ಇಂದು 28-8-21 ರಂದು ಬೀಜಾಡಿಯಲ್ಲಿ ಕೋವಿಡ್ ಲಸಿಕೆ

JANANUDI.COM NETWORK


ಬೀಜಾಡಿ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರು ಬೀಜಾಡಿ-ಗೋಪಾಡಿ ಮಿತ್ರ ಸಂಗಮದ ಸಾರಥ್ಯದಲ್ಲಿ ಆರೋಗ್ಯ ಇಲಾಖೆ, ಗ್ರಾಮ ಪಂಚಾಯತ್ ಬೀಜಾಡಿ ಇವರ ಆಶ್ರಯದಲ್ಲಿ ಬೀಜಾಡಿ ಮೂಡು ಶಾಲಾ ವಠಾರದಲ್ಲಿ
ದಲ್ಲಿ ಕೋವಿಡ್ ಲಸಿಕೆ ಶಿಬಿರ ಆ.28ರಂದು ಶನಿವಾರ ಬೆಳಿಗ್ಗೆಯಿಂದ ನಡೆಯಲಿದ್ದು, ಸುಮಾರು 300 ಡೋಸ್ ಲಸಿಕೆ ಲಭ್ಯವಿದ್ದು, 18 ವರ್ಷ ಮೇಲ್ಪಟ್ಟ ಪರಿಸರದ ಎಲ್ಲರೂ ಈ ಲಸಿಕೆ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದ್ದು, ಬೆಳಿಗ್ಗೆ 9 ಗಂಟೆಯಿಂದ ಟೋಕನ್ ನೀಡಲಾಗುವುದು. ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿದ್ದು, ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.