

ಶ್ರೀನಿವಾಸಪುರ : ಮಾವು ಬೆಳೆಯನ್ನು ನಂಬಿಕೊಂಡಿರುವ ರೈತರಿಗೆ ಮಾವು ಬೆಳೆಯು ಬಹುತೇಕ ಕೈಕೊಟ್ಟಿತ್ತು. ಆದರೆ ಈ ಭಾರಿ ಟೊಮೇಟೊ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು ಟಮೋಟೋ ಬೆಳೆಯನ್ನು ಬೆಳೆದ ರೈತನಿಗೆ ಜಾಕ್ಪಾಟ್ಬೆಳೆಯನ್ನು ಬೆಳೆದ ರೈತನಿಗೆ ಒಂದು ರೀತಿಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು, ರೈತನಿಗೆ ಜಾಕ್ಪಾಟ್ ಹೊಡೆಯುತ್ತಿದೆ.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಟೊಮೇಟೊ ವಹಿವಾಟು ಜೋರಾಗಿ ನಡೆಯಿತು. 15 ಕೆಜಿ ತೂಗುವ ಟೊಮೇಟೊ ಬಾಕ್ಸೊಂದು ರೂ. 850 ದವರೆಗೆ ಮಾರಾಟವಾಯಿತು.
ತಾಲೂಕಿನ ಬುಹುತೇಕ ಟೊಮೇಟೊ ಬೆಳೆಗಳಿಗೆ ನುಶಿ ರೋಗವು ಹರಡಿದ್ದು ಇದರಿಂದ ರೈತರು ಟೊಮೇಟೊ ಬೆಳೆಗೆ ಬೆಲೆ ಇದೆ ಆದರೆ , ಫಸಲು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. “ಹಲ್ಲು ಇದ್ದವರಿಗೆ ಕಡಲೆ ಇಲ್ಲ. ಕಡಲೆ ಇದ್ದವರಿಗೆ ಹಲ್ಲು ಇಲ್ಲ” ಎಂಬ ಗಾದೆ ಎಂಬಂತೆ ಇಂದಿನ ಟೊಮೇಟೊ ಬೆಳೆಯ ಪರಿಸ್ಥಿತಿ. ಇರುವುದರಲ್ಲಿ ಮಾರುಕಟ್ಟೆಗೆ ಟೊಮೇಟೊ ತಂದಿದ್ದ ರೈತರು ಹೆಚ್ಚಿನ ಬೆಲೆಗೆ ಮಾರಾಟವಾದ್ದರಿಂದ ಹರ್ಷಚಿತ್ತರಾಗಿ ನಿಟ್ಟುಸಿರು ಬಿಡುವ ಪರಿಸ್ಥಿತಿ ಉಂಟಾಗಿದೆ.