JANANUDI.COM NETWORK
ಕುಂದಾಪುರ ಡಿ. 22 : ಸಂತ ಜೋಸೆಫರ ಪ್ರೌಢಶಾಲೆಗೆ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಾನ್ಯ ಉಪನಿರ್ದೇಶಕರಾದ ಶ್ರೀ ಎನ್. ಎಚ್. ನಾಗೂರ ಇವರು ಭೇಟಿ ನೀಡಿದರು.(21-12-2021) ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಆರೋಗ್ಯ, ಶಿಕ್ಷಣದ ಮಹತ್ವ ಹಾಗೂ ಎಸೆಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತೆಯ ಬಗ್ಗೆ ಮಾತನಾಡಿದರು.
ಕೋವಿಡ್ 19 ರ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು, ಎಸೆಸೆಲ್ಸಿ ಪರೀಕ್ಷೆಯ ಬಗ್ಗೆ ಭಯ ಪಡಬಾರದು. ಪರೀಕ್ಷೆಗೆ ಓದಲು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದರು. ಶಾಲೆಗೆ ಬರುವಾಗ ಹಿಂದಿನ ದಿನದ ಅಭ್ಯಾಸ ಮಾಡುವುದು. ಶಿಕ್ಷಕರು ನೀಡಿದ ಮನೆಗೆಲಸ ಆ ದಿನವೇ ಮಾಡಬೇಕು. ತಂದೆತಾಯಿಗಳು ಪ್ರತ್ಯಕ್ಷ ದೇವರು. ಮಕ್ಕಳಾದ ನೀವು ಅವರನ್ನು ಗೌರವಿಸಬೇಕು. ಹಾಗೆಯೇ ಶಿಕ್ಷಕರನ್ನು ಗೌರವದಿಂದ ಕಾಣಬೇಕೆಂದು ತಿಳಿಸಿದರು.
ಕುಂದಾಪುರ ಕ್ಷೇತ್ರ ಶಿಕ್ಷಣ ಅಧಿಕಾರಿ ಕಚೇರಿ ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಶ್ರೀ ದತ್ತಾತ್ರೇಯ ನಾಯ್ಕ, ಸಮೂಹ ಸಂಪನ್ಮೂಲ ಸಮನ್ವಯ ಅಧಿಕಾರಿ ಶ್ರೀ ಸದಾನಂದ ಬೈಂದೂರು, ಪ್ರೌಢಶಾಲಾ ಸಹಾಯಕ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಐವಿ ಇವರು ಹಾಗೂ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.