ವಿದೇಶಿಯರನ್ನು ಸ್ಥಳಾಂತರ ಮಾಡಲು ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

JANANUDI.COM NETWORK

ಉಕ್ರೇನ್‌ ಮೇಲೆ ದಾಳಿ ಆರಂಭಿಸಿದ 10 ದಿನಗಳ ನಂತರ ಉಕ್ರೇನ್ ನಗರಗಳಾದ ಮರಿಯುಪೋಲ್ ಮತ್ತು ವೊಲ್ನೋವಾಖಾ ಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ. ಎಂದು ತಿಳಿದು ಬಂದಿದೆ./ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 11.30 ರಿಂದ ರಷ್ಯಾ ದಾಳಿಯನ್ನು ನಿಲ್ಲಿಸಿದೆ. ಆದರೆ ಈ ಕದನ ವಿರಾಮ ಕೆಲ ಗಂಟೆಗಳು ಜಾರಿಯಲ್ಲಿ ಇರುವುದೆಂದು ಸ್ಪಷ್ಟವಾಗಿ ತಿಳಿದು ಬಂದಿಲ್ಲ, ಸಂಜೆ ಮತ್ತೆ ಶುರುವಾಗುವ ಸಾಧ್ಯತೆಗಳಿವೆ. ಉಕ್ರೇನ್‌ನಲ್ಲಿರುವ ವಿದೇಶಿಯರನ್ನು ಸ್ಥಳಾಂತರ ಮಾಡಲು ಅನುಕೂಲವಾಗುವಂತೆ ಈ ಕದನ ವಿರಾಮ ಘೋಷಿಸಿರುವುದಾಗಿ ರಷ್ಯಾ ಹೇಳಿದೆ./ ಬೆಲರಸ್ ನಲ್ಲಿ ಉಕ್ರೇನ್ ನಿಯೋಗದೊಂದಿಗೆ ರಷ್ಯಾ ನಡೆಸಿದ ಮಾತುಕತೆ ವೇಳೆ ವಿದೇಶಿ ಪ್ರಜೆಗಳು ದೇಶದಿಂದ ನಿರ್ಗಮಿಸಲು ಅವಕಾಶ ಮಾಡಿಕೊಡುವ ಬಗ್ಗೆ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ಚರ್ಚೆಯಾಗಿತ್ತು ಎಂದು ರಷ್ಯಾ ಹೇಳಿಕೊಂಡಿದೆ.