ಶ್ರೀನಿವಾಸಪುರ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತ ಜೀವನ ನಡೆಸಲು ಹಾಗೂ ಆರೋಗ್ಯಕರ ಸಮಾಜ ಕಟ್ಟಲು ರಾಷ್ಟ್ರೀಯ ಸೇವಾ ಯೋಜನೆ ಪೂರಕ ವೇದಿಕೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಅಭಿಪ್ರಾಯಪಟ್ಟರು .
ಗೂರವಿಮಾಕಲಪಲ್ಲಿಯ ಸಪ್ಲಮ್ಮ ದೇವಸ್ಥಾನದಲ್ಲಿ ಶ್ರೀನಿವಾಸಪುರದ ಸರ್ಕಾರಿ ಪದವಿಪೂರ್ವ ಕಾಲೇಜುವತಿಯಿಂದ ನಡೆದ ಎನ್‍ಎಸ್‍ಎಸ್ ಶಿಬಿರದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳನ್ನು ಜೀವನದ ಉದ್ದಕ್ಕೂ ಪಾಲಿಸಬೇಕು. ಶಿಬಿರದಲ್ಲಿ ಕಲಿತುಕೊಂಡ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು ಸಂಸ್ಕಾರ ಹೆಚ್ಚಿಸುವಂತ ಮಾನವಿಯ ಮೌಲ್ಯಗಳನ್ನು ಅಳವಡಿಸಿಕಂಡಲ್ಲಿ ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದರು.
ವಿದ್ಯಾರ್ಥಿಗಳು ಸೇವಾಮನೋಬಾವನೆಯನ್ನು ಇಂತಹ ಶಿಬಿರಗಳಿಂದ ಬೆಳಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸೇವಾ ಮನೋಬಾವನೆಯೊಂದಿಗೆ ಗ್ರಾಮಕ್ಕೆ,ದೇಶಕ್ಕೆ ದಾರಿದೀಪವಾಗುವಂತೆ ನಡೆದುಕೊಳ್ಳಬೇಕು ಎಂದರು. ಹಾಗು ಶಿಬಿರಾರ್ಥಿಗಳು ಗ್ರಾಮದ ಜನರ ಮನಸಿನಲ್ಲಿ ಉಳಿಯುವತಂಹ ಕಾರ್ಯ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ನಾನು 40ವರ್ಷಗಳಿಂದ ನಾನು ಪ್ರತಿದಿನ ಯೋಗ ಮಾಡುತ್ತೇನೆ ನೀವು ಸಹ ಪ್ರತಿದಿನ ಯೋಗವನ್ನು ಮಾಡಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಬಿ.ವಿ.ಶಿವಾರೆಡ್ಡಿ, ಉಪ್ಪರಪಲ್ಲಿ ನಾರಾಯಣಸ್ವಾಮಿ, ಗೂರವಿಮಾಕಲಪಲ್ಲಿ ಶ್ರೀನಿವಾಸ್, ಬಾರ್ ನಾರಾಯಣಸ್ವಾಮಿ, ತೂಪಲ್ಲಿ ಮಧುಸೂದನರೆಡ್ಡಿ, ನಂಬುವಾರಿಪಲ್ಲಿ ಶಂಕರರೆಡ್ಡಿ, ಲಕ್ಷ್ಮೀಪುರ ಜಗದೀಶ್, ಪೂಲ್‍ಶಿವಾರೆಡ್ಡಿ, ಉಪನ್ಯಾಸಕರಾದ ಮಂಜುನಾಥರೆಡ್ಡಿ, ಶಿಕ್ಷಕರಾದ ಗೋಪಾಲ್, ಕಳಾಚಾರಿ ಇದ್ದರು.
ಪೋಟು 1 : ಗೂರವಿಮಾಕಲಪಲ್ಲಿಯ ಸಪ್ಲಮ್ಮ ದೇವಸ್ಥಾನದಲ್ಲಿ ಶ್ರೀನಿವಾಸಪುರದ ಸರ್ಕಾರಿ ಪದವಿಪೂರ್ವ ಕಾಲೇಜುವತಿಯಿಂದ ನಡೆದ ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗವಹಿಸಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿದರು.