

ಕ್ಯಾಥೋಲಿಕ್ ಧರ್ಮದ ಪರಮೋಚ್ಚ ಧರ್ಮ ಗುರು ಪೋಪ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹೌಸ್ಗೆ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ ಸೋಜಾರವರು ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ)ಇದರ ಕೇಂದ್ರಿಯ ಅಧ್ಯಕ್ಷರಾದ ಆಲ್ವಿನ್ ಡಿ ಸೋಜಾರವರು ತೆರಳಿ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುದರ ಮೂಲಕ ಶ್ರದಾಂಜಲಿ ಸಲ್ಲಿಸಿದರು.ಕ್ಯಾಥೋಲಿಕ್ ಧರ್ಮದ ಪರಮೋಚ್ಚ ಧರ್ಮ ಗುರು ಪೋಪ್ ಪ್ರಾನ್ಸಿಸ್ ಇವರ ಮರಣದ ವಾರ್ತೆ ತಿಳಿಯುತ್ತಿದ್ದಂತೆ ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಪ್ರಾರ್ಥನೆಯನ್ನು ನಡೆಸುವುದರ ಜೊತೆಗೆ ಪೋಪ್ರವರಿಗೆ ಗೌರವ ಸಲ್ಲಿಸಲು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹೌಸ್ ಗೆ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾ ಹಾಗೂ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಕೇಂದ್ರೀಯ ಅಧ್ಯಕ್ಷರಾದ ಶ್ರೀ ಅಲ್ವಿನ್ ಡಿ ಸೋಜಾ ರವರು ತೆರಳಿ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವುದರ ಮೂಲಕ ಅಂತಿಮ ನಮನವನ್ನು ಸಲ್ಲಿಸಿದರು. ಹನ್ನೆರಡು ವರ್ಷಗಳ ಕಾಲ ರೋಮನ್ ಕ್ಯಾಥೊಲಿಕ್ ಪ್ರಾಂತ್ಯದ ಪರಮೋಚ್ಚ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಪ್ರಪಂಚದೆಡೆ ಶಾಂತಿಯ ಸಂದೇಶವನ್ನು ಸಾರಿದ ಪೋಪ್ ಪ್ರಾನ್ಸಿಸ್ ಇವರು ಜಗತ್ತಿನ ರೋಮನ್ ಕ್ಯಾಥೋಲಿಕ್ ಸಮುದಾಯದ ಏಕತೆಗಾಗಿ ಮತ್ತು ಪ್ರೀತಿ ವಿಶ್ವಾಸದ ಮೂಲಕ ಪ್ರಪಂಚವನ್ನು ಗೆಲ್ಲಬಹುದು ಎಂಬ ಸಂದೇಶವನ್ನು ಸಾರಿದರು .ಇಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ| ಡಾ| ಪೀಟರ್ ಪೌಲ್ ಸಲ್ದಾನರವರ ಮೂಲಕ ಸಂತಾಪ ವ್ಯಕ್ತಪಡಿಸಿ ಧರ್ಮಾಧ್ಯಕ್ಷರ ನಿವಾಸದಲ್ಲಿ ಇಡಲಾದ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವ ಮೂಲಕ ಅಂತಿಮ ನಮನವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ರೆ! ಡಾ| ಪೀಟರ್ ಪೌಲ್ ಸಲ್ದಾನ, ಕಾಂಗ್ರೆಸ್ ನಾಯಕರುಗಳಾದ ಮನುರಾಜ್ ವಿಕಾಸ್ ಶೆಟ್ಟಿ, ಸಿರಾಜ್ ಬಜ್ಪೆ, ಯೋಗೇಶ್ ನಾಯಕ್, ನಿಸಾರ್ ಬಜಪೆ,ಕಥೊಲಿಕ್ ಸಭಾ ಸಿಟಿ ವಲಯದ ಅಧ್ಯಕ್ಷರಾದ ಅರುಣ್ ಡಿ ಸೋಜಾ ಜೊತೆಗಿದ್ದರು.



