ಶ್ರೀನಿವಾಸಪುರ : ಪಟ್ಟಣದ ತಿಲಕ್ ರಸ್ತೆಯು ಒಂದು ರೀತಿಯಲ್ಲಿ ಸ್ಲಂ ಏರಿಯಾದಂತೆ ಇದ್ದು, ತಿಲಕ್ರಸ್ತೆ ಹಾಗು ಆಜಾದ್ರಸ್ತೆಗಳಲ್ಲಿ ಚರಂಡಿಗಳು ಸಂಪೂರ್ಣ ಕಸ ಕಡ್ಡಿಗಳಿಂದ ತುಂಬಿದ್ದು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದ ಕಾರಣ ನಿಂತಲ್ಲೇ ಚರಂಡಿ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ.
ಪುರಸಭೆಯ ಪಟ್ಟಣದ ವಾರ್ಡ್ ನಂಬರ್ 4 ರ ತಿಲಕ್ ರಸ್ತೆ . ವಾರ್ಡ್ ನಂಬರ್ 12 ರ ಆಜಾದ್ರಸ್ತೆಗಳಲ್ಲಿ ಚರಂಡಿಗಳ ಸ್ವಚ್ಚತೆ ಇಲ್ಲದೆ ಸೊಳ್ಳೆಗಳ ಕಾಟವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಭಾಗದ ಸಾರ್ವಜನಿಕರು ಜ್ವರ, ಡೆಂಗ್ಯು ಇತರೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ವಾಸಿಸುತ್ತಿರುವುದಾಗಿ ಜನಪ್ರತಿ ನಿದಿಗಳ ಹಾಗೂ ಪುರಸಭೆಯ ಮೇಲೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪುಟ್ಟ ಪುಟ್ಟ ಮಕ್ಕಳು ಆಟವಾಡಲು ಹೋದಾಗ ಪೋಷಕರು ಭಯಭೀತರಾಗುತ್ತಿದ್ದಾರೆ. ಚರಂಡಿ ಅವ್ಯವಸ್ಥೆ ಬಗ್ಗೆ ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ವಚ್ಚತೆ ಮಾಡುತ್ತಿಲ್ಲವೆಂದು ಸ್ಥಳೀಯ ಆರೋಪವಾಗಿದೆ ತಕ್ಷಣ ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಥಳೀಯ ಸಮಸ್ಯೆಯನ್ನು ಬಗಹರಿಸಬೇಕಿದೆ ಎಂದು ಸಾರ್ವಜನಿಕರ ಅಹವಾಲು.
ನೋಟ್ 1 : ನಮ್ಮದು ವಾರ್ಡ್ ನಂ. 4 ತಿಲಕ್ರಸ್ತೆಯಲ್ಲಿ ವಾಸಿಸುತ್ತಿದ್ದು, ಪುರಸಭೆ ಕಛೇರಿಗೆ ಅನೇಕ ಭಾರಿ ಮನವಿ ಸಲ್ಲಿದ್ದರೂ ಸಹ ಚರಂಡಿಗಳ ಸ್ವಚ್ಚತೆ ಹಾಗೂ ಇತರೆ ಮೂಲ ಭೂತ ಸೌಲಭ್ಯಗಳ ಬಗ್ಗೆ ಅಧಿಕಾರಿ ನಿರ್ಲಕ್ಷಿಸುತ್ತಿದ್ದಾರೆ . ಆನೇಕ ಬಾರಿ ಮನವಿ ಸಲ್ಲಿಸಿದರೂ ಬರುತ್ತಿಲ್ಲ ಎಂದು ಆರೋಪಿಸಿ, ಬಂದರೂ ಸಹ ನಮ್ಮ ಏರಿಯಾದ ಕಡೆ ಬರುತ್ತಿಲ್ಲ. ಬಂದು ಚರಂಡಿಯಿಂದ ಮೇಲೆ ಗಲೀಜು ಎತ್ತಿ ಹಾಕಿ ಹೋಗುತ್ತಾರೆ . ಪುನಃ ಅದನ್ನ ಸ್ವಚ್ಚತೆ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ಬೀಡಿಯಲ್ಲಿ ಅನೇಕ ಮಕ್ಕಳು ಜ್ವರಗಳಿಂದ ಭಾದಿಸುತ್ತಿದ್ದು ಪುರಸಭೆ ಹಾಗೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗಹರಿಸುವಂತೆ ಮನವಿ ಮಾಡಿದರು.
ಪಟ್ಟಾ ಕಿರಣ್ . ತಿಲಕ್ ರಸ್ತೆ. ಸ್ಥಳೀಯ ನಿವಾಸಿ .
ನೋಟ್ 2 : ಕಾಲುವೆಗಳು ತುಂಬಿ ಹುಳಗಳು ಆಚೆ ಬರುತ್ತಿದೆ. ಅಲ್ಲದೆ ಹಾವುಗಳ ಕಾಟುವು ಹೆಚ್ಚಾಗಿದೆ. ಸೊಳ್ಳೆಕಾಟವು ಹೆಚ್ಚಾಗಿದ್ದು, ಒಂದು ಕಡೆ ಸೊಳ್ಳಗಳ ಕಾಟ, ಇನ್ನೋಂದಡೆ ಹಾವುಗಳ ಕಾಟವು ಹೆಚ್ಚಾಗಿದೆ. ಮಕ್ಕಳ ಸಂಖ್ಯೆ ಈ ಬೀದಿಯಲ್ಲಿ ಜಾಸ್ತಿ ಇದ್ದು ಇದರಿಂದ ಮಕ್ಕಳ ಪೋಷಕರು ರೋಗಗಳ ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ನನ್ನ ತಮ್ಮನಿಗೂ ಡೆಂಘ್ಯು ಜ್ವರದಿಂದ ಭಾದಿಸುತ್ತಿದ್ದೇನೆ ಈ ಗಾಗಲೇ 10 ಸಾವಿರ ಮೇಲ್ಪಟ್ಟು ಆಸ್ಪತ್ರೆ ಖರ್ಚು ಆಗಿದೆ. ಗುರುವಾರವೂ ಸಹ ಪುರಸಭೆ ಕಛೇರಿಗೆ ಮನವಿ ಸಲ್ಲಿಸಲಾಯಿತು . ಆದರೂ ಇನ್ನು ಬಂದಿಲ್ಲ ಎಂದು ಅಳಲನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು.
ಸಲೀಮ್ , ತಿಲಕ್ ರಸ್ತೆ . ಸ್ಥಳೀಯ ನಿವಾಸಿ