ವರದಿ :-ಈಶ್ವರ್ ಸಿ ನಾವುಂದ.
ಕುಂದಾಪುರದ ಅರುಣ್ ಮಧ್ಯಸ್ಥ ಮತ್ತು ಲತಾ ಮಧ್ಯಸ್ಥರ ಪ್ರೀತಿಯ ಕುವರಿ ಕುಂದಾಪುರದ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವಲಾಸ್ಯ ಮಧ್ಯಸ್ಥಳು ತನ್ನ ಎಳೆಯ ವಯಸ್ಸಿನಲ್ಲಿಯೇ ಮಹತ್ತರವಾದ ಸಾಧನೆಯನ್ನು ಮಾಡಿ ಹಲವರ ಪ್ರಶಂಸೆಗೆ ಪಾತ್ರಲಾಗಿದ್ದಾಳೆ.
ಕರಾವಳಿ ಭಾಗದಲ್ಲಿಯ ಹಲವು ಗುರುಗಳಿಂದ ಯೋಗಾಭ್ಯಾಸವನ್ನು ಮಾಡಿರುವುದು ಡಾ. ನವೀನ್ ಕುಮಾರ್, ಕೆ ಆರ್ ವಿಷ್ಣು ಪ್ರಸಾದ್ ಶೆಟ್ಟಿ ರಂಜಿತ್ ಜಿಡಿ ಹಾಗೂ ಶ್ರೀ ಹರಿ ಅಯ್ಯಂಗಾರ್ ರವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದಾಳೆ ಯೋಗಭ್ಯಾಸದ ಜೊತೆಗೆ ಸಂಗೀತ ಮತ್ತು ಭರತನಾಟ್ಯ ಕಲಿಯುತ್ತಿರುವ ಇವರು ಶಾಲೆಯಲ್ಲಿ ಕಲಿಕೆಯಲ್ಲಿಯೂ ಮುಂದೆ ಇದ್ದು ಶಾಲೆಯಲ್ಲಿ ಆದರ್ಶ ವಿದ್ಯಾರ್ಥಿ ಎಂದು ಕರೆಸಿಕೊಂಡವರು ಆರೋಗ್ಯಕ್ಕಾಗಿ ಯೋಗ ಸೂರ್ಯ ನಮಸ್ಕಾರ ಸ್ಪರ್ಧೆಯಲ್ಲಿ ಪ್ರಥಮ yoga at home ಪ್ರಥಮ ಸ್ಥಾನ, ಯೋಗಕುಮಾರಿ ಪ್ರಥಮ ಸ್ಥಾನ ಜಿಲ್ಲಾ ಮಟ್ಟದ ಹಲವು ಯೋಗಗಳಲ್ಲಿ ಪ್ರಥಮ ಸ್ಥಾನ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಯೋಗದಲ್ಲಿ ಇವಳ ಸಾಧನೆ ಹೆಮ್ಮೆ ಪಡುವಂತದ್ದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಯೋಗಪಟುವಾಗಿ ಭಾಗವಹಿಸಿರುವುದು ಹಲವು ಗೌರವ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವುದು ಸೌಮ್ಯ ಸ್ವಭಾವದ ಲಾಸ್ಯ ಎಲ್ಲರ ಪ್ರೀತಿಗೆ ಪಾತ್ರಳು
ಇತ್ತೀಚಿಗೆ ಜೈ ಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಯೋಗಾ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಿ ಟಾಪ್ ಟೆನ್ ಯೋಗಾ ಸ್ಪರ್ಧೆಯಲ್ಲಿ ಏಳನೆಯ ಸ್ಥಾನ ಪಡೆದಿರುವುದು ಕರ್ನಾಟಕ ಮತ್ತು ನಮ್ಮ ಕರಾವಳಿಗೆ ಹೆಮ್ಮೆಯ ವಿಷಯವಾಗಿದೆ
ಈಕೆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಕ್ಷಕಾಶಿ ಕುಂದಾಪುರದಲ್ಲಿ ನೆಡೆದ ಯಕ್ಷಗಾನರಂಗ ಸ್ಥಳದಲ್ಲಿ
ಸಮ್ಮಿಲನ ಕಿರಣ್ ಆಚಾರ್, ಕೋಟೇಶ್ವರ, ಅಕ್ಷಯ್ ಕೋಟೇಶ್ವರ ನಾಗರಾಜ್ ಆಚಾರ್ ಹಟ್ಟಿಯಂಗಡಿ, ಗಜೇಂದ್ರ ಆಚಾರಿ ಕೋಣೆ.
ಶ್ರೀ ಮೆಕ್ಕೆ ಕಟ್ಟು ಮೇಳ ಹಾಗೂ ತೆಂಕು ಬಡಗು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನೆಡೆದ ಸರ್ವಾಂತ
ಸಂಪ್ರೀತ ಶ್ರೀಹರಿ ಯಕ್ಷಗಾನ ರಂಗಸ್ಥಳದಲ್ಲಿ ಹಲವು ಅತಿಥಿಗಳ ಸಮ್ಮುಖದಲ್ಲಿ ಯೋಗ ಪಟು ಲಾಸ್ಯ ಮಧ್ಯಸ್ಥ ಇವಳನ್ನು ಸನ್ಮಾನಿಸಲಾಯಿತು.