

ಗಂಗೊಳ್ಳಿ; ಧರ್ಮಾಚರಣೆ ಆಯೋಗದ ಮುಂದಾಳತ್ವದಲ್ಲಿ ಮಾರ್ಚ್ 30 ಭಾನುವಾರದಂದು ಧರ್ಮಾಚರಣೆ ಸಮಿತಿಯ ಸದಸ್ಯರಿಗೆ ತರಬೇತಿ ಮತ್ತು ಧರ್ಮಾಚರಣೆಯ ಪ್ರಮುಖ ವಿಷಯಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಚರಣೆ ಆಯೋಗದ ನಿರ್ದೇಶಕರಾದ ವಂದನಿಯ ಗುರು ವಿಲ್ಸನ್ ಡಿಸೋಜರವರು ಹಾಜರಿದ್ದರು. ಇಗರ್ಜಿಯ ಧರ್ಮ ಗುರುಗಳಾದ ವಂದನೀಯ ಗುರು ಥಾಮಸ್ ರೋಶನ್ ಡಿಸೋಜರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಯೋಗದ ಸಂಚಾಲಕಿ ಶ್ರೀಮತಿ ಜೆನ್ನಿ ಬುತ್ತೇಲ್ಲೊರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿವನ್ ರೆಬೆರೊರವರು ವಂದಿಸಿದರು.
