ಬಂದಿದೆ. ಹೀಗೆ ಏನೂ ಅರಿಯದ ಇಬ್ಬರು ಮುಗ್ಧ ಕಂದಮ್ಮಗಳು ಅಸುನೀಗಿವೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪೂಜಾ ತನ್ನ ಪತಿ ಪ್ರಸನ್ನ ಮೇಲಿನ ಕೋಪದಲ್ಲಿ
ಮಕ್ಕಳಿಗೆ ವಿಷ ಉಜಿಸಿದ್ದಾಳೆ. ತ್ರಿಶುಲ್ ಮತ್ತು ತ್ರಿಶಾ ಎಂಬ ಅವಳಿ ಮಕ್ಕಳು ಹಾಗೂ ಇನ್ನೊಬ್ಬ ಮಗಳು ಬ್ಯಂದಾಗೆ ನಿನ್ನೆ ರಾತ್ರಿ ವಿಷ
ಉಣಿಸಿದ್ದಳು. ಇಂದು ಬೆಳಗ್ಗೆ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಐಸ್ ಕ್ರೀಂ ತಿಂದು ಮಕ್ಕಳು ಅಸುನೀಗಿದ್ದಾರೆ ಎಂದು.
ಸ್ಥಳೀಯವಾಗಿ ಸುದ್ದಿ ಹಬ್ಬಿತ್ತು. ಆದರೆ ಪೊಲೀಸ್ ವಿಚಾರಣೆ ವೇಳೆ ನಿಜ ವಿಚಾರ ಬಯಲಾಗಿದೆ.
ಪೂಜಾ ಮತ್ತು ಆಕೆಯ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಜಗಳದಿಂದ ಬೇಸತ್ತ ಪೂಜಾ ನಿನ್ನೆ ಮಕ್ಕಳಿಗೆ ವಿಷ ಉಣಿಸಿ ತಾನೂ
ತಿಂದಿದ್ದಳು. ಮನೆಯಲ್ಲಿ ಜಿರಳೆಗೆ ಹಾಕುತ್ತಿದ್ದ ಲಕ್ಷ್ಮಣ ರೇಖೆಯನ್ನು ಊಜಕ್ಕೆ ಹಾಕಿ ಮಕ್ಕಳಿಗೆ ತಿನ್ನಿಸಿದ್ದಳು. ಅಸ್ವಸ್ಥರಾಗಿದ್ದ ಪೂಜಾ ಮತ್ತು
ಮಕ್ಕಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಸಾವನ್ನಪ್ಪಿದ್ದು ತಾಯಿ ಪೂಜಾ.
ಹಾಗೂ ಮೊದಲ ಮಗಳು ಬೃಂದಾಗೆ ಚಿಕಿತ್ಸೆ ನೀಡಲಾಗುತ್ತಿದೆ.