ಆರ್‍ಎಲ್ ಜಾಲಪ್ಪ ಆಸ್ಪತ್ರೆ ಕೋಲಾರದಲ್ಲಿ ಟೋಟಲ್ ಟಿ.ಎಂ.ಜೆ ರೀಪ್ಲೇಸ್ಮೆಂಟ್

ಕೋಲಾರ,ಮಾ.3: ಮುಖದಲ್ಲಿ ಚಲಿಸುವ ಏಕೈಕ ಮೂಳೆ ಕೆಳದವಡೆ. ಕೆಳದವಡೆ ಮತ್ತು ತಲೆ ಬುರುಡೆಯ ಜಂಟಿ Temporomandibular joint (TMJ) ತಲೆ ಬುರುಡೆಯ ಫೋಸಾದಲ್ಲಿ ಸರಿಯುವುದರಿಂದ ಕೆಳದವಡೆಯ ಚಲನೆ ಸಾದ್ಯವಾಗುತ್ತದೆ. ಕೆಳದವಡೆಗೆ ಪೆಟ್ಟುಬಿದ್ದು, ಜಂಟಿ ಸುತ್ತ ರಕ್ತಸ್ರಾವವಾಗಿ ಕ್ರಮೇಣ ತಲೆ ಬುರುಡೆ ಜೊತೆ ಸೇರಿ ಒಂದೇ ಮೂಳೆಯಾಗಿ ದವಡೆಯ ಚಲನೆಯನ್ನು ನಿಬರ್ಂಧಿಸುವುದನ್ನು ಖಿಒಎ ಂಟಿಞಥಿಟosis (ಟಿ.ಎಂ.ಜೆ.ಆಂಕಾಲಸೀಸ್) ಎಂದು ಕೆರಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಯಿ ತೆಗೆಯುವುದು ಮತ್ತು ಆಹಾರ ಸೇವನೆಯಲ್ಲಿ ತೊಡುಕು ಕಂಡುಬರುತ್ತದೆ.
ಆರ್‍ಎಲ್ ಜಾಲಪ್ಪ ಆಸ್ಪತ್ರೆಯದಂತ ವೈದ್ಯಕೀಯ ವಿಭಾಗದಲ್ಲಿ ಇಂತಹ ತೊಂದರೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕಿ ಅಖಿಲಳಿಗೆ (ಹೆಸರು ಬದಲಾಯಿಸಲಾಗಿದೆ) ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಅಖಿಲ 3 ವರ್ಷದ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಕೆಳದವಡೆ ಮತ್ತು ಕಾಲಿಗೆ ಪೆಟ್ಟುತಗುಲಿತ್ತು. ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದ ಹುಡುಗಿಯ ಕೆಳದವಡೆಯ ಪೆಟ್ಟನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಾಯಿ ತೆಗೆಯುವುದು ದಿನದಿಂದ ದಿನಕ್ಕೆ ಕಡಿಮೆಯಾಗಿ ಕೆಲ ವರ್ಷಗಳಿಂದ ಸಂಪೂರ್ಣವಾಗಿ ಬಂದ್ ಆಗಿತ್ತು.
ದಂತ ವಿಭಾಗದ ಮುಖ್ಯಸ್ಥೆ ಡಾ|| ದೀಪಿಕ ಕೆಂಕೆರೆ ಮತ್ತು ಅವರ ತಂಡದ ಡಾ||ಮಲ್ಲಿಕಾ ಪಿ.ರೆಡ್ಡಿ ಹಾಗೂ ಡಾ||ಹರ್ಷಿತ ಕೆ.ಆರ್, ತಲೆ ಬುರುಡೆಯ ಜೊತೆಕೂಡಿಕೊಂಡಿದ್ದ ಕೆಳದವಡೆಯ ಜಂಟಿಯನ್ನು ಬಿಡಿಸಿ ದವಡೆಯ ಚಲನೆಗೆ ಪೂರಕವಾಗಲು, ಭೋಪಾಲ್ ಮಧ್ಯ ಪ್ರದೇಶದಲ್ಲಿ ತಯಾರಿಸಿದ ಕೃತಕ ಜಂಟಿಯನ್ನು ಅಳವಡಿಸಲಾಗಿದೆ. ಅರವಳಿಕೆ ವಿಭಾಗದ ಮುಖ್ಯಸ್ಥ ಡಾ||ರವಿ.ಎಂ ಮತ್ತು ಅವರ ತಂಡದ ಡಾ|| ಸುಜಾತ.ಎಂ.ಪಿ ಯಶಸ್ವಿಯಾಗಿ ಅರವಳಿಕೆಯನ್ನು ನೀಡಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಕೆಳದವಡೆಯ ಚಲನೆ ಪುನ: ಸ್ಥಾಪನೆಯಾಗಿದೆ. ಹಲವಾರು ವರ್ಷಗಳ ನಂತರ ಅಖಿಲಳಿಗೆ ಸಾಮಾನ್ಯ ಆಹಾರವನ್ನು ಸೇವಿಸಲು ಸಾಧ್ಯವಾಗಿದೆ. ಶಸ್ತ್ರಚಿಕಿತ್ಸೆಯ 6 ತಿಂಗಳುವರೆಗೂ ಬಿಡಿಸಿದ ಮೂಳೆ ಜಂಟಿತಲೆ ಬುರುಡೆಯ ಜೊತೆ ಮರುಜೋಡಣೆಯ ಅತಂಕವಿರುವುದರಿಂದ ಬಾಯಿ ತೆಗೆಯುವ ವ್ಯಾಯಾಮ ಪ್ರಮುಖ ಪಾತ್ರವಹಿಸುತ್ತದೆ.
ಆರ್‍ಎಲ್ ಜಾಲಪ್ಪಆಸ್ಪತ್ರೆಯಲ್ಲಿ ಪ್ರಪ್ರಥಮ ಬಾರಿ ಟೋಟಲ್ ಜಾಯಿಂಟ್ ರೀಪ್ಲೇಸ್ಮೆಂಟ್(ಖಿಎಖ) ಮಾಡಲಾಗಿದೆ.ಈ ಶಸ್ತ್ರಚಿಕಿತ್ಸೆ ಸಾಮಾನ್ಯವಾಗಿ ನಡೆಯದಿರಲು ಕಾರಣ, ಪರಿಣಿತ ಶಸ್ತ್ರಚಿಕಿತ್ಸಕರ ಅಲಭ್ಯತೆ ಮತ್ತು ಕೃತಕ ಜಂಟಿಗೆ ತಗಲುವ ವೆಚ್ಚ.
ಅಖಿಲಳ ಶಸ್ತ್ರಚಿಕಿತ್ಸೆಗೆ ಪೂರಕವಾದ ಎಲ್ಲಾ ವಿಧಿಗಳನ್ನು ಪೂರೈಸುವುದರಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆ ಮತ್ತು ಮಕ್ಕಳ ವಿಭಾಗದ ಕೊಡುಗೆ ಅಪಾರ.