ಮಂಗಳೂರಿನಲ್ಲಿ ಮೂರು ದಿನಗಳ ಬೈಬಲ್ ಪ್ರದರ್ಶನ: ಬೈಬಲ್ ವಿದ್ವಾಂಸ ಡಾ| ವಿಲಿಯಂ ಬರ್ಬೋಜಾರಿಂದ ಉದ್ಘಾಟನೆ

ವರದಿ: ವಂದನೀಯ ಅನಿಲ್ ಫೆನಾರ್ಂಡಿಸ್, ಚಿತ್ರಗಳು: ಸ್ಟ್ಯಾನ್ಲಿಡಿಕುನ್ಹಾ ಬಂಟ್ವಾಳ


ಮಂಗಳೂರು, ಜ 26: “’ಬೈಬಲ್ ಆಲಿಸಿ, ಬೈಬಲ್ ಓದಿ, ಬೈಬಲ್ ಅಧ್ಯಯನ ಮಾಡಿ, ಬೈಬಲ್‍ನಲ್ಲಿ ಪ್ರಾರ್ಥಿಸಿ ಮತ್ತು ಬೈಬಲ್‍ನ್ನೇ ಜೀವಿಸಿ.’ ಸುಮಾರು 40 ವರ್ಷಗಳ ಹಿಂದೆ ಮಂಗಳೂರು ಬಂದರಿಗೆ ಬಂದ ಲೋಗೋಸ್ ಶಿಪ್‍ನಲ್ಲಿ ಸೆಟ್ ಮಾಡಿದ ಬೈಬಲ್ ಲೈಬ್ರರಿಯಲ್ಲಿ ಕೇಳಿದ ಈ ಸುಂದರವಾದ ಪದಗಳು ನನಗೆ ನೆನಪಿಗೆ ಬರುತ್ತವೆ. ಈ ಮಾತುಗಳು ಖಂಡಿತವಾಗಿಯೂ ನಮ್ಮಜೀವನವನ್ನು ಸಮೃದ್ಧಗೊಳಿಸುತ್ತದೆ,”ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತಧರ್ಮಗುರು ಮತ್ತುಇಂಗ್ಲಿμï ಹೊಸ ಒಡಂಬಡಿಕೆಯನ್ನುಕೊಂಕಣಿ ಭಾμÉಗೆ ಭಾμÁಂತರಿಸಿ ವಂದನೀಯಡಾ. ವಿಲಿಯಂಬರ್ಬೋಜಾ ಹೇಳಿದರು. ಅವರುಗುರುವಾರ, ಜನವರಿ 26, 2023 ರಂದು ಮಂಗಳೂರಿನ ಜೆಪ್ಪುವಿನ ಸಂತಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್ ಪ್ರದರ್ಶನದಉದ್ಘಾಟನಾ ಸಮಾರಂಭದ ಮುಖ್ಯಅತಿಥಿಯಾಗಿ ಮಾತನಾಡಿದರು.
ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತುಕಿರುಕ್ರೈಸ್ತ ಸಮುದಾಯದ ಆಯೋಗಗಳ ಸಹಯೋಗದಲ್ಲಿಸಂತಅಂತೋನಿ ಆಶ್ರಮ, ಸಂತಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್‍ಗÀಳು ಜಂಟಿಯಾಗಿ ನಗರದಜೆಪ್ಪು, ಸಂತಅಂತೋನಿ ಆಶ್ರಮದಲ್ಲಿಜನವರಿ 26 ರಿಂದ 28ರ ಸಂಜೆಯವರೆಗೆ ಪ್ರದರ್ಶನವನ್ನುಆಯೋಜಿಸಲಾಗಿದೆ.
ಸಂತಅಂತೋನಿ ದತ್ತಿ ಸಂಸ್ಥೆಗಳ ಸಂಚಾಲಕ ಹಾಗೂ ವಸ್ತುಪ್ರದರ್ಶನದ ಸಂಚಾಲಕ ವಂದನೀಯಜೆ.ಬಿ.ಕ್ರಾಸ್ತಾ, ಜೆಪ್ಪುವಿನ ಸೇಂಟ್‍ಜೋಸೆಫ್ ಸೆಮಿನರಿಯರೆಕ್ಟರ್ ವಂದನೀಯಡಾ.ರೊನಾಲ್ಡ್ ಸೆರಾವೊ, ಸಣ್ಣಕ್ರೈಸ್ತ ಸಮುದಾಯದ ಸಂಚಾಲಕ ವಂದನೀಯಜೋಕಿಮ್ ಫೆನಾರ್ಂಡಿಸ್, ಕೆನರಾಕಮ್ಯುನಿಕೇಷನ್ ಸೆಂಟರ್ ನಿರ್ದೇಶಕವಂದನೀಯಅನಿಲ್ ಫೆನಾರ್ಂಡಿಸ್, ಧರ್ಮಕ್ಷೆತ್ರದ ಸುವಾರ್ತ ಪ್ರಸಾರಆಯೋಗದ ಕಾರ್ಯದರ್ಶಿ ಮತ್ತುಕಾರ್ಯಕ್ರಮದ ಸಂಯೋಜಕವಂದನೀಯರೂಪೇಶ್‍ತಾವ್ರೊ, ಸಂತಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ವಂದನೀಯ ಲ್ಯಾರಿ ಪಿಂಟೊ, ಮತ್ತು ಮತ್ತುಆರ್ಸುಲಾಯ್ನ್ ಸಿ| ಡೋರೀನ್ ಹಾಗೂ ಅನೇಕ ಧಾರ್ಮಿಕ ಸಹೋದರಿಯರು, ಯುವಜನರು ಮತ್ತು ಸಂತಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.
ಬೈಬಲ್ ಗ್ರಂಥವನ್ನು ವಿಶೇಷ ಗೌರವದೊಂದಿಗೆಪ್ರಾರ್ಥನಾ ಮಂದಿರದಿಂದ ಪ್ರದರ್ಶನ ಸಭಾಂಗಣದವರೆಗೆ ಮೆರವಣಿಗೆಯಲ್ಲಿತರಲಾಯಿತು. ವಂದನೀಯಡಾ. ರೊನಾಲ್ಡ್ ಸೆರಾವೊ, ವಂದನೀಯಡಾ. ವಿಲಿಯಂ ಬರ್ಬೋಜಾ ಮತ್ತುವಂದನೀಯಜೆ.ಬಿ ಕ್ರಾಸ್ತಾಅವರು ಬೈಬಲ್‍ಗೆ ಹಾರಾರ್ಪಣೆಗೈದು,ಧೂಪ ಹಾಕಿ ಗೌರವಿಸಿದರು ಮತ್ತು ಪ್ರದರ್ಶನದಆವರಣವನ್ನು ಪವಿತ್ರಜಲದಿಂದ ಆಶೀರ್ವದಿಸಿದರು. ಈ ಸಂದರ್ಭ ಪ್ರಾರ್ಥನೆಯ ಮೂಲಕ ಬೈಬಲ್‍ನಒಂದು ಭಾಗವನ್ನುಓದಲಾಯಿತು.
ಸಹಾಯಕ ನಿರ್ದೇಶಕರಾದವಂದನೀಯ ಲ್ಯಾರಿ ಪಿಂಟೋ ಮಾತನಾಡಿ, “ಕಥೊಲಿಕಕ್ರೈಸ್ತರ ಪೂಜಾವಿಧಿಯಕ್ಯಾಲೆಂಡರ್‍ನ ಮೂರನೇ ಭಾನುವಾರ- ಈ ವರ್ಷಜನವರಿ 22 ರಂದುಸಾರ್ವತ್ರಿಕವಾಗಿಆಚರಿಸಲಾದ ‘ಬೈಬಲ್ ಭಾನುವಾರ’ದ ಪ್ರಯುಕ್ತಹಾಗೂ ಸಂತಆಂತೋನಿ ಆಶ್ರಮದ 125 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿಈ ಪ್ರದರ್ಶನವನ್ನುಆಯೋಜಿಸಲಾಗಿದೆ” ಎಂದರು.
ವಂದನೀಯಜೆ. ಬಿ. ಕ್ರಾಸ್ತರವರು ಮುಖ್ಯ ಆತ್ತಿಥಿಗಳನ್ನು ಸ್ವ್ವಾಗತಿಸಿದರು. ಈ ಸಂಧರ್ಭ ಬೈಬಲನ್ನುಕೊಂಕಣಿಗೆ ಭಾಶಾಂತರಿಸಲುಜೀವನಪೂರ್ತಿ ಶ್ರಮಿಸಿದ ವಂದನಿಯಡಾ. ವಿಲಿಯಂ ಬರ್ಬೊಜಾರವನ್ನು ಅಭಿನಂದಿಸಿ ಗೌರವಿಸಿದರು.
ಈ ಪ್ರದರ್ಶನವು ಪವಿತ್ರಗ್ರಂಥದ ಸಾರ್ವಜನಿಕಓದುವಿಕೆ, ಬೈಬಲ್ ಕಲೆ, ಚಿತ್ರಕಲೆ, ವಿಡಿಯೋ ಪ್ರಸ್ತುತಿ, ರಸಪ್ರಶ್ನೆ, ಹಾಡುಗಳು, ಸ್ಕಿಟ್‍ಗಳು ಮತ್ತು ನೃತ್ಯಗಳನ್ನು ಒಳಗೊಂಡಿದೆ ಹಾಗೂ ಬೈಬಲ್‍ಗಳು ಮತ್ತುಇತರಧಾರ್ಮಿಕವಸ್ತುಗಳು ಮಾರಾಟಕ್ಕೆಲಬ್ಯವಿದೆ. ಕೆನರಾ ಸಂಪರ್ಕಕೇಂದ್ರದ ವತಿಯಿಂದ 30 ನಿಮಿಷಗಳ ಬೈಬಲ್ ಸಾಂದರ್ಬಿಕಕಿರುಚಿತ್ರವನ್ನು ಪ್ರದರ್ಶಿಸಲಾಗುವುದುಎಂದುವಂದನೀಯರೂಪೇಶ್ ಹೇಳಿದರು. ತಿಳಿಸಿದರು.
ಸ್ವಯಂಸೇವಕರಲ್ಲಿಒಬ್ಬರಾದ ಶ್ರೀಮತಿ ಟ್ರೆಸ್ಸಿ ಡಿಸೋಜಾ, “ದೇವರ ವಾಕ್ಯವನ್ನುಓದುವ, ಅದನ್ನು ಪ್ರೀತಿಸುವ ಮತ್ತುಅದರಂತೆ ಬದುಕುವವರ ಸೇವೆಯಲ್ಲಿರಲು ಸಂತೋಷವಾಗಿದೆ. ಬೈಬಲ್‍ಗಳು ಪ್ರತಿಯೊಬ್ಬರ ಕೈ, ಹೃದಯ ಮತ್ತು ಮನೆಯನ್ನುತಲುಪಲಿ ಎಂದು ನಾನು ಪ್ರಾರ್ಥಿಸುತ್ತೇನೆÉ! ಬೈಬಲ್‍ನ ವಿವಿಧ ಆವೃತ್ತಿಗಳ ಅಂತಹಅದ್ಭುತ ಸಂಗ್ರಹವನ್ನು ನಾನು ನೋಡಿಲ್ಲ. ಅತ್ಯಂತಉತ್ತಮವಾಗಿಆಯೋಜಿಸಲಾಗಿದೆ”ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ಪ್ರದರ್ಶನದಲ್ಲಿ ಬೈಬಲ್ ವ್ಯಾಖ್ಯಾನಗಳು, ಕೈಬರಹದ ಬೈಬಲ್‍ಗಳು, ದೊಡ್ಡಗಾತ್ರದ ಬೈಬಲ್, ಬೈಬಲ್ ಕಲೆ, ಬೈಬಲ್ ಚಿತ್ರಗಳು, ಪ್ರತಿಮಾಶಾಸ್ತ್ರ, ಭಾರತೀಯ ಕಲೆ ಮತ್ತು ಬೈಬಲ್ ಇತಿಹಾಸಗಳ ಪ್ರದರ್ಶನ ಸೇರಿದಂತೆ ಪ್ರಾದೇಶಿಕ ಮತ್ತು ಸ್ಥಳೀಯ ಭಾμÉಗಳನ್ನು ಒಳಗೊಂಡ ಬೈಬಲ್ ಪ್ರತಿಗಳ ವಿಭಿನ್ನ ಅನುವಾದಗಳನ್ನು ಪ್ರದರ್ಶಿಸಿತು ಹಾಗೂ ಪದ್ಯಗಳು, ಬೈಬಲ್ ವರ್ಣಚಿತ್ರಗಳು ಮತ್ತು ಪ್ರಮುಖ ಬೈಬಲ್ ಘಟನೆಗಳ ಪ್ರದರ್ಶನ ಮೆರಗನ್ನು ನೀಡುತಿತ್ತು.
ಪ್ರದರ್ಶನವುಎಲ್ಲಾ ಮೂರು ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆತೆರೆದಿರುತ್ತದೆ. ಪ್ರತಿದಿನ ಸಂಜೆ 4.30ರಿಂದ 7ರವರೆಗೆ ಬೈಬಲ್ ಸಾಂಸ್ಕøತಿಕಕಾರ್ಯಕ್ರಮ ನಡೆಯಲಿದೆ. ಇದೇಜನವರಿ 28ರ ಶನಿವಾರ ಸಂಜೆ 6 ಗಂಟೆಗೆ ಸಮಾರೋಪಕಾರ್ಯಕ್ರಮವನ್ನುಆಯೋಜಿಸ¯ದೆ, ಎಂದು ಸಂಘಟಕರು ತಿಳಿಸಿದರು.

ಮಾಧ್ಯಮ ಮತ್ತು ಪ್ರಚಾರ:ಕೆನರಾ ಸಂಪರ್ಕಕೇಂದ್ರ, ಮಂಗಳೂರು 8277937790
ಸಂಪರ್ಕಿಸಿ:
ವಂದನೀಯ. ಜೆ. ಬಿ ಕ್ರಾಸ್ತಾ, ಸಂಚಾಲಕರು–ಮೊ: 9448724276
ವಂದನೀಯರೂಪೇಶ್‍ತೌರೊ, ಕಾರ್ಯಕ್ರಮ ಸಂಯೋಜಕರು–ಮೊ: 8762784733
ವಂದನೀಯ ಲ್ಯಾರಿ ಪಿಂಟೋ, ಕಾರ್ಯಕ್ರಮ ಸಂಯೋಜಕರು–ಮೊ: 9611502489