ಕೋಲಾರ, ನ-15, ಆರ್.ಟಿ.ಓ ಕಛೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಖಾಯಂ ಆರ್.ಟಿ.ಓ ನೇಮಕ ಮಾಡಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಠಾಚಾರವನ್ನು ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಿ ಜನಪರ ಇಲಾಖೆಯಾಗಿ ಮಾರ್ಪಾಡು ಮಾಡಬೇಕೆಂದು ರೈತ ಸಂಘದಿಂದ ಆರ್.ಟಿ.ಓ ಕಛೇರಿ ಮುಂದ ಕೋಳಿಗಳ ಸಮೇತ ಹೋರಾಟ ಮಾಡಿ ಆರ್.ಟಿ.ಓ ಅಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ತೇಲಗಿ ಛಾಪಾಕಾಗದ ಹಗರಣದಂತೆ ಆರ್.ಟಿ.ಓ ಕಛೇರಿಯಲ್ಲಿ ಪ್ರತಿ ಹೆಜ್ಜೆ ಹೆಜ್ಜೆಗೂ ಭ್ರಷ್ಠಾಚಾರ ಲಂಚ ನೀಡಿದರೆ ಮಾತ್ರ ಡಿ.ಎಲ್. ಆರ್.ಸಿ. ಅರ್ಜಿ ವಿಲೇವಾರಿ ಇಲ್ಲವಾದರೆ ಟೇಬಲ್ ಮೇಲೆಯೇ ಕಡತ ಲಂಚ ನೀಡುವವರೆಗು ಕಡತಗಳು ಟೇಬಲ್ ಮೇಲೆ ದೂಳು ಹಿಡಿಯತ್ತಿವೆಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಚೇರಿಯ ಅವ್ಯವಸ್ಥೇಯ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಕಂದಾಯ ಮಂತ್ರಿಗಳ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬೋನೋಪೈಡ್ ಆಧರಿಸಿ ಟ್ರಾಕ್ಟರ್ಗಳ ನೊಂದಣಿ ಹಾಗೂ ಗುಜರಿ ಗಾಡಿಗಳಿಗೆ ಸ್ಥಳೀಯ ವಿಳಾಸವನ್ನು ಸೃಷ್ಟಿ ಮಾಡಿ ಸರ್ಕಾರಕ್ಕೆ ಕೋಟಿ ಕೋಟಿ ತೆರಿಗೆ ವಂಚನೆ ಮಾಡಿ ನೊಂದಣಿ ಮಾಡಿರುವ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಆರ್.ಟಿ.ಓ ರವರನ್ನು ಅಮಾನತ್ತು ಮಾಡಿ, ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಮತ್ತೆ ಇಲಾಖೆಯಲ್ಲಿ ಆರ್.ಟಿ.ಓ ಆಗಿ ಪ್ರಭಾರ ವಹಿಸಿಕೊಂಡಿರುವ ನಯಾಜ್ಪಾಷ ರವರು ಎಲ್ಲಾ ಅಧಿಕಾರಿಗಳ ಸಭೆ ಕರೆದು ಸರ್ಕಾರ ನಿಗಧಿ ಮಾಡಿರುವ ದರಕ್ಕಿಂತ ಹೆಚ್ಚಾಗಿ ಹಣ ನೀಡಿದರೆ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡದೆ ಕೆಲಸ ಮಾಡಿಕೊಡುವ ಆದೇಶ ಮಾಡಿರುವುದು ಇಲಾಖೆಯಲ್ಲಿ ಮತ್ತೆ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆಂದು ಆರೋಪ ಮಾಡಿದರು.
ಸರ್ಕಾರ ನಿಯಮದ ಪ್ರಕಾರ ಒಬ್ಬ ಹೆಚ್.ಕ್ಯೂ.ಎ.ಗೆ ಮೂರು ಕಛೇರಿಯ ಅದಿಕಾರ ನಿಡುವ ನಿಯಮ ವಿದೆಯೇ ಕೆ.ಜಿ.ಎಫ್ ಆರ್.ಟಿ.ಓ, ನಂಗಲಿ ಚೆಕ್ಪೋಸ್ಟ್ ಎ.ಆರ್.ಟಿ.ಓ , ಕೋಲಾರ ಆರ್.ಟಿ.ಒ ಆಗಿ ಪ್ರಭಾರರಾಗಿ ನೇಮಕ ಮಾಡಿರುವ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲವೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕೋಲಾರ ಆರ್.ಟಿ.ಓ, ಕಛೇರಿಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಖಾಯಂ ಆರ್.ಟಿ.ಓ ರವರನ್ನು ನೇಮಕ ಮಾಡಲೇಬೇಕು ಒತ್ತಾಯಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಾತನಾಡಿ ಈಗ ಪ್ರಭಾರರಾಗಿರುವ ಆರ್.ಟಿ.ಓ ಇಲಾಖೆಯಲ್ಲಿ ಟ್ರಾನ್ಸ್ಫರ್ ಆಫ್ ಒನರ್ಶೀಪ್ಗೆ (ಟಿ.ಓ) 200 ಲಂಚ ಇದ್ದು, ಈಗ 500 ರೂಗಳಾಗಿವೆ. ಡ್ಯೂಪ್ಲಿಕೇಟ್ ಆಸ್ತಿಗೆ 500 ಈಗ 1500 ಆಗಿದೆ. ಬೇರೆ ರಾಜ್ಯದ ವಾಹನಗಳ ನೊಂದಣಿಗೆ ರೂ/ 500 /- 1500/-, ಆರ್.ಸಿ.ಕಾರ್ಡ್ ಪ್ರಿಂಟ್ ಕೊಡಲು 100, ಹೆಚ್ಚಿಗೆ ನೀಡಿದರೆ ಒಂದೇ ದಿನದಲ್ಲಿ ಕಾರ್ಡ್ ನೀಡುತ್ತೇವೆಂದು ಅಧಿಕಾರಿಗಳಿಗೆ ಸೂಚಿಸಿರುವುದು ಯಾವ ನ್ಯಾಯ. ಇದು ಕೆ.ಜಿ.ಎಫ್ ಆರ್.ಟಿ.ಓ ಅಲ್ಲ ಕೋಲಾರ ನೀವು ಪ್ರತಿಯೊಂದಕ್ಕೂ ಹಣ ನೀಡಲೇ ಬೇಕು. ಇಲ್ಲವಾದರೆ ಯಾವುದೇ ಕಡತ ಟೇಬಲ್ನಿಂದ ಮುಂದೆ ಕದಲುವುದಿಲ್ಲವೆಂದು ಹೇಳಿಕೆ ನೀಡಿರವುದು ಯಾವ ನ್ಯಾಯ. ಜೊತೆಗೆ ಇಲಾಖೆಯಲ್ಲಿರುವ ಸಿ.ಸಿ. ಕ್ಯಾಮರ ಆರ್.ಟಿ.ಓ, ಖುರ್ಚಿ, ಕೆಳಗಡೆ ಇಟ್ಟುಕೊಂಡು ಬೇಕಾದಾಗ ಆಫ್ ಆನ್ ಮಾಡುತ್ತಿರುವುದು ಇಲಾಖೆಯಲ್ಲಿನ ಭ್ರಷ್ಟಾಚಾರತೆಗೆ ಉದಾರಣೆಯಾಗಿದೆಂದು ಆಕ್ರೋಷ ವ್ಯಕ್ತಪಡಿಸಿದರು.
ಒಂದು ಕಡೆ ಲಂಚ ಮತ್ತೊಂದ ಕಡೆ ಒಂದೇ ನಂಬರ್ನಲ್ಲಿ ಸಂಚಾರ ಮಾಡುತ್ತಿರುವ ಖಾಸಗಿ ಬಸ್ಸುಗಳ ಮಾಲೀಕರ ಜೊತೆ ಒಳ ಒಪ್ಪಂದ ಹಾಗೂ ಬಾರ ಮಿತಿ ಟಿಪ್ಪರ್ಗಳ ಓಡಾಟಕ್ಕೆ ಕಡಿವಾಣ ಹಾಕದೆ ತಮ್ಮ ಪ್ರತಾಪವನ್ನು ಚಿಕ್ಕಾಪುಟ್ಟ ತರಕಾರಿ ಸಾಗಾಣಿಕೆ ಮಾಡುವ ರೈತರ ಮೇಲೆ ತೋರಿಸುವ ಅಧಿಕಾರಿಗಳೇ ತಮ್ಮ ಪ್ರತಾಪವನ್ನು ನಕಲಿ ಬಸ್ಸುಗಳು ಹಾಗೂ ಟಿಪ್ಪರ್ಗಳ ಮೇಲೆ ತೋರಿಸಿ ಎಂದರು.
ಒಂದು ವಾರದಲ್ಲಿ ಆರ್.ಟಿ.ಓ ಕಛೇರಿಯಲ್ಲಿನ ಏಜೆಂಟರು ಹಾಗೂ ಲಂಚಕ್ಕೆ ಕಡಿವಾಣ ಹಾಕದೆ ಇದ್ದರೆ, ಸಾರಿಗೆ ಮಂತ್ರಿ ಮನೆ ಮುಂದೆ ಕುರಿಗಳ ಸಮೇತ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆರ್.ಟಿ.ಓ ಅಧಿಕಾರಿಗಳಾ ದೇವರಾಜ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಜೊತೆಗೆ ಏಜೆಂಟರ ಹಾವಳಿ ಇದೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ ಜಿ ಮಂಗಸಂದ್ರ ತಿಮ್ಮಣ್ಣ, ನರಸಿಂಹಯ್ಯ, ಶ್ರೀನಿವಾಸಪುರ ತಾ.ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಗಿರೀಶ್, ಮೂರಾಂಡಹಳ್ಳಿ ಶಿವಾರೆಡ್ಡಿ, ಚಂದ್ರಪ್ಪ, ಹೆಬ್ಬಣಿ ಆನಂದರೆಡ್ಡಿ, ಶೈಲಜ, ನಾಗರತ್ನ, ಚೌಡಮ್ಮ, ಮುಂತಾದವರು ಇದ್ದರು.