ಶ್ರೀನಿವಾಸಪುರ, ಮೇ.13: ಮುಂಗಾರು ಮಳೆಗೆ ನಷ್ಟವಾಗಿರುವ ಮಾವು ಬೆಳೆ ವೀಕ್ಷಣೆ ಮಾಡಲು ವಿಶೇಷ ತಂಡ ರಚನೆ ಮಾಡಿ ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್ ಹಾವಳಿ ತಡೆಗಟ್ಟಲು ಆಗ್ರಹಿಸಿ ಮೇ.20 ರ ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ಮುತ್ತಿಗೆ ಹಾಕಲು ತೋಟಗಾರಿಕಾ ಕಚೇರಿ ಆವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ರೈತರು ಬೆವರು ಸುರಿಸಿ ಖಾಸಗಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಜೋಪಾನ ಮಾಡಿ ಕಾಪಾಡಿಕೊಂಡು ಬಂದಿದ್ದ ಮಾವಿನ ಪಸಲು ಒಂದೇ ರಾತ್ರಿಗೆ ಮುಂಗಾರು ಮಳೆ ಆರ್ಭಟಕ್ಕೆ ಕೈಗೆ ಬಂದ ಪಸಲು ನೀರಿನಲ್ಲಿ ಕೋಚ್ಚಿ ಹೋಗುವ ಮುಖಾಂತರ ರೈತರ ಬದುಕು ಬೀದಿಗೆ ಬಿದ್ದದ್ದರೂ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಮುಂಗಾರು ಮಳೆಯ ಗುಡುಗು ಸಿಡಿಲಿಗೆ ಭಯಪಟ್ಟು ನಾಪತ್ತೆ ಆಗಿದ್ದಾರೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್ಗೌಡ ಆರೋಪ ಮಾಡಿದರು.
ಪ್ರತಿ ವರ್ಷ ಪ್ರಕೃತಿ ವಿಕೋಪ ಸಾಂಕ್ರಾಮಿಕ ರೋಗಗಳು ಜೊತೆಗೆ ಮಾವುಗೆ ಬಾದಿಸುತ್ತಿರುವ ಚುಕ್ಕೆ ರೋಗ ನುಸಿ ಅಂಟು ರೋಗಕ್ಕೆ ಮಾವು ಪಸಲು ಸಂಪೂರ್ಣವಾಗಿ ನಾಶವಾಗುತ್ತಿದೆ ಅದರ ಜೊತೆಗೆ ಅಕಾಲಿಕ ಮುಂಗಾರು ಮಳೆ ರೈತರ ಬೆವರ ಹನಿಯನ್ನು ಕಸಿದು ಕಣ್ಣೀರಿನಲ್ಲಿ ತೊಳೆಯುವಂತೆ ಮಾಡುತ್ತಿದೆ ಜೊತೆಗೆ ಬೆಳೆ ನಷ್ಟವಾದಾಗ ನೆರವಿಗೆ ಬರಬೇಕಾಗಿದ್ದ ವಿಮಾ ಕಂಪನಿಗಳು ರೈತರಿಂದ ವಿಮೆ ಕಟ್ಟಿಸಿಕೊಂಡು ನಾಪತ್ತೆ ಆಗಲು ಅಧಿಕಾರಿಗಳೇ ನೇರ ಕುಮ್ಮಕ್ಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಾದ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ರೈತರ ವರ್ಷದ ಬೆವರ ಹನಿಗೆ ತಕ್ಕ ಪ್ರತಿಪಲ ಸಿಗಬೇಕಾದರೆ ಮಾರುಕಟ್ಟೆ ವ್ಯವಸ್ಥೆ ಸರಿ ಇರಬೇಕು ಆದರೆ ಬಿಸಿಲಿಗೆ ಬೆಂದಿಲ್ಲ ಬೆವರ ಹನಿ ಸುರಿದಿಲ್ಲ ಔಷಧಿ ಸಿಂಪಡಣೆ ಮಾಡಿಲ್ಲ ಆದರೆ ಮಾರುಕಟ್ಟೆಯಲ್ಲಿ 10 ನಿಮಿಷದ ವ್ಯಾಪಾರ ಮಾಡಿ ಹಣ ಕೊಡುವುದಕ್ಕೆ 10 ರೂ ಕಮೀಷನ್ ಪಡೆಯುತ್ತಿದ್ದರೂ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು ಇದ್ದು ಇಲ್ಲದಂತಾಗಿದ್ದಾರೆಂದು ಕಿಡಿ ಕಾರಿದರು.
ಪ್ರತಿ ವರ್ಷ ಮಾವು ಆರಂಭವಾದಾಗ ಜೀವನದ ಬುತ್ತಿ ತುಂಬಿಕೊಳ್ಳಲು ಕುಟುಂಬ ಸಮೇತ ಕೆಲಸ ಹರಿಸಿ ಬರುವ ಹೊರ ರಾಜ್ಯದ ಕಾರ್ಮಿಕರಿಗೆ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಆರೋಗ್ಯವಾಗಿ ಬಂದು ಆನಾರೋಗ್ಯವಾಗಿ ನರಳಬೇಕಾದ ಪರಿಸ್ಥಿತಿ ಮಾರುಕಟ್ಟೆಯಲ್ಲಿ ಇದೆ. ಮೂಲಭೂತ ಸೌಕರ್ಯಗಳಿಲ್ಲದೆ ಮಳೆ ಬಂದರೆ ಮಾರುಕಟ್ಟೆ ಕೆರೆಕುಂಟೆಯಾಗಿ ಮಾರ್ಪಡುವ ಜೊತೆಗೆ ಮಾವು ತಾಜ್ಯ ಸಮರ್ಪಕವಾಗಿ ನಿರ್ವಹಿಸದ ಕಾರಣ ಕೊಳತೆ ಸೊಳ್ಳೆಗಳು ಉತ್ಪತ್ತಿಯಾಗಿ ನಾನಾ ರೋಗಗಳಿಗೆ ಕಾರಣ ಆಗುತ್ತಿದ್ದರೂ ಅಧಿಕಾರಿಗಳು ಇದರ ಕಡೆ ಗಮನ ಹರಿಸದೆ ಮೌನ ಆಗಿರುವುದು ದುರದೃಷ್ಟಕರ ಎಂದು ದೂರಿದರು
ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕರಿಗೆ ಗುಣಮಟ್ಟದ ಊಟ ನೀರಿನ ವ್ಯವಸ್ಥೆ ಶೌಚಾಲಯ ಯಾವುದು ಇಲ್ಲ ಆದರೆ ದಿನದ 24 ಗಂಟೆಯಲ್ಲಿ ಮಾರುಕಟ್ಟೆಯಲ್ಲಿರುವ ಅಂಗಡಿಗಳಲ್ಲಿ ಮದ್ಯ ಮಾತ್ರ ದೊರೆಯುತ್ತದೆ ಅದಕ್ಕೆ ಅಧಿಕಾರಿಗಳು ಬೆಂಬಲ ನೀಡಿರುವುದು ಸತ್ಯದ ವಿಚಾರವಾಗಿದೆ.
ಮುಂಗಾರು ಮಳೆಗೆ ನಷ್ಟವಾಗಿರುವ ಮಾವು ಬೆಳೆ ವೀಕ್ಷಣೆ ಮಾಡಲು ವಿಶೇಷ ತಂಡ ರಚನೆ ಮಾಡಿ ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್ ಹಾವಳಿ ತಡೆಗಟ್ಟಲು ಆಗ್ರಹಿಸಿ ಮೇ.20 g ಸೋಮವಾರದಂದು ಕೃಷಿ ಉತ್ಪನ್ನ ಮಾರುಕಟ್ಟೆ ಮುತ್ತಿಗೆಹಾಕುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಹೋರಾಟಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ದೇವಂಡಹಳ್ಳಿ ರಾಜೇಂದ್ರ, ಆಲವಾಟ ಶಿವು, ತೆರ್ನಹಳ್ಳಿ ಲೋಕೇಶ್, ಸಹದೇವಣ್ಣ, ಮುನಿರಾಜು, ಶೇಕ್ಶಪಿಹುಲ್ಲಾ, ಪಾರುಕ್ಪಾಷ, ಬಂಗಾರಿಮಂಜು, ಭಾಸ್ಕರ್, ರಾಜೇಶ್, ವಿಜಯ್ಪಾಲ್, ದೇವರಾಜ್, ಮುಂತಾದವರಿದ್ದರು