ಶ್ರೀನಿವಾಸಪುರ 2 : ತಾಲೂಕಿನ ತೂಪಲ್ಲಿ ಗ್ರಾಮದಲ್ಲಿ ಭಾನುವಾರ ದಂದು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಈ ಸಂಘಕ್ಕೆ ಸಂಬಂದಿಸಿದಂತೆ ನಿರ್ದೇಶಕರ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಗಾಯತ್ರಿ ಮಾಹಿತಿ ನೀಡಿದರು.
ತೂಪಲ್ಲಿ ಗ್ರಾಮದ ಟಿ.ವಿ.ರಾಮರೆಡ್ಡಿ, ಟಿ.ವಿ.ಮಧುಸೂದನರೆಡ್ಡಿ, ಸಾವಿತ್ರಮ್ಮ, ಶ್ರೀನಿವಾಸರೆಡ್ಡಿ, ಗಂಗುಲಪ್ಪ, ಮದ್ದಮ್ಮ, ಟಿ.ಎ.ನಾಗರತ್ನಮ್ಮ, ಎಂ.ಕುರಪ್ಪಲ್ಲಿಯ ನರಸಿಂಹನಾಯ್ಡು, ಎಂ.ಕೆ.ವೆಂಕಟರಮಣನಾಯ್ಡು, ತಮ್ಮಿರೆಡ್ಡಿಗಾರಿಪಲ್ಲಿಯ ಮುನಿರತ್ನಮ್ಮ, ಶಂಕರಪ್ಪ, ಟಿ.ಎ.ನಾಗರತ್ನಮ್ಮ , ನರಸಿಂಹಪ್ಪ , ಶ್ರೀನಿವಾಸ್ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯದರ್ಶಿ ಟಿ.ಆರ್.ರಾಮಚಂದ್ರ ಇದ್ದರು.
ಚುನವಾಣೆಯಲ್ಲಿ ಆಯ್ಕೆಯಾಗಿ ನೂತನ ನಿರ್ದೇಶಕ ಟಿ.ವಿ.ಮಧುಸೂದನರೆಡ್ಡಿ ಮಾತನಾಡಿ ಹೈನುಗಾರಿಕೆಯು ಗ್ರಾಮೀಣ ಭಾಗದ ರೈತರಿಗೆ ವರಧಾನವಾಗಿದ್ದು, ಕೋಚಿಮುಲ್ ನಿಂದ ಸಿಗುವ ಸೌಲಭ್ಯಗಳನ್ನು ಪಡೆದು , ರೈತರು ಉತ್ತಮ ಗಣಮಟ್ಟದ ಹಾಲು ಡೈರಿಗೆ ಹಾಕಿ , ಡೈರಿಯನ್ನು ಉತ್ತಮ ರೀತಿಯಲ್ಲಿ ಬೆಳುಸುವಂತೆ ಮನವಿ ಮಾಡಿದರು.
ಚುನಾವಣೆಗೆ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅದರಲ್ಲಿ 12 ಸ್ಥಾನಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ ಎಂದು ಮಾಹಿತಿ ನೀಡಿದರು.