ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ,ಮಾ-5, ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ನಿರ್ಲಕ್ಷ ಮಾಡಿ ತಿರುಪತಿ ನಾಮ ಹಾಕಿರುವ ಸರ್ಕಾರದ ವಿರುದ್ದ ರೈತ ಸಂಘದಿಂದ ಗಾಂಧಿ ವೃತ್ತದಲ್ಲಿ ಮುಖ್ಯ ಮಂತ್ರಿ ಹಾಗೂ ಜನ ಪ್ರತಿನಿಧಿಗಳ ಪ್ರಕೃತಿ ದಹನ ಮಾಡುವ ಮುಖಾಂತರ ಆಕ್ರೋಷ ವ್ಯಕ್ತಪಡಿಸಿದರು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರಾಜ್ಯ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ಘೋಷಣೆ ಮಾಡುವ ಜೊತೆಗೆ ನೀರಾವರಿ ವಿಷಯ ಆಧಾರಿತ ಕೈಗಾರಿಕೆಗಳ ಮಾವು ಸಂಸ್ಕರಣ ಘಟಕಗಳು ರಸ್ತೆ, ಸರ್ಕಾರಿ ಶಾಲೆ, ಕೆರೆ, ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡುತ್ತಾರೆಂಬ ಭರವಸೆ ಹುಸಿಯಾಗಿದೆ. ಒಟ್ಟಾರೆಯಾಗಿ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯನ್ನು ಪ್ರತಿ ಬಜೆಟ್‍ನಂತೆ ಈ ಬಜೆಟ್‍ನಲ್ಲಿ ಸಂಪೂರ್ಣವಾಗಿ ಕರ್ನಾಟಕ ಭೂಪಟದಿಂದ ಕೈಬಿಟ್ಟಿರುವುದಕ್ಕೆ ಸರ್ಕಾರಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಬಜೆಟ್ ಪೂರ್ವಭಾವಿ ಸಭೆಗೆ ಮುಂಚಿತವಾಗಿ ಉಸ್ತುವಾರಿ ಸಚಿವರು ಸೇರಿದಂತೆ 6 ಶಾಸಕರು ಸಂಸದರು, ವಿಧಾನ ಪರಿಷತ್ ಸದಸ್ಯರು ಕೋಲಾರ ಜಿಲ್ಲೆಯ ಕುಂದು ಕೊರತೆ ಹಾಗೂ ಅನುದಾನಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಿಕೊಂಡು ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ರಾಜಕೀಯ ದ್ವೇಶದಿಂದ ಒಬ್ಬರ ಮೇಲೆ ಮತ್ತೊಬ್ಬರ ಆರೋಪ ಮಾಡಿಕೊಂಡು ಕೋಲಾರ ಜಿಲ್ಲೆಯನ್ನು ಬಜೆಟ್‍ನಲ್ಲಿ ಶೂನ್ಯ ಅನುದಾನ ಮಾಡುವ ಮುಖಾಂತರ ಉತ್ತರ ಕುಮಾರರ ಪೌರುಷ್ಯ ಜನ ಪ್ರತಿನಿಧಿಗಳು ತೋರಿಸುತ್ತಿದ್ದಾರೆ ಎಂದು ಜನ ಪ್ರತಿನಿಧಿಗಳ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಬಜೆಟ್‍ನಲ್ಲಿ ವಾಪಸ್ ಪಡೆಯುವ ಜೊತೆಗೆ ಮಾರುಕಟ್ಟೆಯ ಜಾಗದ ಸಮಸ್ಯೆ ಗಡಿಭಾಗದ ಕಾಡಾನೆಗಳ ಹಾವಳಿಗೆ ಆನೆ ಕಾರಿಡಾರ್ ವೈದ್ಯಕೀಯ ಕಾಲೇಜು, ಮಹಿಳೆಯರ ಮೇಲೆ ದೌರ್ಜನ್ಯ ತಡೆಗೆ ಕಾನೂನು ಹಾಗೂ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರ ರಕ್ಷಣೆಗೆ ಸರ್ಕಾರ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮತ್ತು ನಿರೀಕ್ಷೆ ಸಂಪೂರ್ಣವಾಗಿ ನಿರ್ಲಕ್ಷೆ ಹಾಗೂ ನಿರಾಸೆ ಮಾಡಿದ್ದು, ಒಟ್ಟಾರೆಯಾಗಿ ಕೋಲಾರ ಜಿಲ್ಲಾ ರೈತ, ದಲಿತ, ಕೂಲಿಕಾರ್ಮಿಕ, ವಿರೋಧಿ ಬಜೆಟ್ ಮಂಡನೆ ಮಾಡಿರುವುದಕ್ಕೆ ಅಸಮದಾನ ವ್ಯಕ್ತಪಡಿಸಿದರು.
ಪ್ರತಿ ಬಜೆಟ್‍ನಲ್ಲಿ ಕೋಲಾರ ಜಿಲ್ಲೆಯನ್ನು ನಿರ್ಲಕ್ಷೆ ಮಾಡುವ ಮೊದಲು ಜಿಲ್ಲೆಯನ್ನು ಆಂಧ್ರ ರಾಜ್ಯಕ್ಕೆ ಸೇರಿಸಿದರೆ ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳನ್ನದರೂ ಪಡೆಯಬಹುದು ಜಿಲ್ಲೆಯ ಜನರ ಪಾಲಿಗೆ ಇದ್ದು, ಇಲ್ಲದಂತಾಗಿದೆ. 6 ಜನ ಶಾಸಕರು, ಸಂಸದರು, ವಿಧಾನಸಭಾ ಸದಸ್ಯರು, ರಾಜಿನಾಮೆ ಕೊಟ್ಟು ಮನೆಗಳಿಗೆ ಹೋಗಲಿ ಎಂದು ಇಲ್ಲವಾದರೆ ಸಾರ್ವಜನಿಕ ಸಮಾರಂಭಗಳಲ್ಲಿ ಕಪ್ಪು ಮಸಿ ಬಳಿಯುವ ಎಚ್ಚರಿಕೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಜಿಲ್ಲಾ ಗೌರವಾಧ್ಯಕ್ಷ ಮಂಗಸಂದ್ರ ತಿಮ್ಮಣ್ಣ, ಕುವಣ್ಣ, ಗೋವಿಂದಪ್ಪ, ವೆಂಕಟೇಶಪ್ಪ, ಮರಗಲ್ ಮುನಿಯಪ್ಪ, ಮಾಸ್ತಿ ಹರೀಶ್, ಈಕಂಬಳ್ಳಿ ಮಂಜುನಾಥ್, ಚಂದ್ರಪ್ಪ, ಹೆಬ್ಬಣಿ ಆನಂದರೆಡ್ಡಿ, ಸಂದೀಪ್‍ಗೌಡ, ವೆಂಕಟರಾಮೇಗೌಡ, ಕಿರಣ್, ವೇಣುಗೋಪಾಲ್, ಸಂದೀಪ್, ಸುರೇಶ್‍ಬಾಬು, ಯಲ್ಲಪ್ಪ, ಮುದುವಾಡಿ ಚಂದ್ರಪ್ಪ, ರಾದಮ್ಮ, ವೆಂಕಟಮ್ಮ, ಸುಬ್ಬಕ್ಕ ಇನ್ನು ಮುಂತಾದವರು.