ಕೇರಳಕ್ಕೆ ಮುಟ್ಟಿದ ತೌಕ್ತೆ ಚಂಡಮಾರುತ, ಬಿರುಗಾಳಿ ಮಳೆಗೆ ಉರುಳಿದವು ಮರಗಳು- ರಾತ್ರಿ ದಕ್ಷಿಣ ಕನ್ನಡಕ್ಕೆ ಅಪ್ಪಳಿಕೆ.

JANANUDI.COM NETWORK

ಚಿತ್ರ ಸಕಾಲಿಕ ಕ್ರಪೆಯಿಂದ


ಕೊಲ್ಲಂ:ಮೇ.13 ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿ ಎದ್ದ ಚಂಡ ಮಾರುತಕ್ಕೆ ತೌಕ್ತೆ ಚಂಡಮಾರುತ ಎಂದು ಹೆಸರಿಸಿದ್ದು, ಅದು ಕೇರಳಕ್ಕೆ ತಲುಪಿದ್ದು, ಅಬ್ಬರಿಸಲು ಆರಂಭಿಸಿದೆ.
ಈ ಚಂಡಮಾರುತದಿಂದ ಕೇರಳದ ಕೊಲ್ಲಂನ ಶಕ್ತಿಕುಂಗರದ ಬಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪ ಬೃಹತ್ ಮರಗಳು ಗಾಳಿಯ ವೇಗಕ್ಕೆ ಉರುಳಿ ಬಿದ್ದಿವೆ, ಅದರ ಪರಿಣಾಮವಾಗಿ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ ಎಂದು ತಿಳಿದು ಬಂದಿದೆ.
ಅಲ್ಲದೆ ಕೇರಳದಲ್ಲಿ ಭಾರೀ ಮಳೆ ಆರಂಭಗೊಂಡಿದ್ದು, ನಾಳೆ ಮುಂಜಾನೆಯ ವೇಳೆಗೆ ಚಂಡಮಾರುತ ಕರ್ನಾಟಕದಲ್ಲಿಯೂ ಬೀಸಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಹೇಳಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ರಾತ್ರಿಯೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲವಾದ ಗಾಳಿ ಬೀಸಲು ಆರಂಭವಾಗಿದೆಯೆಂದು ತಿಳಿದು ಬಂದಿದೆ.