

ಕುಂದಾಪುರ; ಶತಶತಮಾನಗಳಿಂದ ಸಂಪದ್ಭರಿತ ಸುಧೀರ್ಘ ಇತಿಹಾಸಗಳುಳ್ಳ ದೇಶ ನಮ್ಮದು. ರೂಪ, ಪ್ರಮಾಣ, ಭಾವ, ಲಾವಣ್ಯ ಯೋಜನೆ, ಸಾದೃಶ್ಯ, ವರ್ಣಿಕಾಭಂಗದಂತಹ ಬಧ್ದತೆ ಮತ್ತು ಆಚರಣೆಗಳ ಮೂಲಕ ಪ್ರಾಚೀನ ಶಿಲ್ಪ ಮತ್ತು ವಾಸ್ತುಶಿಲ್ಪದಂತಹ ಗತಕಾಲದ ವೈಭವಗಳು ಮೂರ್ತಿ ರೂಪದ ಸಂಸ್ಕøತಿಯನ್ನು ಎತ್ತಿಹಿಡಿದಿದಲ್ಲದೆ, ಇಂದಿಗೂ ಪ್ರಬುಧ್ಧತೆಗೆ ಮತ್ತು ಆಚರಣೆಗೆ ಪ್ರೇರಣಾ ಶಕ್ತಿಯಾಗಿದೆ. ಈ ಕಲಾತ್ಮಕತೆಯನ್ನು ಒಂದೇ ಚೌಕಟ್ಟಿನ ಮೂಲಕ ಬಿಂಬಿಸಿ, ಹಿರಿಯರ ತ್ಯಾಗದ ಪ್ರತೀಕವಾಗಿ ಕೇಸರಿ ಮಿಶ್ರಿತ ಬಣ್ಣ ಮತ್ತು ಗತಕಾಲದ ಕುರುಹುವಿಗಾಗಿ ಕಪ್ಪು ಬಿಳುಪಿನ ಛಾಯೆಯನ್ನು ತೆರೆದಿಡಲು ಪ್ರಯತ್ನಿಸಲಾಗಿದೆ. ತ್ರಿವರ್ಣ ಕಲಾ ತರಗತಿ ಹಿರಿಯರ ವಿಭಾಗದ (19 ರಿಂದ 75 ವಯೋಮಿತಿಯ) ಆಯ್ದ 23 ವಿದ್ಯಾರ್ಥಿಗಳಿಂದ 27 ಕಲಾಕೃತಿಗಳು ಮಿಶ್ರ ಮಾಧ್ಯಮದೊಂದಿಗೆ ವ್ಯಕ್ತಪಡಿಸಲ್ಪಟ್ಟ ಈ ಬಾರಿಯ ಕಲಾಪ್ರದರ್ಶನವು ಕಲಾತ್ಮಕವಾಗಿ ಮತ್ತು ಪ್ರತಿಭಾನ್ವಿತರಿಗೆ ಸ್ಪೂರ್ತಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ.
ಉದ್ಘಾಟನಾ ಸಮಾರಂಭ:-
ದಿನಾಂಕ 12.01.2025 ಆದಿತ್ಯವಾರ ಬೆಳಿಗ್ಗೆ 10.00ಕ್ಕೆ ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ವಾಸುದೇವ ಯಡಿಯಾಳರವರು ಉದ್ಘಾಟಿಸಲಿದ್ದಾರೆ. ಅತಿಥಿ ಅಭ್ಯಾಗತರಾಗಿ ಉಡುಪಿಯ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ನಿರ್ದೇಶಕರಾದ ಡಾ. ಯು. ಸಿ. ನಿರಂಜನ್ ಕುಂದಾಪುರದ ನಿವೃತ್ತ ಪ್ರಾಂಶುಪಾಲರಾದ ಡಾ. ಜಿ. ಹೆಚ್. ಪ್ರಭಾಕರ್ ಶೆಟ್ಟಿ ಮತ್ತು ಶ್ರೀ ವೆಂಕಟರಮಣ ಪಿ.ಯು. ಕಾಲೇಜಿನ ಸಂಸ್ಕøತ ಉಪನ್ಯಾಸಕಿ ಶ್ರೀಮತಿ ಮಮತಾ ರೈ ಉಪಸ್ಥಿತಲಿರುವರು.
ಭಾಗವಹಿಸುವ ವಿದ್ಯಾರ್ಥಿ ಕಲಾವಿದರು.:-
ಕುಂದಾಪುರ ಮತ್ತು ಮಣಿಪಾಲ ತ್ರಿವರ್ಣ ಕಲಾ ತರಗತಿಯ ಡಾ. ಜಿ. ಎಸ್. ಕೆ. ಭಟ್, ವಿಧು ಶಂಕರ್ ಬಾಬು, ಡಾ. ಸುಮೀತ್ ಕೌರ್, ರೇವತಿ ಡಿ., ಲತಾ ಭಾಸ್ಕರ್, ಮೀತಾ ಪೈ, ಅಶ್ವಿನ್ ಶೆಟ್ಟಿ, ಅರುಣಾ ನಾಯರ್, ಟಿ., ಸುಷ್ಮಾ ಪೂಜಾರಿ, ಸಂತೋಷ ಎಂ. ಭಟ್, ಂiÀiಶಾ ಭಟ್, ಪ್ರಸಾದ್ ಆರ್. ಆಚಾರ್ಯ, ಅನುಷಾ ಆಚಾರ್ಯ, ರಕ್ಷಿತಾ ಶೆಟ್ಟಿ, ಹರ್ಷಿತ್ ಶೆಟ್ಟಿ, ಸಂಜನಾ ಶ್ರೀನಿವಾಸ್, ರಕ್ಷತಾ ಬಿ., ಪ್ರಜ್ಞಾ ಆರ್. ಭಟ್, ಉಜ್ವಲ್, ಸುಷ್ಮಾ ಪ್ರಭು, ಅನಿರುಧ್ ಆನಂದ್, ಮನ್ವಿ ಪೈ, ಶರಣ್ ಆರ್. ಕುಮಾರ್ ಭಾಗವಹಿಸಿರುತ್ತಾರೆ.
ರಚಿಸಿದ ಕಲಾಕೃತಿಗಳು:-
23 x ó33 ಇಂಚು ಅಳತೆಯ ಕಪ್ಪು ಬಿಳುಪಿನ ಮಿಶ್ರ ಮಾಧ್ಯಮದ ಶೇಡಿಂಗ್ಸ್ ನ ಒಟ್ಟು 27 ಕಲಾಕೃತಿಗಳ ಅನಾವರಣದಲ್ಲಿ ಬೃಂದಾವನ, ಭಗವಾನ್ ವಿಷ್ಣು, ನಾಗಯಕ್ಷಿ, ವ್ಹೀಲ್ಸ್ ಆಫ್ ಕೋನಾರ್ಕ್, ನಟರಾಜ, ಸರಸ್ವತಿ, ವಿಷ್ಣು ದೇವ, ಗುರುವಾಯೂರ್ ಕಥಕ್ಕಳಿ, ವರಹಾ ರೂಪಿ, ದರ್ಪಣ ಸುಂದರಿ, ಪೆರ್ಣಂಕಿಲ ಗಣಪತಿ, ಲಕ್ಷ್ಮಿ ನರಸಿಂಹ, ಗಣೇಶ, ಪಿಲ್ಲರ್ ಆಫ್ ಟೆಂಪಲ್, ಮಾರಿ ಜಾತ್ರೆ, ರಾಮ ಮಂದಿರ, ಗಜಾಸುರ ಸಂಹಾರ, ಚಂದೇಶಾನುಗ್ರಹ, ಶಿವ ಪಾರ್ವತಿ, ಲಕ್ಷ್ಮಿ ನಾರಾಯಣ, ಕಾಳಿಂಗ ಮರ್ಧನ, ನರಸಿಂಹ ಅವತಾರ, ವಿಷ್ಣು, s, ಜೈ ಭಜರಂಗಿ ಎಂಬ ಕಲಾಕೃತಿಗಳು ರಚಿಸಲ್ಪಟ್ಟಿವೆ.









ಕಲಾಪ್ರದರ್ಶನದ ವಿಶೇಷತೆಗಳು:-
- ಹಿರಿಯರಿಂದ ಪರಂಪರಾನುಗತವಾಗಿರುವ ಶಿಲ್ಪ, ವಾಸ್ತುಶಿಲ್ಪ, ಆಚರಣೆಯಡಿಯಲ್ಲಿ ವ್ಯಕ್ತ ಪಡಿಸಲ್ಪಟ್ಟ ಕಲಾ ಪ್ರದರ್ಶನ.
- ತ್ರಿವರ್ಣ ಕಲಾ ಕೇಂದ್ರ ಮಣಿಪಾಲ & ಕುಂದಾಪುರ ತರಗತಿಯಲ್ಲಿ ಕಲಾಭ್ಯಾಸಗೈಯುವ 19 ರಿಂದ 75 ವರ್ಷದ ಆಯ್ದ 23 ವಿದ್ಯಾರ್ಥಿಯರ 27 ಕಲಾಕೃತಿಗಳು.
- ಕಲಾವಿದ, ಮಾರ್ಗದರ್ಶಕ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ತ್ರಿವರ್ಣ ಕಲಾ ಕೇಂದ್ರದ ವಿದ್ಯಾರ್ಥಿಯರ 29ನೇ ಕಲಾಪ್ರದರ್ಶನ.
- ಕಲಾ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಅತ್ತುತ್ತಮ ಕಲಾಕೃತಿಯನ್ನು ಆಯ್ಕೆ ಮಾಡಿಸಿ, ವಿದ್ಯಾರ್ಥಿಯರಿಗೆ ಅತ್ತುತ್ತಮ ಸಾರ್ವಜನಿಕರ ಆಯ್ಕೆಯ ಪ್ರಶಸ್ತಿ ಮತ್ತು ಅತ್ಯುತ್ತಮ ಕಲಾಕೃತಿ ಪ್ರಶಸ್ತಿಯನ್ನು ಗೆಲ್ಲಿಸುವ ಅವಕಾಶ.
ದಿನಾಂಕ 12. 1. 2025 ಆದಿತ್ಯವಾರದಿಂದ 14. 12. 2025ನೇ ಮಂಗಳವಾರದವರೆಗೆ ಬೆಳಿಗ್ಗೆ 10.00ರಿಂದ ಸಂಜೆ 7.30ರ ತನಕ ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ. ಧನ್ಯವಾದಗಳೊಂದಿಗೆ,ಹರೀಶ್ ಸಾಗಾ ಕಲಾವಿದ ಮತ್ತು ಮಾರ್ಗದರ್ಶಕ ತ್ರಿವರ್ಣ ಕಲಾ ಕೇಂದ್ರ
.