“ಸೋಂಕಿತರ ಪ್ರಯಾಣಕ್ಕೆತುರ್ತು ವಾಹನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೇವೆ”

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ, ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿತನ್ನ ಸೇವೆಸಲ್ಲಿಸುತ್ತಿದೆಎಂದುಸಂಸ್ಥೆಯ ಶ್ರೀನಿವಾಸಪುರತಾಲೂಕು ಯೋಜನಾಧಿಕಾರಿಗಳಾದ ಸುರೇಶ್‍ಗೌಡ.ಎಸ್‍ಅಭಿಪ್ರಾಯಪಟ್ಟರು.
ಸೋಂಕಿತರುಆಸ್ಟತ್ರೆಯಿಂದ ತೆರಳಲು ಅಥವಾಆಸ್ಟತ್ರೆಯಿಂದ ಹಿಂದಿರುಗಲು ಅನುಕೂಲವಾಗಲು ತುರ್ತು ವಾಹನಕ್ಕೆ ತಹಸೀಲ್ದಾರ್ ಮತ್ತುತಾಲೂಕುದಂಡಾಧಿಕಾರಿಕಛೇರಿಎದುರು ಚಾಲನೆ ನೀಡಿ, ರಾಜಾದ್ಯಂತಒಟ್ಟು 350 ವಾಹನಗಳನ್ನು ಪರಮ ಪೂಜ್ಯಧರ್ಮಾಧಿಕಾರಿಗಳಾದ ಡಾ||ವೀರೇಂದ್ರ ಹೆಗ್ಗಡೆರವರು ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ ವ್ಯವಸ್ಥೆಮಾಡಲಾಗಿದೆ. ಸಾಮಾನ್ಯ ವರ್ಗದವರನ್ನುಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನುಪ್ರಾರಂಭಿಸಲಾಗಿದೆಎಂದರು.
ಈ ವೇಳೆ ತಹಸೀಲ್ದಾರ್ ಶ್ರೀನಿವಾಸ್‍ರವರುತಾಲೂಕು ಆರೋಗ್ಯಾಧಿಕಾರಿಗಳಾದ ಶ್ರೀಮತಿ ವಿಜಯರವರಿಗೆ ವಾಹನವನ್ನು ಹಸ್ತಾಂತರ ಮಾಡಿ ಮಾತನಾಡಿ, ನಿಜಕ್ಕೂಅತ್ಯಂತಉಪಯುಕ್ತ ಕೆಲಸ. ಇಲ್ಲಿನಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿಧರ್ಮಾಧಿಕಾರಿಡಾ||ವೀರೇಂದ್ರ ಹೆಗ್ಗಡೆಅವರಸಹಕಾರದ ಮೇರೆಗೆಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಸರ್ಕಾರಿಆಸ್ಟತ್ರೆಗೆಉಚಿತಆಂಬ್ಯುಲೆನ್ಸ್‍ಕೊಡುಗೆ ನೀಡಿರುವುದುಅತ್ಯಂತಶ್ಯಾಘನೀಯವಿಚಾರಎಂದಅವರು, ಇದಕ್ಕೆ ಸಹಕರಿಸಿದ ಧರ್ಮಾಧಿಕಾರಿಗಳಾದ ಡಾ||ವೀರೇಂದ್ರ ಹೆಗ್ಗಡೆರವರಿಗೆಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಈ ಸಂಧರ್ಭದಲ್ಲಿತಾಲೂಕು ಆರೋಗ್ಯಾಧಿಕಾರಿಗಳಾದ ಶ್ರೀಮತಿ ವಿಜಯಹಾಗೂ ತಾಲೂಕು ಪಂಚಾಯ್ತಿ ಸದಸ್ಯರಾದ ಶ್ರೀಮತಿ ನಾಗವೇಣಿರೆಡ್ಡಿರವರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ ಟ್ರಸ್ಟ್ (ರಿ) ಶ್ರೀನಿವಾಸಪುರಹಣಕಾಸು ಪ್ರಬಂದಕರಾದಆನಂದರಾವ್ ಟಿ ಕೆ ಹಾಗೂ ಆಡಳಿತಾತ್ಮಕ ಪ್ರಬಂಧಕರಾದದರ್ಶನ್ ಹೆಚ್.ಎನ್ ಹಾಗೂನ ಕಛೇರಿ ಸಹಾಯಕರಾದ ಮಲ್ಲಿಕಾರ್ಜುನಉಪಸ್ಥಿತರಿದ್ದರು
.