

ಮಂಗಳೂರು,: ಮಾದಕ ದ್ರವ್ಯ ಸೇವನೆಯು ಇಂದು ಯುವಜನರಲ್ಲಿ ಹೆಚ್ಚುತ್ತಿರುವ ಸನಸ್ಯೆಯಾಗಿದ್ದು. ಯುವಕರಲ್ಲಿ ಮಾದಕ ದ್ರವ್ಯ ಸೇವನೆಯು ಗಂಭೀರ ಸಮಸ್ಯೆಯಾಗಿ ಅನೇಕರ ಜೀವನವನ್ನು ಹಾಳುಮಾಡಿದೆ. ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆಯನ್ನು ಎದುರಿಸಲು ಶಿಕ್ಷಕರಲ್ಲಿ ಜಾಗೃತಿ ಮೂಡಿಸಲು, ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ಕಾರ್ಯಕ್ರಮ ಸೈಂಟ್ ಆಗ್ನೆಸ್ ಪ.ಪೂ.ಕಾಲೇಜಿನಲ್ಲಿ ನಡೆಯಿತು.
ಲಿಂಕ್ ಆಂಟಿ ಅಡಿಕ್ಷನ್ ಸೆಂಟರ್‌ನ ಆಡಳಿತಾಧಿಕಾರಿ ಶ್ರೀಮತಿ ಲಿಡಿಯಾ ಲೋಬೋ ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ’ಅವರು ಆಲ್ಕೋಹಾಲ್, ಸಿಗರೇಟ್, ನೈಸರ್ಗಿಕ ಮತ್ತು ಸಂಶ್ಲೇಷಿತ ಮಾದಕ ವ್ಯಸನದ ಬಗ್ಗೆ ಮತ್ತು ವಿವಿಧ ನಿದರ್ಶನಗಳ ಮೂಲಕ ವ್ಯಕ್ತಿಗಳು ಮತ್ತು ಕುಟುಂಬಗಳ ಆರೋಗ್ಯ ಮತ್ತು ಜೀವನದ ಮೇಲೆ ಅವುಗಳ ದುಷ್ಪರಿಣಾಮಗಳ ಬಗ್ಗೆ’ ಮಾತನಾಡಿದರು. ವ್ಯಸನಮುಕ್ತ ಕೇಂದ್ರದಲ್ಲಿ ವ್ಯಸನಿಗಳ ಚಿಕಿತ್ಸೆಯಲ್ಲಿ ಅನುಸರಿಸುತ್ತಿರುವ ದಿನಚರಿಯನ್ನೂ ಅವರು ವಿವರಿಸಿದರು. ಹಿಂದಿ ವಿಭಾಗದ ಎಚ್‌ಒಡಿ ಡಾ.ಪಿ.ವಿ.ಶೋಭಾ ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು, ಪ್ರಾಂಶುಪಾಲೆ ಸಿಸ್ಟರ್ ನೊರಿನ್ ಡಿಸೋಜ ಪುಷ್ಪನಮನ ಸಲ್ಲಿಸಿದರು. ವಾಣಿಜ್ಯ ವಿಭಾಗದ ಶ್ರೀಮತಿ ಲೊವಿನಾ ಅರಾನ್ಹಾ ವಂದಿಸಿದರು.







