

ಕುಂದಾಪುರ, ಸ್ಥಳೀಯ ಭಾಗ್ಯವಂತೆ ರೋಜರಿಮಾತ ಚರ್ಚಿನ ಸಭಾಭವನದಲ್ಲಿ ಮೇ ೨ ರಂದು ವಲಯ ಮಟ್ಟದಲ್ಲಿ ಭಾನುವಾರ ಕ್ರೆಸ್ತ ಮಕ್ಖಳಿಗೆ ಕ್ರೆಸ್ತ ಶಿಕ್ಷಣ ಕಲಿಸುವ ಶಿಕ್ಷರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಂದೇಶ ನೀಡಿದರು. ಶಿಕ್ಷರ ಕಾರ್ಯಗಾರವನ್ನು ಉಡುಪಿ ಧರ್ಮಪ್ರಾಂತ್ಯದ ದಿವ್ಯ ಜ್ಯೋತಿ ಕೇಂದ್ರದ ನಿರ್ದೇಶಕರಾದ ಧರ್ಮಗುರು ವಂ|ಸಿರಿಲ್ ಲೋಬೊ ಮತ್ತು ಮಂಗಳೂರು ಧರ್ಮಪ್ರಾಂತ್ಯದ ದಿವ್ಯಧಾಮ ಕೇಂದ್ರದ ನಿರ್ದೇಶಕರಾದ ಧರ್ಮಗುರು ವಂ|ಬೊನಿಫಾಸ್ ಪಿಂಟೊ ತರಬೇತಿ ನೀಡಿದರು. ಕುಂದಾಪುರ ವಲಯದ ಎಲ್ಲ ಚರ್ಚಿನಲ್ಲಿ ಭಾನುವಾರ ಕ್ರೈಸ್ತ ಮಕ್ಕಳಿಗೆ ಕ್ರೆಸ್ತ ಶಿಕ್ಷಣ ಕಲಿಸುವ ಶಿಕ್ಷಕರು ಹಾಜರಿದ್ದು ಕಾರ್ಯಗಾರದ ಸದುಪಯೋಗ ಪಡೆದರು, ಹಾಜರಿದ್ದ ಶಿಕ್ಷಕರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ವಲಯದ ಎಲ್ಲ ಇಗರ್ಜಿಗಳ ಧರ್ಮಗುರುಗಳು ಕೂಡ ಹಾಜರಿದ್ದರು. ಕುಂದಾಪುರ ಭಾಗ್ಯವಂತೆ ರೋಜರಿಮಾತ ಚರ್ಚಿನ ಸಹಾಯಕ ಧರ್ಮಗುರು ಕಾರ್ಯಗಾರದ ಜವಾಬ್ದಾರಿಯನ್ನು ನಿರ್ವಹಿಸಿದರು.




