ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಜನರ ಆರೋಗ್ಯ ಹಾಗೂ ಪರಿಸರ ರಕ್ಷಣೆಗೆ ಮರ ಬೆಳೆಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಅರುಣ್ ಕುಮಾರ್ ಹೇಳಿದರು.
ತಾಲ್ಲೂಕಿನ ನಾರಮಾಕಲಹಳ್ಳಿ ಗ್ರಾಮದ ಕೆರೆ ಅಂಗಳದಲ್ಲಿ ಶುಕ್ರವಾರ ಧರ್ಮಸ್ಥಳ ಕಾಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಹಸಿರು ಸಂರಕ್ಷಣೆ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ನೆಟ್ಟ ಗಿಡಗಳು ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಆಂಜನೇಯರೆಡ್ಡಿ, ಅಮರಾವತಮ್ಮ, ಕೃಷ್ಣಪ್ಪ, ಕೆರೆ ಅಭಿವೃದ್ಧಿ ಸಮತಿ ಸದಸ್ಯರಾದ ವಾಲೆಪ್ಪ, ಚಂದ್ರಪ್ಪ, ಶಂಕರ್ ರೆಡ್ಡಿ, ಕಿರಣ್, ಮುರಳಿ ಮೋಹನ್, ಮುನಿಯಪ್ಪ, ಮಧು, ನವೀನ್, ರವಿ, ವೆಂಕಟೇಶಪ್ಪ, ಸೇವಾ ಪ್ರತಿನಿಧ ಚೈತ್ರ ಇದ್ದರು.