ಟೋಕಿಯೊ ಒಲಿಂಪಿಕ್ಸ್: ಗಾಲ್ಫ್ನಲ್ಲಿ ಕರ್ನಾಟಕದ ಅದಿತಿ ಅಶೋಕ್ಗೆ ಸ್ವಲ್ಪದರಲ್ಲೆ ತಪ್ಪಿತು ಕಂಚಿನ ಪದಕ

JANANUDI.COM NETWORK


ಟೋಕಿಯೋ ಒಲಿಂಪಿಕ್ಸ್ನಲ್ಲಿ ಯಾರೂ ನಿರೀಕ್ಷಿಸಿರದ ಗಾಲ್ಫ್ ಕ್ರೀಡೆಯಲ್ಲಿ, ಪ್ರಥಮ ಭಾರಿ ಸ್ಪರ್ಧೆಗೆ ಮಾಡಳಿದ ಅದಿತಿ ಅಶೋಕ್ ಭಾರತದ ಪರವಾಗಿ ಅಮೋಘ ಪ್ರದರ್ಶನ ನೀಡಿತಾದರೂ ಪದಕ ಗೆಲ್ಲುವಲ್ಲಿ ವಿಫಲವಾದರು.
ಆದರೆ ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಒಲಿಂಪಿಕ್ಸ್ನಲ್ಲಿ ಇತಿಹಾಸ ಬರೆದು ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು ಸ್ವಲ್ಪದರಲ್ಲೆ ಕಂಚಿನ ಪದಕ ಕೈತಪ್ಪಿದೆ.
ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಅದಿತಿ 3ನೇ ಸುತ್ತಿನ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದರು. ಶನಿವಾರ ನಡೆದ ಸುತ್ತಿನಲ್ಲಿ ಅದಿತಿ ಮೂರನೇ ಸ್ಥಾನ ಪಡೆದುಕೊಂಡರಾದರೂ ನ್ಯೂಜಿಲೆಂಡ್ನ ಲೈಡಿಯಾ ಕೊ ಜೊತೆ ಟೈ ಆಯಿತು. ಎರಡನೇ ಸ್ಥಾನದಲ್ಲಿ ಜಪಾನ್ ಹಾಗೂ ಮೂರನೇ ಸ್ಥಾನದಲ್ಲಿ ಅಮೆರಿಕಾ ಇತ್ತು. ಇದೇವೇಳೆ ಮಳೆ ಬಂದ ಪರಿಣಾಮ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು.
ಇದಕ್ಕೂ ಮೊದಲು ನಡೆದ ಮೊದಲೆರಡು ಸುತ್ತುಗಳಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದ ಅದಿತಿ, 18 ಹೋಲ್ಗಳ ಆಟದಲ್ಲಿ ಐದು ಬರ್ಡೀಸ್ ಅಂಕಗಳನ್ನು ಪಡೆದರು. ಒಟ್ಟು 71 ಯತ್ನಗಳೊಳಗೆ ಎಲ್ಲಾ 18 ಹೋಲ್ಗಳನ್ನು ಪೂರ್ಣಗೊಳಿಸಬೇಕು. ಅದಿತಿ ಮೊದಲ ಸುತ್ತಿನಲ್ಲಿ 67, 2ನೇ ಸುತ್ತಿನಲ್ಲಿ 66 ಹಾಗೂ 3ನೇ ಸುತ್ತಿನಲ್ಲಿ 68 ಯತ್ನಗಳಲ್ಲೇ 18 ಹೋಲ್ಗಳಿಗೆ ಚೆಂಡನ್ನು ಕಳುಹಿಸಿದರು. ಇಂತಹ ಆಟ ಪ್ರದರ್ಶಿಸಿದ ಅದಿತಿ ಅಶೋಕ್ ತಮಗೆ ಉಜ್ವಲ ಭವಿಸ್ಯ ಇದೆಯೆಂದು ಸಾಬಿತು ಮಾಡಿದರು.