ತೊಟ್ಲಿ : ಅರ್ಹ ಫಲಾನುಭವಿಗಳಿಗೆ ಮನೆಯನ್ನ ನೀಡದೆ ವಂಚಿಸಿರುವ ಪಂಚಾಯತಿ ಅಧ್ಯಕ್ಷರು, ಅಧ್ಯಕ್ಷರ ಪತಿ, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕ ಗ್ರಾಮಸ್ಥರ ಮನವಿ

ಕೋಲಾರ,ನ.10: ತೊಟ್ಲಿ ಗ್ರಾಮ ಪಂಚಾಯತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಯನ್ನ ನೀಡದೆ ವಂಚಿಸಿರುವ ಪಂಚಾಯತಿ ಅಧ್ಯಕ್ಷರು, ಅಧ್ಯಕ್ಷರ ಪತಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ತೊಟ್ಲಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 4 ವರ್ಷಗಳಿಂದ ದಲಿತ ಕುಟುಂಬಕ್ಕೆ ಸೇರಿದ ನಾಗವೇಣಿ ಕೋಂ ಮೇಘನಾಥ್ ಎಂಬ ದಲಿತ ಕುಟುಂಬವು ಗುಡಿಸಿಲಿನಲ್ಲಿ ವಾಸವಾಗಿದ್ದು, ಮಳೆ ಗಾಳಿ ಬಂದ ಸಂದರ್ಭದಲ್ಲಿ ಅಂಬೇಡ್ಕರ್ ಭವನದ ಚಾವಣಿಯ ಕೆಳಗಡೆ ವಾಸ ಮಾಡುತ್ತಿದ್ದಾರೆ. ತೊಟ್ಲಿ ಗ್ರಾಮ ಪಂಚಾಯಿತಿಯಲ್ಲಿ ಅಂಬೇಡ್ಕರ್ ಅವಾಸ್ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಸಹ ಅಭಿವೃದ್ಧಿ ಅಧಿಕಾರಿಗಳು, ಹಾಗೂ ಅಧ್ಯಕ್ಷರ ಪತಿ ಉದ್ದೇಶ ಪೂರ್ವಕವಾಗಿ ಇವರಿಗೆ ಮನೆ ನೀಡದೆ ಇವರ ಹಿಂಬಾಲಿಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಹಾಗೂ ಆರ್.ಸಿ.ಚಾವಣೆ ಇರುವವರೆಗೂ ಸಹ ಮನೆ ನೀಡುವ ಮೂಲಕ ಅರ್ಹ ಫಲಾನುಭವಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.
ಇದರ ಜೊತೆಗೆ ಒಬ್ಬರಿಗೆ ಬೇರೆ ಬೇರೆ ಹೆಸರಿನಲ್ಲಿ 2 ಮನೆಯನ್ನ ನೀಡಿರುತ್ತಾರೆ. ಮನೆ ನೀಡುವಾಗ ಗ್ರಾಮ ಸಭೆ ಹಾಗೂ ವಾರ್ಡ್ ಸಭೆ ನಡೆಸುವುದು ಕಡ್ಡಾಯವಾಗಿರುತ್ತದೆ. ಅದರ ಪ್ರಕಾರ ಇವರು ಗ್ರಾಮ ಸಭೆಯು ಕೋರಂ ಇಲ್ಲದ ಕಾರಣ ಸಭೆಯನ್ನು ಮುಂದೂಡಲು ಅಧ್ಯಕ್ಷರು ಸೂಚಿಸಿರುತ್ತಾರೆ. ಅದನ್ನು ಪಾಲನೆ ಮಾಡದೆ ಮತ್ತೊಂದು ಸಭೆಯನ್ನು ಸಹ ಕರೆಯದೇ ಹಿಂದಿನ ಸಭೆಯ ನಡುವಳಿ ಪುಸ್ತಕದಲ್ಲಿ ಫಲಾನುಭವಿಗಳ ಪಟ್ಟಿಯನ್ನು ಮಾಡಿ ಇವರ ಇಷ್ಟಾನುಸಾರ ನಡೆದುಕೊಂಡಿರುತ್ತಾರೆ. ಇದನ್ನು ಗ್ರಾಮ ಪಂಚಾಯಿತಿ ಸದಸ್ಯರನ್ನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರು ಸೇರಿ ಬೆದರಿಕೆಯನ್ನು ಹಾಕಿ ಕೊಂಡಿರುತ್ತಾರೆ. ಆದ ಕಾರಣ ಇವರು ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಮನೆಯನ್ನ ನೀಡಬೇಕಾಗಿ ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ತೊಟ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನವೀನ್, ಮಂಜುನಾಥ್, ಜನಾರ್ಧನ್, ಅನಿತಾ, ಸುಶೀಲಮ್ಮ, ಸರಸ್ಪತಮ್ಮ ಉಪಸ್ಥಿತರಿದ್ದರು.