ಸಂತ ಜೋಸೆಫ್ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಭ.ಕೀರ್ತನರಿಗೆ ನಿವ್ರತ್ತಿ ಬೀಳ್ಕೊಡುಗೆ ಅಭಿನಂದನ ಸಮಾರಂಭ

JANANUDI.COM NETWORK


ಕುಂದಾಪುರ,ಎ.5: 26: ಸುಧಿರ್ಘ 37 ವರ್ಷಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಿ ಇದೀಗ ಕುಂದಾಪುರ ಸಂತ ಜೋಸೆಫ್ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿಯಾಗಿ ಸೇವೆ ನೀಡಿ ನಿವ್ರತ್ತರಾದ ಭಗಿನಿ ಕೀರ್ತನ ಇವರಿಗೆ ಶಾಲಾ ಆಡಳಿತ ಮಂಡಳಿ, ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬಂದಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಸನ್ಮಾಸಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಆಶಿರ್ವಚಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ಸಿ.ಆರ್.ಪಿ ಸುನೀತಾ ಬಾಂಜ್ ಇವರು ಸಿಸ್ಟರ್ ಕೀರ್ತನ್ ಬಗ್ಗೆ ಮೆಚುಗೆಯ ಮಾತುಗಳನ್ನಾಡಿದರು.
“ಭಗಿನಿ ಕಿರ್ತನ್ ಹುಟ್ಟೂರು ಮಂಗಳೂರು, ಅವರು ಸಾಲ್ವೊದೋರ್ ಮತ್ತು ಎಫ್ರಿಜಿನ್ ರೇಗೊ ದಂಪತಿಯ ಮಗಳು, ಶಿಕ್ಷಕರಾಗಿ ಸೇವೆ ಸಲ್ಲಿಸುವ ನಿಸ್ವಾರ್ಥ ಮನಸ್ಸಿನಿಂದ ಟಿಸಿಎಚ್ ಮಾಡಿ ಬೆಳಗಾವಿಯ ಆಳ್ನಾವರದಲ್ಲಿ ಶಿಕ್ಷಕಿಯಾಗಿ ವ್ರತ್ತಿ ಜೀವನ ಆರಂಭಿಸಿದರು, ನಂತರ ಭಗಿನಿಯಾಗುವ ಸದುದ್ದೇಶದಿಂದ ಕಾರ್ಮೆಲ್ ಸಂಸ್ಥೆಗೆ ಸೇರಿ ಭಗಿನಿ ದೀಕ್ಷೆ ಪಡೆದರು. ಆಮೇಲೆ ಶಿಕ್ಷಕಿಯಾಗಿ ಮೇರಿ ಹೀಲ್ ನಲ್ಲಿ, ಸೈಂಟ್ ಆನ್ಸ್ ನಲ್ಲಿ, ಉಡುಪಿಯಲ್ಲಿ ಮುಂತಾದ ಕಡೆ ಸೇವೆ ಸಲ್ಲಿಸಿ, ಕುಂದಾಪುರದಲ್ಲಿ ಸುದೀರ್ಘ 13 ವರ್ಷ ಉತ್ತಮ ಮಟ್ಟದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ, ಅಷ್ಟು ಮಾತ್ರವಲ್ಲ ಅವರು ಸಂಗೀತ, ನಾಟಕ, ನ್ರತ್ಯ, ಹಾಡುಗಾರಿಕೆ, ತೋಟಗಾರಿಕೆ ಎಲ್ಲದರಲ್ಲೂ ಮುಂದು, ಕುಂದಾಪುರ ತಾಲೂಕಿನಲ್ಲಿಯೇ ಪ್ರಪ್ರಥವಾಗಿ ಶಾಲಾ ಬ್ಯಾಂಡನ್ನು ಆರಂಭಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಪುರಸ್ಕಾರ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆ ಆಗುವ ಹಾಗೇ ಮಾಡಿದ್ದಾರೆ, ಕುಂದಾಪುರ ತಾಲೂಕು ಮಟ್ಟದಲ್ಲಿ ಆಗುವಂತಹ ಪ್ರಜಾಪ್ರಭುತ್ವ, ಸ್ವಾತಂತ್ರ ದಿನಾಚರಣೆಗಳಿಗೆ ಸಂತ ಜೋಸೆಫರ ಬ್ಯಾಂಡ್ ಗೆ ಮೊದಲ ಪ್ರಾಶಸ್ಥ್ಯ ಹೀಗೆ ಸಂತ ಜೋಸೆಫ್ ಶಾಲೆಗೆ ಸಿಸ್ಟರ್ ಕೀರ್ತನ್ ಕೀರ್ತಿ ತಂದಿದ್ದಾರೆ” ಎಂದು ಕಾರ್ಯಕ್ರಮದ ಅಧ್ಯಕ್ಷೆ ಶಾಲಾ ಜಂಟಿ ಕಾರ್ಯದರ್ಶಿ ಭಗಿನಿ ಸಂಗೀತ ಭಿಗಿನಿ ಕೀರ್ತನರ ಪರಿಚಯ ನೀಡಿ ಶುಭ ಕೋರಿ
ಗಣ್ಯರೊಂದಿಗೆ ಸನ್ಮಾನಿಸಿದರು.


ಸನ್ಮಾನ ಸ್ವೀಕರಿಸಿದ ಸಿಸ್ಟರ್ ಕೀರ್ತನ್ “ನನ್ನ ಈ ಬಿಳ್ಕೋಡುಗೆ ಅಭಿನಂದನ ಕಾರ್ಯಕ್ರಮವನ್ನು ನಾನು ನನ್ನ ಜೀವಿತದಲ್ಲಿ ಮರೆಯುವುದಿಲ್ಲ. ಸರ್ಕಾರಿ ಸೇವೆಯಿಂದ ಮಾತ್ರ ನಿವ್ರತ್ತಿಯಾಗಿದ್ದೇನೆಯೇ ಹೊರತು, ಸೆವಾ ದ್ರಷ್ಟಿಯಿಂದ ಅಲ್ಲ, ಇನ್ನೂ ಮುಂದಕ್ಕೂ ಕಾರ್ಮೆಲ್ ಮೇಳದ ಭಗಿನಿಯರ ಜೊತೆ, ನನಗೆ ಕೊಡುವ ಜವಾಬ್ದಾರಿಯನ್ನು ನಿಭಾಯಿಸುತ್ತೆನೆ ಎನ್ನುತ್ತಾ, ಅಭಿನಂದನಾ ಕಾರ್ಯಕ್ರಮಕ್ಕಾಗಿ ಎಲ್ಲರಿಗೂ ಕ್ರತಜ್ನತೆಯನ್ನು ಸಲ್ಲಿಸಿ, ತಮಗೆ ಅಭಿನಂದನ ಕಾರ್ಯಕ್ರಮದ ವೇಳೆ ದೊರಕಿದ ಹಣವನ್ನು ಶಾಲೆಯ ಒಳಿತಿಗಾಗಿ ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.

.
ಸಹ ಶಿಕ್ಷಕಿ ಮರಿಯಾ ತೆರೆಜಾ ಮೆಂಡೊನ್ಸಾ ಅಭಿನಂದನ ಪತ್ರವನ್ನು ವಾಚಿಸಿದರು. ಭಗಿನಿ ಕೀರ್ತನ ಇವರ ತಮ್ಮ ಲ್ಯಾನ್ಸಿ ರೇಗೊ, ಸಂತ ಜೋಸೆಫ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಐವಿ. ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ತೆರೆಜಾ ಶಾಂತಿ, ಶಾಲಾ ಸಮಿತಿಯ ಜೋಯ್ ರೆಬೆಲ್ಲೊ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕಿರಣ್ ಪಾಯ್ಸ್, ಸಂತ ಜೋಸೆಫ್ ಪ್ರೌಢ ಶಾಲೆಯ ಶಿಕ್ಷಕಿ ಸರಸ್ವತಿ , ವಿದ್ಯಾರ್ಥಿನಿ ಶ್ರೀನಿಧಿ ತಮ್ಮ ಅನ್ನಿಸಿಕೆಯನ್ನು ಹಂಚಿಕೊಂಡರು. ಲೇಖಕ ಬರ್ನಾಡ್ ಡಿಕೋಸ್ತಾ, ರಚಿಸಿದ “ನಂದಾದೀಪ” ಕಿರು ನಾಟಕವನ್ನು ಮಕ್ಕಳು ಅಭಿನಯಿಸಿ ಸಿಸ್ಟರ್ ಕೀರ್ತನರಿಗೆ ಸಮರ್ಪಿಸಿದರು. ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಸಂತ ಜೋಸೆಫ್ ಪ್ರೌಢ ಶಾಲಾ ಶಿಕ್ಷಕ ಶಿಕ್ಷಕೇತರ ಸಿಬಂದಿ, ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಬಿಸಿಯೂಟ ಸಿಬಂದಿಗಳು, ಸಿಸ್ಟರ್ ಕೀರ್ತನರ ಕುಟುಂಬಸ್ಥರು ಉಪಸ್ಥಿತರಿದ್ದರು.
ಶಿಕ್ಷಕಿ ಧರ್ಮಭಗಿನಿ ನವಿತಾ ಸ್ವಾಗತಿಸಿದರು. ಶಿಕ್ಷಕ ಅನಿಲ್ ಪಾಯ್ಸ್ ನಿರೂಪಿಸಿದರು. ವನಿತಾ ಬಾರೆಟ್ಟೊ ಧನ್ಯವಾದಗಳನ್ನು ಅರ್ಪಿಸಿದರು.