ಶ್ರೀನಿವಾಸಪುರ 1 : ಟಮೋಟೋಗೆ ಬೆಲೆ ಇದೆ, ಆದರೆ ಅದಕ್ಕೆ ತಕ್ಕಂತೆ ಫಸಲು ಇಲ್ಲದೆ ರೈತ ನಷ್ಟವನ್ನು ಅನುಭವಿಸುತ್ತಿದ್ದು, ತಾಲೂಕಿನ ಸುಮಾರು 700 ಹೆಕ್ಟೇರ್ ನಷ್ಟು ಟಮೋಟೋ ಬೆಳೆದಿದ್ದಾರೆ. ರಾಯಲ್ಪಾಡು ಬಳಿಯ ಯಂಡಗುಟ್ಟಪಲ್ಲಿಯ ಸುಬ್ಬರಾಮು ತೋಟಕ್ಕೆ , ತಾಡಿಗೋಳ್ನ ತಿಪ್ಪನ್ನ ತೋಟಕ್ಕೆ ವಿಜ್ಞಾನಿಗಳ ತಂಡ ಬೇಟಿ ನೀಡಿ ಪರಿಶೀಲಿಸಿದರು.
ಬಹುತೇಕ ಟಮೋಟೋ ಬೆಳೆಯು ನುಸಿ ರೋಗ ಪೀಡಿತವಾಗಿದ್ದು, ರೋಗ ನಿರ್ಮೂಲನೆಗಾಗಿ ರೈತರು ಅನುಭವಿ ರೈತರ ಹಾಗೂ ಔಷಧಿ ಅಂಗಡಿಗಳ ಸಲಹೆ ಪಡೆದು ಔಷಧಿಗಳಿಗಾಗಿ ಸಾವಿರಾರು ರೂಗಳನ್ನು ವ್ಯಯ ಮಾಡಿ ಸಹ ಗಿಡಗಳಿಗೆ ರೋಗವು ನಿರ್ಮೂಲನೆಯಾಗದೆ ರೈತರು ತಮ್ಮ ಜೇಬು ಖಾಲಿ ಮಾಡಿಕೊಳ್ಳುವುದರ ಮಾಸಿಕವಾಗಿ ಚಿಂತನೆಗೆ ಒಳಪಟ್ಟಿದ್ದಾರೆ.
ಕೃಷಿ ಕಲ್ಯಾಣ ಇಲಾಖೆ ನವದೆಹಲಿಯ ಸದಸ್ಯ ಕಾರ್ಯದರ್ಶಿ ಡಾ|| ಡಿ.ಜೆ.ಬ್ರಹ್ಮ ಮಾತನಾಡಿ ಈ ಭಾಗದ ಬಹುತೇಕ ರೈತರು ಟಮೋಟೋ ಬೆಳೆಗಳನ್ನು ಹಾಕಿದ್ದು, ಈ ಭಾಗದಲ್ಲಿ ಬಿಸಿಲಿನ ತಾಪಮಾನವು ಜಾಸ್ತಿಯಾಗಿದ್ದು, ಸರಿಯಾದ ಸಮಯಕ್ಕೆ ಮಳೆಯಾಗದೆ, ವಾತವರಣದಿಂದ ಏರುಪೇರಿನಿಂದಾಗಿ ಈ ರೀತಿಯಾದ ಘಟನೆ ನಡೆದಿದೆ. ಅಲ್ಲದೆ ಸೀಡ್ಸ್ ಮಾರುವವರು ಹಣದ ಅಮೀಷಕ್ಕಾಗಿ ಸೀಡ್ಸ್ ಕಂಪನಿಯಿಂದಲೂ ಇದಕ್ಕೊಂದು ಕಾರಣ, ಅಲ್ಲದೆ ನರ್ಸರಿ ಮಾಲೀಕರು ಬೀಜೋಪಚಾರ ಮಾಡಿ ಗಿಡಬೆಳಸುವಾಗ ವ್ಯಸ್ಥಿತವಾಗಿ ಮಾಡದೇ ಇರುವುದು ಇದಕ್ಕೊಂದು ಕಾರಣ . ಟಮೋಟೋ ಗಿಡಗಳಲ್ಲಿ ಬಿಳೆನೊಣ ಕಾಟವು ನುಶಿ ರೋಗಕ್ಕೆ ಒಂದು ರೀತಿಯಾದ ಕಾರಣವಾಗಿದೆ.
ಆಯ್ದ ತೋಟಗಳಿಗೆ ಬೇಟಿ ನೀಡಲಾಗಿ ತೋಟಗಳ ಬೆಳೆಗಳನ್ನು ಹಾಗು ಫಸಲನ್ನು ಪರೀಶಿಲಿಸಲಾಗಿದ್ದು, ರೋಗಕ್ಕೆ ಕಾರಣವನ್ನು ಸಂಶೋಧನೆ ನಡೆಸಿ ಅತಿಶೀಘ್ರವಾಗಿ ಪರಿಹಾರ ನೀಡುವುದಾಗಿ ತಿಳಿಸಿದರು.
ಕೃಷಿ ಕಲ್ಯಾಣ ಇಲಾಖೆ ತಂಡವು ನೆರೆಯ ಆಂದ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕೆಲ ತೋಟಗಳಿಗೆ ಬೇಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಕಲ್ಯಾಣ ಇಲಾಖೆ ಸದಸ್ಯ ಡಾ||ಕೌಲ್, ಬೆಂಗಳೂರಿನ ತರಕಾರಿ ವಿಭಾಗದ ಜಂಟಿ ನಿರ್ದೇಶಕ ಡಾ||ಧನ್ರಾಜ್, ಬೆಂಗಳೂರಿನ ವಿಭಾಗದ ತೋಟಕಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ|| ವಿಶ್ವನಾಥ್, ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ . ಕೋಲಾರ, ಉಪನಿರ್ದೇಶಕ ತೋಟಕಾರಿಕೆ ಇಲಾಖೆ ಚಿಕ್ಕಬಳ್ಳಾಪುರ ಗಾಯತ್ರಿ, ತೋಟಗಾರಿಕೆ ಸಂಸೋಧನ ಕೇಂದ್ರ ಹೆಸರುಘಟ್ಟ ವಿಜ್ಞಾನಿ ಡಾ|| ಪ್ರಸನ್ನ, ಬಾಗಲಕೋಟೆ ವಿಶ್ವವಿದ್ಯಾನಿಲಯದ ತೋಟಗಾರಿಕೆ ಸಹಸಂಶೋಧನಾ ನಿರ್ದೇಶಕ ಡಾ|| ಎಸ್.ಎಲ್.ಜಗದೀಶ್, ಕೋಲಾರ ಕೃಷಿ ಕೇಂದ್ರ ಮುಖ್ಯಸ್ಥ ಶಿವಾನಂದ ಹೊಂಗಲ, ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾದ್ಯಾಪಕರಾದ ಆಂಜನೇಯರೆಡ್ಡಿ, ಜಗದೀಶ್ ಕೆವಿಕೆ ಕೃಷಿ ಕೇಂದ್ರದ ವಿಜ್ಞಾನಿ ಸದಾನಂದ ಮುಶ್ರಿಫ್, ಶ್ರೀನಿವಾಸಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ , ಶ್ರೀನಿವಾಸಪುರ ತೋಟಗಾರಿಕೆ ಇಲಾಖೆಯ ನಿರ್ದೇಶಕ ಬೈರೆಡ್ಡಿ, ಸಿಬ್ಬಂದಿ ಹರೀಶ್,ರಾಜೇಶ್ ಹಾಗೂ ಕೋಲಾರ ಮತ್ತು ಚಿಂತಾಮಣಿಯ ಕೃಷಿ ಸಂಶೋದನ ಕೇಂದ್ರದ ವಿಜ್ಞಾನಿಗಳು ಇದ್ದರು
20 : ತಾಡಿಗೋಳ್ ಗ್ರಾಮದ ರೈತ ತಿಪ್ಪನ್ನ ತೋಟವನ್ನು ಕೃಷಿ ಕಲ್ಯಾಣ ಇಲಾಖೆ ನವದೆಹಲಿಯ ಸದಸ್ಯ ಕಾರ್ಯದರ್ಶಿ ಡಾ|| ಡಿ.ಜೆ.ಬ್ರಹ್ಮ ಪರೀಶಿಲಿಸುತ್ತಿರುವುದು, ಹಾಗೂ ಟಮೋಟೋಗಳನ್ನು ಪರಿಶೀಲಿಸುತ್ತಿರುವುದು