ಶ್ರೀನಿವಾಸಪುರ 1 : ಕಾಲು ಬಾಯಿ ಜ್ವರ ರೋಗವು ಒಂದು ಹಸುವಿನಿಂದ ಮೊತ್ತೊಂದು ಹಸುವಿಗೆ ರೋಗವನ್ನು ಹರಡವುದನ್ನು ತಡೆಯಬೇಕಾದಲ್ಲಿ ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಬೇಕು ಎಂದು ಕೋಮುಲ್ ನಿರ್ದೇಶಕ ಎನ್.ಹನುಮೇಶ್ ಸಲಹೆ ನೀಡಿದರು.
ತಾಲೂಕಿನ ಗುಂಡಮನತ್ತ ಗ್ರಾಮದ ಹಾಲು ಉತ್ಪಾದಕರ ಸಹಾಕರ ಸಂಘದ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಶ್ರೀನಿವಾಸಪುರ ಹಾಗೂ ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಶ್ರೀನಿವಾಸಪುರ ಇವರ ಸಂಯುಕ್ತಾಶ್ರಯದಲ್ಲಿ ಎನ್ಎಡಿಸಿಪಿ ಯೋಜನೆಯಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಗರ್ಭ ಧರಿಸಿರುವ ರಾಸುಗಳಿಗೂ, ಕರುಗಳಿಗೂ ಸೇರಿ ವರ್ಷಕ್ಕೆ ಎರಡು ಬಾರಿ ನೀಡುವುದರ ಜೊತೆಗೆ , ರಾಸುಗಳಿಗೆ ಚರ್ಮಗಂಟು ರೋಗ ಗ್ರಾಮದಲ್ಲಿ ಕಂಡು ಬಂದಲ್ಲಿ ಇಲಾಖೆ ಮತ್ತು ಶಿಬಿರ ಕಛೇರಿಗಳಿಗೆ ತುರ್ತಾಗಿ ಮಾಹಿತಿ ನೀಡಿ ರಾಸುಗಳಿಗೆ ಉಂಟಾಗುವ ರೋಗಗಳಿಂದ ಮುಕ್ತವಾಗಬೇಕೆಂದು ಕರೆ ನೀಡಿದರು.
ಒಕ್ಕೂಟದಿಂದ ನೀಡುವ ರಾಸು ವಿಮೆ ಕಡ್ಡಾಯವಾಗಿ ಮಾಡಿಸಿ ಉತ್ತಮ ಗುಣಮಟ್ಟದ ಹಾಲನ್ನು ಸಹಕಾರ ಸಂಘಗಳಿಗೆ ಸರಬರಾಜು ಮಾಡುಬೇಕೆಂದು ತಿಳಿಸಿದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಮಂಜುನಾಥರೆಡ್ಡಿ, ಕೋಲಾರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಪ್ರಭಾರೆ ವ್ಯವಸ್ಥಾಪಕ ಡಾ|| ಜಿ.ಮಾಧವ, ಕೇಂದ್ರ ಕಛೇರಿಯ ಉಪವ್ಯವಸ್ಥಾಪಕ ಡಾ|| ವಿ.ಎನ್.ಶ್ರೀಕಾಂತ, ಶ್ರೀನಿವಾಸಪುರ ತಾಲೂಕಿನ ವ್ಯವಸ್ಥಾಪಕ ಕೆ.ಎಂ. ಮುನಿರಾಜು, ಕೋಮುಲ್ನ ಸಿಬ್ಬಂದಿಗಳಾದ ನಾಗರಾಜ್, ಎನ್ .ಶಂಕರ್, ಡಾ|| ಹೆಚ್.ವಿ.ಲೋಕೇಶ್, ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಪಿ.ಕೆ.ನರಸಿಂಹರಾಜು, ಎಸ್.ವಿನಾಯಕ, ಜಿ.ಎನ್.ಗೋಪಾಲಕೃಷ್ಣಾರೆಡ್ಡಿ ಇದ್ದರು.
ಪೋಟು 1 : ತಾಲೂಕಿನ ಗುಂಡಮನತ್ತ ಗ್ರಾಮದ ಹಾಲು ಉತ್ಪಾದಕರ ಸಹಾಕರ ಸಂಘದ ಆವರಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಕೋಮುಲ್ ನಿರ್ದೇಶಕ ಎನ್.ಹನುಮೇಶ್ ಚಾಲನೆ ನೀಡಿದರು.