ಶ್ರೀನಿವಾಸಪುರ : ಇಂದಿನ ಮಕ್ಕಳು ಪೌಷ್ಟಿಕ ಆಹಾರವಲ್ಲದ ಕುರುಕುರೆ, ಲೇಸ್,ಫಿಸ್ಜಾ, ಬರಗರ್ ದಂತಹ ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ಪೌಷ್ಟಿಕತೆ ಕಡಿಮೆಯಾಗುತ್ತಿದೆ. ಇದರಿಂದ ಪೌಷ್ಡಿಕತೆಗೆ ಸಂಬಂದಿಸಿದ ಕಾಯಿಲೆಗಳು ಇತ್ತಿಚಿಗೆ ಕಂಡು ಬರುತ್ತಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ತೆರ್ನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಅಜೀಂ ಪ್ರೇಮಜಿ ಪೌಡೇಶನ್ ಸಹಯೋಗದಲ್ಲಿ ವಾರದಲ್ಲಿ 6 ದಿನಗಳು ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಪೂರ್ವಜರು ಮಕ್ಕಳಿಗೆ ಮನೆಯಲ್ಲಿಯೇ ತಯಾರಿಸಿದ ರಾಗಿ ಮಾಲ್ಟ್ ಹಾಗು ಅಕ್ಕಿಯಲ್ಲಿ ಮಾಲ್ಟ್ , ಬೇಸಿದ ತರಕಾರಿಗನ್ನು ತಿನ್ನಿಸಿ ಆರೋಗ್ಯ ಹಾಗು ದೈಹಿಕವಾಗಿ ಪುಷ್ಟಿದಾಯಕವಾದ ಆಹಾರಗಳನ್ನು ಹಿರಿಯರ ಮಾರ್ಗದರ್ಶನದಲ್ಲಿ ಮನೆಯಲ್ಲಿ ತಯಾರಿಸಿ ತಿನ್ನುಸುತ್ತಿದ್ದರು ಇದರಿಂದ ನಾವೆಲ್ಲರೂ ಸಹ ಪುಷ್ಟಿದಾಯಕ ಆಹಾರವನ್ನು ತಿಂದು ಆರೋಗ್ಯವಾಗಿದ್ದೇವೆ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಸಿ.ಆರ್.ರಾಮಚಂದ್ರೇಗೌಡ, ಡಿವಿಜಿ ಮಂಜು, ಮಧ್ಯಾಹ್ನ ಬಿಸಿಯೂಟ ಶಿಕ್ಷಾಣಾಧಿಕಾರಿ ತಿಮ್ಮರಾಯಪ್ಪ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಅಕ್ಷರ ದಾಸೋಹ ಸಹಾಯಕ ನಿದೇರ್ಶಕಿ ಸುಲೋಚನ, ತಾ.ಪಂ ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಗ್ರಾ.ಪಂ. ಅಧ್ಯಕ್ಷೆ ಮಮತನಾರಾಯಣಸ್ವಾಮಿ, ಉಪಾಧ್ಯಕ್ಷ ವಿ.ನಾಗೇಶ್, ಮಾಸ್ತೇನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಯ್ಯಾರೆಡ್ಡಿ, ಉಪಾಧ್ಯಕ್ಷ ಎಲ್.ಆನಂದ್, ಕಾರ್ಯದರ್ಶಿ ಶಿವಣ್ಣ, ಖಾಜಾಂಚಿ ಎನ್.ವಿ.ವೇಣುಗೋಪಾಲ್, ನಿರ್ದೇಶಕ ರಘುನಾಥರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷ ರಾಧಕೃಷ್ಣ, ಟಿ.ಎಲ್.ದಿವಕಾರ್, ಶಾಲೆ ಮುಖ್ಯಶಿಕ್ಷಕ ಟಿ.ಎಲ್.ದಿವಕಾರ್, ಶಿಕ್ಷಕರಾದ ಲಕ್ಷ್ಮಿ, ಆಶಾ, ವೇಣುಗೋಪಾಲರೆಡ್ಡಿ, ಕಾಳಚಾರಿ ಇದ್ದರು.