ವಿಧಾನಪರಿಷತ್ ಸದಸ್ಯ ಎಂ.ನಾಗರಾಜ್ ಯಾದವ್‍ಅವರಿಗೆ
ಜಿಲ್ಲೆಯ ಯಾದವ ಸಮುದಾಯದ ಮುಖಂಡರ ಅಭಿನಂದನೆ

ಕೋಲಾರ:- ಕರ್ನಾಟಕ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಯಾದವ ಸಮುದಾಯದ ಹಿರಿಯ ಮುಖಂಡ ಎಂ.ನಾಗರಾಜ್ ಯಾದವ್ ಅವರನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಮತ್ತಿತರ ಸಮುದಾಯದ ಹಿರಿಯ ಮುಖಂಡರು ಭೇಟಿ ಮಾಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ್ ಯಾದವ್, ಹಿಂದುಳಿದ ಸಮುದಾಯದವನಾದ ನನಗೆ ಕಾಂಗ್ರೆಸ್ ಪಕ್ಷ ಅವಕಾಶ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದು, ಎಲ್ಲಾ ಶೋಷಿತ ಸಮುದಾಯಗಳ ಹಿತ ಕಾಯುವ ಹೊಣೆಗಾರಿಕೆ ನನಗಿದೆ ಎಂದು ತಿಳಿಸಿದರು.
ರಾಜ್ಯದ ಇಡೀ ಯಾದವ ಸಮುದಾಯ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದ ಅವರು, ಸಮುದಾಯದ ಹಿರಿಯರು ಶಿಕ್ಷಣಕ್ಕೆ ಒತ್ತು ನೀಡಬೇಕು, ಪ್ರತಿ ಮಗುವು ಓದಿನ ಕಡೆ ಗಮನಹರಿಸಲು ಆದ್ಯತೆ ನೀಡಬೇಕು ಎಂದರು.
ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಶುಭ ಹಾರೈಸಿ, ಎ.ಕೃಷ್ಣಪ್ಪ ಅವರ ನಂತರ ಸಮುದಾಯದ ಒಬ್ಬ ಹಿರಿಯರಿಗೆ ಇಂತಹ ಉತ್ತಮ ಅವಕಾಶ ಸಿಕ್ಕಿದ್ದು, ತಾವು ಮುಂದಿನ ದಿನಗಳಲ್ಲಿ ಸಚಿವರಾಗಿ ಮತ್ತಷ್ಟು ಉನ್ನತಿ ಸಾಧಿಸುವ ಮೂಲಕ ಸಮುದಾಯದ ಹಿತ ಕಾಯಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಕ್ಕಲೇರಿ ಗ್ರಾಮದವರಾದ ಉದ್ಯಮಿ ಕೆ.ನಾರಾಯಣ ಸ್ವಾಮಿ, ಶಾಂತ ಕುಮಾರ್ ಯಾದವ್, ವಕೀಲ ವೆಂಕಟರೆಡ್ಡಿ, ಹೊಸಕೋಟೆಯ ನಲ್ಲಾಲ್ ನಾಗೇಶ, ರಾಜ್ಯ ಯಾದವ ಸಂಘದ ಸದಸ್ಯರಾದ ಕೊಂಡರಾಜನಹಳ್ಳಿ ಶ್ರೀನಿವಾಸ್ ಯಾದವ್, ಕೋಲಾರ ಯಾದವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೊಂಡರಾಜನಹಳ್ಳಿ ಅಮರ್ ನಾಥ ಯಾದವ್, ಖಜಾಂಚಿ ಅಮ್ಮೆರಹಳ್ಳಿ ಮಂಜುನಾಥ್, ಯುವ ಮುಖಂಡರಾದ ಕಿಲಾರಿಪೇಟೆ ಕೃಷ್ಣ ಯಾದವ್,ಮಾಲೂರಿನ ವಿಜಯಕುಮಾರ್ ಕೋಡಿಕಣ್ಣೂರಿನ ಮಂಜುನಾಥ್, ಬಳ್ಳಾರಿಯ ಗುರುನಾಥ್, ವಕೀಲ ವೆಂಕಟೇಶ್ ಯಾದವ್, ತಿಮ್ಮಾರೆಡ್ಡಿ ಯಾದವ್, ಮಂಗಳೂರು ಅನಂತ ಕೃಷ್ಣ ಯಾದವ್ ಮತ್ತಿತರರು ಹಾಜರಿದ್ದರು.